ಹಗಲು ಇರುಳೆನ್ನದೆ ಸಾಗುತಿದೆ ಬದುಕು ಎಷ್ಟು ದುಡಿದರೂ ದುಡಿಮೆ ಸಾಲದು ಅದಕೂ ಇದಕೂ ದುಡಿಯುವವ ಒಬ್ಬ ತಿನ್ನುವ ಕೈಗಳು ಹತ್ತು ಶ್ರಮಕ್ಕೆ ತಕ್ಕ ಫಲ ಪ್ರತಿಭೆಗೆ ತಕ್ಕ ಪುರಸ್ಕಾರ ಮರಳುಗಾಡಿನ ಮರೀಚಿಕೆ ಶೋಷಿತ ಸಮಾಜದ ಅಡಿಗಲು ಪೆಟ್ಟು ತಿನ್ನದ ಬದುಕುಳ...

ಇದುವೇ ಪಾಪಿಯ ಯಮಲೋಕ ! ಭಾವಿಕರೆಂಬರು ಭೂಲೋಕ ! ದೈತ್ಯರೆಂಬವರ ಕರೆಕಳಿಸಿ ಹೊಟ್ಟೆಗೆಂಬವರ ಹಿಡಿದೆಳಿಸಿ ಮುಟ್ಟದೆ ಮೈದೊಗಲನು ಸುಲಿಸಿ ಕಟ್ಟಿಗೆಯಿಲ್ಲದೆ ಕರುಳನು ಸುಡಿಸಿ ಇದುವೇ ಪಾಪಿಯ ಯಮಲೋಕ ! ಭಾವಿಕರೆಂಬರು ಭೂಲೋಕ ! ಒಕ್ಕಲಮಕ್ಕಳ ಹಿಡಿದೆಳೆದು ...

ನಿನ್ನ ಅರಸಿ ಎಲ್ಲೆಲ್ಲೇ ತಿರುಗಾಡಿದೆ, ನೀ ಮಾತ್ರ ನನ್ನ ಅಂಗಳದ ರಂಗೋಲಿಯಲಿ ಅರಳಿದೆ. ಚುಕ್ಕಿ ಚಂದ್ರಮ ಬೆಳಕು ಆಕಾಶದಲಿ ಅರಸಿದೆ, ನೀ ಮನೆಯ ಮುಂದಿನ ಇಬ್ಬನಿಯಲಿ ಪ್ರತಿಬಿಂಬಿಸಿದೆ. ಬಯಲ ಗಾಳಿ ನದಿ ಹಳ್ಳಕೊಳ್ಳದಲಿ ಮಿಂದ ನೀ ಅಮ್ಮನ ಸುರಿಯುವ ಹಾಲಿ...

ಗೋಧೂಳಿ ನಗಿಯಾಗ ಬೆಳ್ಳಿ ಚುಕ್ಕಿ ಹಾಡೋ ಹಾಡಿಗೆ ತೂಗ್ಯಾವೊ ಭೂಮಿ ತಾಯ ಒಡಲು ಒಡಲ ದನಿಯ ಕೇಳಿ ಮುಗಿಲ ಮಾಳಿಗೆಯ ಹತ್ತಿ ಇಳಿದು ಗಿಡ ಹೂ ಚಿಗುರಿ ಬಳುಕಿ ಹಾವು ಬಳ್ಳಿ ಆಗಸವ ಮುಟ್ಟಿ ತಾರೆ ಜೋಡಿ ಮೋಡಿ ಮಾಡಿ ಹನಿದಾವು ಮುತ್ತುಗಳ ಸಾಲು ಸಾಲು ತೆರೆದು ...

ಮಾನವನಿಗೆ ಭ್ರಮೆ ನಿತ್ಯ ಕಾಡುತ್ತಿದೆ ದೇವರನ್ನು ಮರೆತು ಭ್ರಾಂತಿಯಲ್ಲಿದಾನೆ ಪರಮಾತ್ಮನ ನಿಸರ್ಗದಲ್ಲಿ ಬಾಳೀತನು ಭಗವನಂತಗೆ ಅಪಚಾರ ಎಸಗಿದ್ದಾನೆ ಈ ಭುವಿಗೆ ನಾವು ಬಂದು ಕೆಲ ವರುಷವು ಆದರೆ ಈ ಬುವಿ ಎಂದರೆ ನಮಗೆ ಹರುಷ ಪೂರ್ವ ಜನುಮಗಳ ಮರೆತ ನಾವು ...

ನನ್ನ ಮಿದುಳು ದಳವೇರಿ ದಳ್ಳಿಸಿತು ಸ್ವರ್‍ಣದೀಪ್ತಿ ಇಳಿಯೆ. ಮನದ ಕರಿನೆರೆಯ ಹುಳುಗಳೆಲ್ಲ ಹೊತ್ತೇರಿ ನಿದ್ದೆ ತಿಳಿಯೆ. ಜ್ಞಾನಮಯದ ಉದ್ದೀಪನಕ್ಕೆ ಪ್ರಜ್ವಲಿತವಾದ ಮೇಲೆ. ಶಾಂತ ಕಾರ್‍ತಿಕದ ನಟ್ಟನಡುವೆ ಉರಿವಂತೆ ಪ್ರೇಮಜ್ವಾಲೆ. ಕೊರಳಿಗಿಳಿದು ಬಂದಿ...

ಎಂತಿರಲು ಬಹುದು? ನನ್ನಾತನೆಂತಿರಬಹುದು….? ಇಂದಿರಮ್ಮನ ಇನಿಯನಂತೆ ತಿಳಿಗಪ್ಪ-ಮೈ- ಯಂದದರಳಿದ ಕಣ್ಣ, ತುಂಬುದಿಂಗಳ ಮೊಗದ ತರುಣನಿರಬಹುದೊ….? ಇಲ್ಲದಿರೆ ಗೌರಮ್ಮನಾ ಎರೆಯನಿಹನಲ್ಲವೇ? ಆತನೊಲು ಕೆಂಗಣ್ಣಿ- ನುರಿಮೊಗದ, ಬೆರಗಾಗಿಸುವ ವೇ...

ಸಮಯ ಸಂದರ್ಭ ಸಿಕ್ಕಾಗಲೆಲ್ಲಾ ಆ ದೇವರಿಗೊಂದು ಕೃತಜ್ಞತೆ ಅರ್ಪಿಸುವುದೇ ಸೂಕ್ತ| ಅವಕಾಶ ದೊರೆತಾಗಲೆಲ್ಲ ಜನ್ಮನೀಡಿದ ತಂದೆತಾಯಿಗಳಿಗೆ ಕೈಜೋಡಿಸಿ ನಮಿಸುವುದೇ ಸಮ್ಮತ|| ಎಂಥಹಾ ವಿಸ್ಮಯ ಈ ಜಗತ್ತು ಇಲ್ಲಿ ಮನುಜನಾಗಿ ಜನ್ಮ ತಳೆಯುವುದೇ ಪುಣ್ಯದ ಸ್ವತ್...

೧ ಕೋಳಿ ಕೂಗೋದು ಕಾದು ಬಾಳ ತಂಗಳು ತಿಂದು ಹೊತ್ತಿನ ಜತ್ಯಾಗೆ ಹೊಲದಾಕೆ ಬಂದು ಬಿತ್ತಿದ್ದು ಒಣ ನವಣೆ ಬೆಳೆದದ್ದು ಬರೀ ಬವಣೆ. ೨ ಹಾರಕ ತಂದು ನೆಲತುಂಬ ಹೊಯ್ದರೂ ಸುರಕೊಂಡಿದ್ದು ಮಾತ್ರ ಹತ್ತಾರು ಸೇರು ತಿಂದು ಕುಂತರೆ ಈಗ ಮುಂದೆ ಬೀಜಕ್ಕೆ ಕಾಳಿಲ್ಲ...

(ವೀರಕಾಶೀಮ) ಭಾವದಲ್ಲಿ:- “ಅಸಮ ಆಶಾಪಾಶ ಹರಿದುಬಿಟ್ಟೆ ವಿಷಮ ವಾಸನೆಗಳನ್ನು ಸುಟ್ಟುಬಿಟ್ಟೆ ಈಶ ಕೋಪದ ಕತೆಯ ಬಲ್ಲೆ ನಾನು ಈಶ ಕರುಣೆಯ ಮಹಿಮೆ ಅರಿತೆ ನಾನು ಜಯಿಸಿ ಇಂದ್ರಿಯಗಳನು ವಶಕೆ ತಂದೆ ಜಯಶೀಲನಾದೆನು ತಪಸಿನಿಂದೇ ಆರುವಿನಸ್ತ್ರದಲಿ ಭವ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...