
ಯೌವ್ವನವೇ ಮತ್ತೊಮ್ಮೆ ಹುಟ್ಟಿ ಬಾ ಚೈತನ್ಯಧಾರೆಯಾಗಿ ಮರಳಿ ಬಾ ಮುಪ್ಪಾದ ಈ ಜೀವ ಉರುಳಿ ಹೋಗುವ ಮುನ್ನ ಜೀವನದಿಯಾಗಿ ಹರಿದು ಬಾ. ಕಾಲಚಕ್ರದ ಗಾಲಿ ಹಿಂದಕ್ಕೆ ತಿರುಗಲಿ ಗತಜೀವನದ ಕಥೆಯ ಪುಟಗಳು ತೆರೆಯಲಿ ಹಿಂದೆ ಕೇಳಿದ ಹಾಡು ಮತ್ತೊಮ್ಮೆ ಧ್ವನಿಸಲಿ ...
ಬಾವುಟ ನಮ್ಮ ಬಾವುಟ ಹಾರುತಿಹುದು ಬಾವುಟ || ಬಾನಂಚಿನ ತಿಳಿನೀಲಿಯ ಸೊಬಗಲಿ ತೇಲುತಾ ಧರಣಿಯ ಮಡಿಲಲ್ಲಿ ಹೂ ಮಳೆಯ ಸುರಿಸುತಾ ||ಬಾ|| ತ್ರಿವರ್‍ಣ ಧ್ವಜವು ತಾನೆನ್ನುತ ಸ್ವಾತಂತ್ರ ಧ್ವಜದ ಒಲುಮೆಯಲಿ ಗಾಂಧಿತಾತನ ಶಾಂತಿದಾತನ ನೆನೆಯುತ ಹಾರುತಿಹುದು ಬ...
ಬರಬೇಕು ದೇವ ಬರಬೇಕು ಎನ್ನ ಧ್ಯಾನದಲಿ ಮೊಗ ತೋರಬೇಕು ನಿನ್ನ ತೇಜೋ ರಾಶಿಯ ಅಂದಕ್ಕೆ ನನ್ನನ್ನು ನಾನು ನಿತ್ಯ ಮರೆಯಬೇಕು ಕ್ಷಣಿಕ ದೇಹ ಮೋಹಕ್ಕೆ ನಾನೆಂದೂ ಹಪ ಹಪಿಸಿ ಇಲ್ಲಿ ಬಾಳಿರ ಬಾರದು ನನ್ನದೆಲ್ಲವೂ ಅವನಿಗೆ ಧಾರೆ ಎರೆದಾಗ ಆನಂದ ವಿರಬೇಕು ಸಂಕಟ...
ಎಲ್ಲ ನಾದದಲಿ ಎಲ್ಲ ದನಿಗಳಲಿ ದೇವವಾಣಿ ಜಾಗು ಹಾಡು-ಪಾಡು ಗುಡುಗಾಟ ಮತ್ತೆ ಕುಹುಕಾಟ ಕೇಕ ಕೂಗು. ಹರ್ಷಶೋಕದಲಿ ಮಿಕ್ಕಿಬರುವ ಜೀವನದ ತೊದಲು ಬದಲು ವೈಖರಿಯ ಗಮಕ, ಗುಂಗುಣಿಸಿ ಬರುವ ಸವಿನುಡಿಯ ಯಮಕಗಳಲು. ಕಡಲ ಮೊರೆತ ಕುಣಿಕುಣಿದು ನೊರೆಯ ತೆರೆತೆರೆಯ...
ವಲ್ಲೊಲ್ಲೆ ಕೇದಿಗೇ ವಲ್ಲೆ ಮೇನ ಮೂಡಿತು ಯೆಲ್ಲಿ ನೋಡಿದ್ರೇ ಪರಿಮಾಲಾ | ಮಾಲೆ ಕೇದಿ ಹೂವಾ ನೋಡಿ ಬಾರೆ ನಮ್ಮ ತುರವೀಗೆ ವಲ್ಲೊಲ್ಲೆ ಮಲ್ಲುಗೀ ವಲ್ಲೆ ಮೇಳೆ ಮೂಡಿತು ಯೆಲ್ಲಿ ನೋಡಿದ್ರೇ ಪರಿಮಾಲಾ ಪರಿಮಾಲ ಮಲ್ಲಿ ಹೂವಾ ವೊಡಿ ಬಾರೆ ನಮ್ಮ ತುರವೀಗೆ ॥...
೧ ಹಗಲು ಮುಗಿವ ಸಮಯ ; ದಿನಪ ಜಿಗಿಯಲಿದ್ದ ಬಾನಿನಿಂದೆ. ಒಗೆದು ಸಂಜೆಗೆಂಪ ತುಂಡುಮುಗಿಲುಗಳಿಗೆ ಬಣ್ಣ ಬರೆದು, ಪಸಲೆನೆಲಕೆ ಸೊಬಗ ಸಲಿಸಿ, ಹಸಿರಿನೆಲೆಯ ಕಳೆಯ ಬೆಳಸಿ, ಮಿಸುನಿವಿಸಿಲ ಪಸರಿಸುತಲಿ ರಸೆಯನಾತ ರಂಜಿಸಿದ್ದ. ಕಾಲವೇನೊ ಬಾಳ ಸೊಗಸು ಎಲ್ಲ ಕ...
ಅಕ್ಷರದೊಳ್ ಅನ್ನವನಿತ್ತ ಗುರುವಿಗೆ ಶರಣು| ಅಜ್ಞಾನದಿಂದ ಸುಜ್ಞಾನದ ಕಡೆಗೆ ನೆಡೆಸಿದ ಗುರುವಿಗೆ ನನ್ನ ಶರಣು|| ಕತ್ತಲೆಯಿಂದ ಬೆಳೆಕಿನೆಡೆಗೆ ಗುರಿತೋರಿದ ಗುರುವಿಗೆ ನನ್ನ ಶರಣು| ಕ್ಲಿಷ್ಟಕರವಾದುದ ಸರಳೀಕರಿಸಿದ ಗುರುವಿಗೆ ನನ್ನ ಶರಣು|| ಗುರು ಬ್ರ...
ನಾನು ಮೀನಾಗಿದ್ದಿದ್ರೆ ಎಷ್ಟೊಂದ್ ಚೆನ್ನಾಗಿರ್ತಿತ್ತು ದಿನವೂ ನೀರಲಿ ಆಟ ಆಡ್ಕೊಂಡ್ ಖುಷಿ ಖುಷಿಯಾಗಿ ಇರ್ತಿದ್ದೆ ಮುಖ ತೊಳೆಯೊ ಬಾರೋ ಅಂತ ಅಮ್ಮ ಕೂಗಿ ಹೇಳಿದ್ರೆ ಆಗ್ಲೆ ತೊಳೆದಾಯ್ತಮ್ಮ ನಾನು ಕಾಫಿ ಕೊಡು ಅನ್ತಿದ್ದೆ ಸ್ನಾನ ಮಾಡೋ ಬಾರೋ ಅಂತ ಅಮ್...













