ಬಾವುಟ ನಮ್ಮ ಬಾವುಟ
ಹಾರುತಿಹುದು ಬಾವುಟ ||

ಬಾನಂಚಿನ ತಿಳಿನೀಲಿಯ
ಸೊಬಗಲಿ ತೇಲುತಾ
ಧರಣಿಯ ಮಡಿಲಲ್ಲಿ
ಹೂ ಮಳೆಯ ಸುರಿಸುತಾ ||ಬಾ||

ತ್ರಿವರ್‍ಣ ಧ್ವಜವು ತಾನೆನ್ನುತ
ಸ್ವಾತಂತ್ರ ಧ್ವಜದ ಒಲುಮೆಯಲಿ
ಗಾಂಧಿತಾತನ ಶಾಂತಿದಾತನ ನೆನೆಯುತ
ಹಾರುತಿಹುದು ಬಾವುಟ ||ಬಾ||

ಕೇಸರಿ ಬಿಳಿ ಹಸಿರು ಮೂರು ಬಣ್ಣ
ನಡುವೆ ಅಶೋಕ ಚಕ್ರವು
ಗೆಲುವ ಮನವ ಚೆಲುವ ಬೀರುತ
ಹಾರುತಿಹುದು ಬಾವುಟ ||ಬಾ||

ಸತ್ಯವೇ ನಮ್ಮ ಹಾಡು
ಶಾಂತಿಯೆ ನಮ್ಮ ಮಂತ್ರ
ತ್ಯಾಗವೊಂದೆ ನಮ್ಮ ನೀತಿ ಎನ್ನುತ
ಹಾರುತಿಹುದು ಬಾವುಟ ||ಬಾ||

ಎಲ್ಲರೊಂದೆ ಎನ್ನುವ ಚಕ್ರವು
ಒಂದೇ ಭಾವ ಎನ್ನುವ ಆತ್ಮವು
ಭರತ ಮಾತೆಯ ಹರಸುತಾ
ಹಾರುತಿಹುದು ಬಾವುಟ ||
*****