ಅಕ್ಷರದೊಳ್ ಅನ್ನವನಿತ್ತ
ಗುರುವಿಗೆ ಶರಣು|
ಅಜ್ಞಾನದಿಂದ ಸುಜ್ಞಾನದ ಕಡೆಗೆ
ನೆಡೆಸಿದ ಗುರುವಿಗೆ ನನ್ನ ಶರಣು||

ಕತ್ತಲೆಯಿಂದ ಬೆಳೆಕಿನೆಡೆಗೆ
ಗುರಿತೋರಿದ ಗುರುವಿಗೆ ನನ್ನ ಶರಣು|
ಕ್ಲಿಷ್ಟಕರವಾದುದ ಸರಳೀಕರಿಸಿದ
ಗುರುವಿಗೆ ನನ್ನ ಶರಣು||

ಗುರು ಬ್ರಹ್ಮನಾಗಿ ಸಕಲ ವಿದ್ಯಾಧಿಪತಿಯಾದ
ವಿದ್ಯಾರ್ಥಿ ಶಿಲ್ಪಿಗೆ ಶರಣು| ಅನಂತ ಕರುಣಾಮೂರ್‍ತಿ
ಗುರುಕಾರುಣ್ಯನಿಗೆ ನನ್ನ ಶರಣು ಶರಣಾರ್‍ತಿ||

ಆಚರಣೆಗಳಡಚನೆ ನಿವಾರಿಸುವ
ವಿದ್ಯೆಕಲಿಸಿದಾ ಗುರುದೈವಗೆ ನನ್ನ ಶರಣು|
ಅಸ್ಪುರ್‍ಶ್ಯತೆಯ ಅಸ್ಪಷ್ಟತೆಯ
ಸ್ಪಷ್ಟವಾಗಿಸಿದ ಗುರುವಿಗೆ ನನ್ನ ಶರಣು||
*****