ಹಗಲು ಇರುಳೆನ್ನದೆ
ಸಾಗುತಿದೆ ಬದುಕು
ಎಷ್ಟು ದುಡಿದರೂ ದುಡಿಮೆ
ಸಾಲದು ಅದಕೂ ಇದಕೂ
ದುಡಿಯುವವ ಒಬ್ಬ
ತಿನ್ನುವ ಕೈಗಳು ಹತ್ತು
ಶ್ರಮಕ್ಕೆ ತಕ್ಕ ಫಲ
ಪ್ರತಿಭೆಗೆ ತಕ್ಕ ಪುರಸ್ಕಾರ
ಮರಳುಗಾಡಿನ ಮರೀಚಿಕೆ
ಶೋಷಿತ ಸಮಾಜದ ಅಡಿಗಲು
ಪೆಟ್ಟು ತಿನ್ನದ ಬದುಕುಳಿಯುವುದೇ ದುಸ್ತರ
ಒಂದು ಮುಚ್ಚಲು ಮತ್ತೊಂದು ತೂತು
ಜೀವನವಿಡೀ ತೇಪೆಯ ಬದುಕು
ಹೊಸತಿಗಾತಿ ತುಡಿಯುತಿದೆ ಜೀವ
ಮುಗಿಲೆತ್ತರ ಏರುವ ಭಾವ
ಉತ್ತುಂಗಕ್ಕೇರುವ ರಭಸದಲ್ಲಿ
ಒಬ್ಬರೊನ್ನೊಬ್ಬರು ತುಳಿಯುವ
ದುರಾಸೆಯ ಬೀಜ ಮೊಳೆತು
ಬೆಳೆದು ಹೆಮ್ಮರವಾಗಿದೆ.
*****



















