ಹೋಗಲೆಲ್ಲಿ ಜನ ಸಾಮಾನ್ಯರು?

ಬರುತ್ತಿದ್ದಾರೆ ಜಾಗ್ರತೆ
ಹಗಲು ದರೋಡೆಕೋರರು
ಜನ ಸಾಮಾನ್ಯರ ಸುಲಿಗೆ ಮಾಡೋ
ಕಲಿಯುಗದ ಬಕಾಸುರರು.

ಮನೆಕಟ್ಟುವಾಗ ಬರುತ್ತಾರೆ
ಕಾರ್ಪೊರೇಶನ್‌ನ ಸುಲಿಗೆದಾರರು,
ಕಟ್ಟಿದ ಮೇಲೆ ಬರುತ್ತಾರೆ
ತೆರಿಗೆ ಹೇರುವ ಲಂಚಾವತಾರಿಗಳು.

ರಸ್ತೆಗಿಳಿದರೆ ಬರುತ್ತಾರೆ ಸರಗಳ್ಳರು
ವಾಹನಗಳ ನಿಯಂತ್ರಿಸುವವರು
ಪರಿಸರ ರಕ್ಷಣೆಗೆ ನಿಂತವರು
ಲೆಕ್ಕವಿಲ್ಲದೆ ಬೊಕ್ಕಸ ತುಂಬುವ ಅ-ರಕ್ಷಕರು.

ರಾಜಧಾನಿಯಲಿ ದೇಶದ ಬೊಕ್ಕಸ ನುಂಗುವವರು
ಶೇರು ಮಾರುಕಟ್ಟೆಯಲಿ
ಹಣಕಾಸಿನ ವ್ಯವಸ್ಥೆಯನು ತಲೆಕೆಳಗು ಮಾಡುವವರು
ಜನಸಾಮಾನ್ಯರ ರಕ್ತ ಹೀರುವ ಜೀರುಂಡೆಗಳು.

ದೇಶದ ತುಂಬೆಲ್ಲ ಉಗ್ರಗಾಮಿಗಳು
ಎಲ್.ಟಿ.ಟಿ. ಪಡೆಯುವರು
ತಮ್ಮನ್ನೇ ಬಲಿಕೊಡಲು ಸಿದ್ಧರಾಗಿರುವರು.
ಕೋಮುಗಲಭೆ ಹುಟ್ಟಿಸುವ ಜಾತಿಮತದ ಭೂತ ಹಿಡಿದವರು.

ಪೇಪರು ತುಂಬ ಕಾಡುಗಳ್ಳರು,
ದಂತ ಚೋರರು, ನರಹಂತಕರು,
ಜನರ ಕದ್ದು ಜೋಳಿಗೆ ತುಂಬುವ ವೀರಪ್ಪನಂತವರು
ಕೈಗೆ ಸಿಗದೆ ನುಸುಳಿ ಹೋಗುವ ಕಳ್ಳ ಸುಳ್ಳರು.

ಇವೆರಲ್ಲರ ಹಿಂದೆ ಇರುತ್ತಾರೆ
ಕೊಟ್ಟುಕೊಂಬುವ ಲೆಕ್ಕ ಬರವ
ಬೆಕ್ಕು ಸಂನ್ಯಾಸಿ ದೇಶಭಕ್ತರು
ಬೀಜಾಸುರನ ಸಂತತಿಯ ರಾಜಕಾರಣಿಗಳು.
ಬೇಲಿಯೆ ಹೊಲವ ಮೇದರೆ
ಹೋಗಲೆಲ್ಲಿ ಜನಸಾಮಾನ್ಯರು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಷ್ಟೊ ಜನ ತಮ್ಮ ಚೆಲುವಿನ ಹಮ್ಮಿನಲಿ ಸೊಕ್ಕಿ
Next post ಕಾಟ

ಸಣ್ಣ ಕತೆ

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…