ಬಾಯ ಜೊಲ್ಲ ನೀರಿನಿಂದ ಹಿಡಿದು ಯೋನಿ ದ್ರವಣದವರೆಗೆ ಹರಿವ ಜಲ ಜಲವೂ ವಿಷ ವಿಷ ವಿಷ ಏನಿದು ಅವಳ ಶಾಪವೋ ಗಂಡನಿಂದ ಬಿಡಿಸಿದ್ದಕ್ಕೆ ಈ ಅಜ್ಜಿ ತಾತ ಹದಿಮೂರು ಹೆತ್ತರೂ ಕಚ್ಚಾಡಿದ್ದಕ್ಕೆ ಅವಳು ಒಲೆಯ ಮುಂದೆ ಕೂತು ಹಾಕಿದ ಹಿಡಿ ಶಾಪ. ಇಂದು ಈ ನನ್ನ ಗೆ...

ಕೆಂಪು ಉಡುಪಿನ ಚೆಲುವೆಯ ಕುಡಿ ನೋಟದ ಗಾಳಕೆ ಸಿಲುಕದವರಾರು? ಈ ಬೇರಿಗೆ ಕೆಂಪಂಚಿನ ಸೀರೆ ಸರೆಗು ಸೋಕಿದರು ಸಾಕು ಕೊನರುವುದು ಕೆಂಪು ಅಧರಲಿ ನಗೆ ಮಿಂಚಿದರೆ ಮಲೆನಾಡಿನ ಚಳಿಯಲ್ಲೂ ಮೈ ಬಿಸಿಯೇರತೊಡಗುವುದು ಮನಕ್ಕೊಪ್ಪುವ ರಕ್ತವರ್ಣದ ಧಿರಿಸು ಧರಿಸಿದ...

ಬರುತ್ತಿದ್ದಾರೆ ಜಾಗ್ರತೆ ಹಗಲು ದರೋಡೆಕೋರರು ಜನ ಸಾಮಾನ್ಯರ ಸುಲಿಗೆ ಮಾಡೋ ಕಲಿಯುಗದ ಬಕಾಸುರರು. ಮನೆಕಟ್ಟುವಾಗ ಬರುತ್ತಾರೆ ಕಾರ್ಪೊರೇಶನ್‌ನ ಸುಲಿಗೆದಾರರು, ಕಟ್ಟಿದ ಮೇಲೆ ಬರುತ್ತಾರೆ ತೆರಿಗೆ ಹೇರುವ ಲಂಚಾವತಾರಿಗಳು. ರಸ್ತೆಗಿಳಿದರೆ ಬರುತ್ತಾರೆ...

ಎಷ್ಟೊ ಜನ ತಮ್ಮ ಚೆಲುವಿನ ಹಮ್ಮಿನಲಿ ಸೊಕ್ಕಿ ಕ್ರೂರರಾಗುವರು, ನೀನೂ ಕೂಡ ಅಂತೆಯೇ ; ನನ್ನ ಹೃದಯವೊ ನಿನ್ನ ಹುಚ್ಚುಸುಳಿಯಲಿ ಸಿಕ್ಕಿ ನೀ ಬಲ್ಲೆ ಅಪ್ಸರೆ ಬರಿ ನಿನ್ನ ಚಿಂತೆಯೇ. ಮಣಿಸಿ ಕುಣಿಸುವ ಮಾಯೆ ನಿನ್ನ ಚೆಲುವಿಗೆ ಇಲ್ಲ ಎಂದು ಕೆಲವರು ನಿನ್ನ...

ಇದು ಉತ್ತರಾಯಣದ ಪುಣ್ಯಕಾಲ ಚಳಿಯಿಂದೆದ್ದ ಸೂರ್‍ಯ ಮಗ್ಗಲು ಹೊರಳಿಸಿ ಹೊದಿಕೆ ಸರಿಸಿ ಬಿರುಸು ಹೆಜ್ಜೆ ಇಟ್ಟು ಉದ್ದುದ್ದ ಕೋಲು ಚೆಲ್ಲುತ ಬರುವ ಸಂಕ್ರಾಂತಿ ಕಾಲ- ಚಳಿಯ ಬೀಡಿ ಹೊರಗೆಸೆದು ಎಳೆ ಬಿಸಿಲು ಹೀರಲು ಹೊರಬಾಗಿಲು ಕಟ್ಟೆಗೆ ಬಂದು ಕೂಡುವ ಊರ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...