ಮುಟ್ಟಿ ನೋಡುವೆನು ಕಾಂಚನಗಂಗೆ, ಎಂದೊಮ್ಮೆ ಹೂಡುವದು ಗಾಳಿದೇರಿನಲಿ ಲಗ್ಗೆಯ; ಚಂದ್ರ ಲೋಕವನು ಸೇರಬೇಕೆಂದು ಜ್ಯೋತಿಃಸಾಂದ್ರ ಆಕಾಶ ಬಾಣಗಳನೇರಿ ಬಯಲಲಿ ಚಿಮ್ಮಿ ನುಗ್ಗುವದು; ದುರ್‍ಬೀನುಗಳ ಚಾಚಿ ನಕ್ಷತ್ರ ಚಕ್ರಪಸರವ ಕಣ್ಣು ತಾಗೆ ಕಾಣುವೆನೆಂದು ನನ...

ಅನ್ನವೆಂದೇನು ಕೊಂಡಾಡುವುದೋ ಭತ್ತವೊಂ ದನೆ ಉಜ್ಜುಜ್ಜಿ ಬಿಳಿಗೊಳಿಸುತಲುಂಡನ್ನದಾ ಹೀನ ಮನವನ್ನ ಮೂಲವನೆಲ್ಲ ಕೆಡಿಸಿರಲು ಅನ್ನದೊಳಮಿತ ವಿಧವಿಹುದದನು ಋತು ಮಾನಕಪ್ಪಂತೆ ತಿನುವಾತ್ಮಜ್ಞಾನವಳಿದಿರಲು – ವಿಜ್ಞಾನೇಶ್ವರಾ *****...

ಹುಟ್ಟುತ ಹುಲ್ಲನಾದೇ ಬೆಳೆಯೂತ ಬಿದುರನಾದೇ ಬಿದುರೇ ನೀನ್ಯಾರಿಗೊಲಿಯುವಳೇ? ಬಿದುರೆನ್ನ ತಾಯೇ || ೧ || ಊರೂರು ಮುದುಕರಿಗೆಲ್ಲಾ ಊರೂವ ದೊಣ್ಣೆಯಾದೇ ಬಿದುರೇ ನೀನ್ಯಾರಿಗೊಲಿಯುವಳೇ? ಬಿದುರೆನ್ನ ತಾಯೇ || ೨ || ಊರೂರು ನಾರಿಯರಿಗೆಲ್ಲಾ ಗೇರೂ ಗೆರಸೇ...

ಓಡೋಡುತ್ತಿವೆ ನಿನ್ನ ಇಂದ್ರಿಯಗಳು ಸುಖದ ಸುಪ್ಪತಿಗೆ ಅರೆಸುತ್ತ ಜನುಮ ಜನುಮದಲಿ ಅನುಭವಿಸಿದ ವಿಷಯಗಳ ಸ್ಮರೆಸುತ್ತ ನಿನ್ನ ಮೂಲ ಯಾವುದು ಆತ್ಮ ಹೊಲಸುನಾರುವ ದೇಹಾನಂದವೆ ನಿನ್ನ ತಾಣ ಯಾವುದು ರೂಹವೆ ಹೆಣ್ಣು ಹೊನ್ನಿನ ಪರಮಾನಂದವೆ ಬದುಕು ಇದು ನಶ್ವರ...

ಮರೆಯದಿರು ; ನಮ್ಮ ಪೂರ್‍ವಿಕರು, ಸಂಮಾನಿತರು, ಕಾಲ ವಿಧಿಗಳವರ್‍ಗೆ ಪೇಯಗಳ ನೀಯೆ, ಸಂದನಿತನಾದರದಿ ಕುಡಿ ಕುಡಿದು ಬೇಡೆನದೆ, ಅದು ಮುಗಿಯೆ, ಮೈದಣಿಯೆ, ಮಲಗಿ ಬಾಯ್ಬಿಗಿದರ್. *****...

ಚಾರು ಶಾರದ ಸಂಧ್ಯೆ, ನೀರ ನೀಲಾಕಾಶ ಪೇರಾಳದರ್ಣವವ ಹೋಲುತಿತ್ತು. ಜಲಸಸ್ಯ ನಿವಹದೊಲು ಜಲದವಂಚಿನೊಳಿತ್ತು, ಎಳೆಯ ಪೆರೆ ಪಾತಾಳ ಯಾನದಂತೆ. ಬಾನಿನಂತರದಲ್ಲಿ ಮೀನಂತೆ ತೇಲಿದುವು ವೈನತೇಯಗಳೆರಡು ಗರಿಯಲುಗದೆ. ಅಡಿಯೊಳಗೆ ನಾನಿದ್ದೆ ಕಡಲ ಕರುಮಾಡದೊಳು ಬ...

ಬಾಳಿಽಯ ಬನ ಚೆಲುವಽ| ಬಾಳಿಽಯ ಗೊನೊ ಚೆಲುವಽ| ಬಾಳ್ಯಾಗ ಇರುವ ಗಿಽಣಿ ಚೆಲುವಽಽ| ಸೋಬಾನಮ|| ಬಾಳಿಯಾಗಽಽ ಇರುವ ಗಿಣಿ ಚೆಲುವ ತಮ್ಮನ ಬಾಗಲಽ ಮಾಟ ಕರಚೆಲುವ| ಸೋ… ||೧|| ನಿಂಬೀಯ ಬನ ಚೆಲುವಾಽ| ನಿಂಬೀಯ ಗೊನಿ ಚೆಲುವಾಽ| ನಿಂಬ್ಯಾಗ ಇರುವ ಗಿಣಿ...

ಅಯ್ದಯ್ದರನಿತಯ್ದು ತಯ್ದಿತಾ ಕಾಲಂ ನಿನ್ನ ನಿನ್ನವರಂದು ನನಗಿತ್ತ ದಿನದಿಂ; ವಿಧಿ ನಿನ್ನ ತುಡುಕಲಿಂದೆನ್ನ ಬಾಳ್ತನದಿಂ ಕತ್ತಲಿಸಿತೊಡನೆ ಮುಂದಣ ಚಕ್ರವಾಲಂ! ೪ ನಿನಗಾದುದಿಲ್ಲ ನಾ, ನೀನೆ ನನಗಾದೆ- ನನ್ನ ಕೆಯ್ವಿಡಿದೆ ನೀನಳಲನನುಭವಿಸೆ! ನಿನ್ನ ಚೆಲು...

ಮುಂಗೋಳಿ ಕೂಗಿತ್ತು ಕನ್ನಡದ ಪದ ಹಾಡಿ ರಥವೇರಿ ಬರುತ್ತಿದ್ದ ನೇಸರಗೆ ಬೆಳ್ಳಕ್ಕಿ ಹಿಂಡಾಗ ಬರೆದಿತ್ತು ಸ್ವಾಗತವ ಹಾರಾಡಿ ನೀಲಿ ಆಗಸದಾಗೆ ಮೊಗ್ಗಾದ ಹೂವುಗಳು ಅರಳ್ಯಾವೊ ದಳ ತೆರೆದು ಚೆಲ್ಲುತ್ತ ಕನ್ನಡದ ಕಸ್ತೂರಿಯ ಉಣಿಸುತ್ತ ಕಂಪನ್ನು ಬಗೆಬಗೆಯ ಜೀ...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...