ಬಾಯ ಜೊಲ್ಲ ನೀರಿನಿಂದ
ಹಿಡಿದು ಯೋನಿ ದ್ರವಣದವರೆಗೆ
ಹರಿವ ಜಲ ಜಲವೂ ವಿಷ ವಿಷ ವಿಷ
ಏನಿದು ಅವಳ ಶಾಪವೋ
ಗಂಡನಿಂದ ಬಿಡಿಸಿದ್ದಕ್ಕೆ
ಈ ಅಜ್ಜಿ ತಾತ ಹದಿಮೂರು
ಹೆತ್ತರೂ ಕಚ್ಚಾಡಿದ್ದಕ್ಕೆ
ಅವಳು ಒಲೆಯ ಮುಂದೆ
ಕೂತು ಹಾಕಿದ ಹಿಡಿ ಶಾಪ.
ಇಂದು ಈ ನನ್ನ ಗೆಳೆಯರಿಗೆಲ್ಲಾ
ಕಾಡಿದೆ ವಿಷದ ಹರಿತ
ಆದರೂ ಬಿಡಲೊಲ್ಲರು
ಏನಿದು ಒಲವಿನ ಅಮೃತ.
*****


















