ನನ್ನ ಉಸಿರು ಹರಿದಾಡುತಿಹುದು ಇಗೊ ಸೂಕ್ಷ್ಮ ಛಂದದಲ್ಲಿ; ನನ್ನ ಅವಯವದಿ ಬೆಳೆಯುತಿಹುದು ಭಗವಂತ ಶಕ್ತಿ-ವಲ್ಲಿ: ಆನಂತ್ಯವನ್ನು ನಾ ಕುಡಿದೆ ಎತ್ತಿಯಾ ಅಸುರ-ಸುರಾ-ಪಾತ್ರೆ ಕಾಲಲೀಲೆಯದು ನನ್ನ ನಾಟಕವು ನನ್ನ ಸ್ವಪ್ನಯಾತ್ರೆ ಈಗ ನನ್ನ ಜೀವಾಣುಗಣವು ಪ್...

ಮಳೆಗಾಲದ ನೀರಹೊಳೆಯನ್ನು ದಾಟಿಸಲು ಅಂಬಿಗರಣ್ಣ ಅರಿತವನಾದರೆ, ಅಳಿಗಾಲದ ಬಾಳಹೊಳೆಯನ್ನು ದಾಂಟಿಸಲು ಬಲ್ಲಿದರಾರು? ನಡುಹೊಳೆಯ ನಡುವಿನೊಳು ತೊಡಕಿ ಮಿಡುಕುತಲಿಹೆನು, ತಡೆಯದಲೆ ತೋರು ನೀ ತಡಿಯ ತಲುಪುವ ಹದನು ! ೧ ‘ನನ್ನ ನುಡಿ ಮನ್ನಿಸದೆ ಬೀಳದಿರು ! ...

ನಾನು, ನನ್ನ ಇರುವಿಕೆಗೆ ನನ್ನ ದಿನದ ಭತ್ಯಕ್ಕೆ ನ್ಯಾಯ ಒದಗಿಸುತಿರುವೆನೇ?|| ಇಷ್ಟೆಲ್ಲಾ ಗಾಳಿ ನೀರು ಭೂಮಿ ಬೆಳಕನು ಉಚಿತವಾಗಿ ಪಡೆಯುತ್ತಿರುವಾಗ|| ಹೆತ್ತತಂದೆ ತಾಯಿಯರ ಕರ್‍ತವ್ಯ ಮಾಡುತಿರುವೆನೇ? | ನನ್ನ ಬೆಳೆಸಿದ ಗುರುಹಿರಿಯರು ಈ ಸಮಾಜದ ಋಣವ...

ಬಿಳಿಯ ರಾತ್ರಿಗಳಲ್ಲಿ ಕರಿಯ ಮಿಂಚಾದವನು ಹಗಲು ಹರಿದಾಡುತ್ತ ಕೆಂಪು ಹೆಗಲಾದವನು ಬಿಳಿ ಕಸದ ಬಂಡಿಯನು ಹೊರಗೆಳೆಯುತ್ತ ಹೋಗಿ ಜಾರ ಜೇಲಿನ ಒಳಗೆ ಒಂಟಿ ಬಯಲಾದವನು. ಶ್ವೇತ ಸೆರೆಯಲ್ಲಿ ಸೂರ್‍ಯ ಕುರುಡಲ್ಲಿ ಬಿಳಿಯ ಬತ್ತಿಯ ಹೊಸೆದ ಕಪ್ಪು ಕಿರಣ ಮಗ್ಗಿ ...

ಜಗದ ಮೌನವನೊಡೆದು ಗಗನ ಗರ್ಭವ ಸೀಳಿ ಜಲದ ಶಾಂತಿಯ ಕಡೆದು ಯುಗಯುಗದ ಬಗೆ ಕನಲಿ ಉರಿವ ಬೆಂಕಿಯ ಜ್ವಾಲೆ ಹರಿವ ಗಾಳಿಯನಾಳಿ ಮಾನವರ ಜೀವನವ ಬಲಿಗೊಳ್ಳುತಿದಿರಾಳಿ ಸತ್ಯ ಧರ್ಮದ ಹೆಸರ ಬಗೆಯೆತ್ತಿ ಕರೆಯುತಿದೆ ಲೋಕವೇ ಬರೆದಿಟ್ಟ ಶಾಸನವ ಮುರಿಯುತಿದೆ ಕ್ರಾ...

ಕಣ್ಣು ಮುಚ್ಚಿ ದೀರ್ಘ ಪ್ರಾರ್ಥನೆ ಸಲ್ಲಿಸಿ, ತಲೆ ತುಂಬ ಎಳೆದ ಮುಸುಕಿನಡಿಯಲ್ಲಿ ಕಣ್ಣ ಮುತ್ತುಗಳ ಬಳಬಳನೆ ಉದುರಿಸಿ, ಕರುಳಿಗೆ ಹೊತ್ತಿಕೊಂಡ ಬೆಂಕಿಯ ಜ್ವಾಲೆ- ಹೊರ ಚಾಚದಂತೆ ನಂದಿಸಿ ಮೇಲೇಳುವ ಹೊಗೆಯ ನೋಡುತ್ತ ನಿಟ್ಟುಸಿರು ಬಿಡುತ್ತ ಗೆದ್ದು ಬರ...

ಗುರಿಯಿಟ್ಟು ಬಿಟ್ಟ ಬಾಣದರಿವಿರದೆ ಹಕ್ಕಿ ಹಾರುವುದು ರೆಕ್ಕೆ ಬಿಚ್ಚಿ ನೊರೆ ಮುಗಿಲ ಹಾದು ಸೀಮಾತೀತ ನಭದ ವಿಸ್ತಾರವನ್ನೆ ನೆಚ್ಚಿ ಬಿಟ್ಟ ಕ್ಷಣದಿಂದ ಬಿಡುವ ಕ್ಷಣ ತನಕ ಮಧ್ಯಂತರ ಇರುವ ಬದುಕು ಕ್ಷಣವೊ ಯುಗವೊ ಅದು ಅಷ್ಟು ಸಾಕೊ ಇನ್ನಷ್ಟು ಬೇಕೊ ಯಾರ...

ಓಡಿ ಓಡಿ ಸುಸ್ತಾದೆ ಕ್ಯಾಲೆಂಡರ್ ಹಿಂದೆ ಓಡಿ ಕಡೆಗೆ ಮುಗ್ಗುರ್‍ಸ್ ಬಿದ್ದೆ ಗಡಿಯಾರದ ಹಿಂದೆ ಓಡಿ ಓಡಿ ದುಡ್ಡು ಕಂಡೆ ಇನ್ನೂ ಕಾಣುವೆ ಸಿಕ್ಕರೆ ಜೊತೆಗೆ ಎಲ್ಲೊ ಬೋನಸ್ ಉಂಡೆ ಬಾಡಿ ತುಂಬ ಸಕ್ಕರೆ ಓಡಿ ಓಡಿ ಶಿಖರವ ಕಂಡೆ ನಾನೆ ಮೊದಲಿಗನೆಂದೆ ಅಲ್ಲಿ...

ಬರೆದೂ ಬರೆದೂ ಸಾಕಾಯಿ ತಪ್ಪ ಈ ಪದ್ಯ ಇವುಗಳದು ಮುಗಿಯದ ತಂಟೆ ಒಂದಷ್ಟು ಹೊತ್ತು ಒಂದೊಂದು ರೂಪು, ಇವುಗಳ ಕೈಯೋ ಕಾಲೋ ಮುಖವೋ ಯಾವುದೂ ತಿಳಿಯುವುದು ಕಷ್ಟ ಆದರೂ ಇರಲಿ ಒಂದು ಅಂಗಿ ಪಾಪ ಬೆತ್ತಲೆ ನಿಂತಿದೆ ಸಡಿಲವೋ ಬಿಗಿಯೋ ಒಂದು ಅಂಗಿಯಿರಲಿ ಪಾಪ ಅದ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...