೧ ಒಳ್ಳೆ ಬೆಳೆಗಳ ತಿಂದು ಪೊಳ್ಳು – ಜೊಳ್ಳಾಗಿಸುತ ಬರಗಾಲ ತರುವುದಾ ಜಿಟ್ಟೆ ಯ ಹುಳ ! ಹಳ್ಳಿಗರ ಸಂತಸವ ಕೊಳ್ಳೆ ಹೊಡೆಯುತ್ತಿಹುದು, ಕರಿಗಾಲಗುಣದ ಬಿಳಿಬಟ್ಟೆಯ ಹುಳ ! ೨ ಇರುವನಿತೆ ಕಿರುಬೆಳಕ ಮೆರೆಯಿಸುತ ಮಿರುಗಿಸುತ ಹಾರುವುದು ಮುಗಿಲೊಳಗೆ...

ಬರುತಿ‌ಎಂದೆಯಲ್ಲೊ ಬಾರದೆಹೋದೆ ಎಲ್ಲೊ| ಮಗು ಲೋಹಿತಾಶ್ವ|| ಬಿಸಿಲ ಜಳಕೆ ನಿನಗೆ ಬಾಯಾರಿಕೆಯಾಗಿಹುದೋ| ನಿನ್ನ ಹಸಿವು ಬಾಧಿಸಿಹುದೋ? ನಿನ್ನ ಜೊತೆಗಿದ್ದವರು ನೀನು ಸಣ್ಣವನೆಂದು ನಿನ್ನ ಕಾಡಿನಲಿ ಹಿಂದೆಬಿಟ್ಟರೇನೋ?|| ಅರಮನೆಯಲಾಡಿ ಬೆಳೆದವ ನೀನು ಅಡ...

ಎನ್ನ ಎದೆಯು ಬರಿದಾಗಿದೆ ಅಲ್ಲಿ ಭಾವಗಳಿಲ್ಲ ಮತ್ತೆ ಆಸೆಗಳ ಪ್ರತಿಬಿಂಬ ಜೀವನಾಡಿಗಳಿಲ್ಲ ಮರೆಯಲಿ ನೀನಿದ್ದು ಏನಿದೆಲ್ಲ ನಿನ್ನ ಮಾಯೆ ಕ್ಷಣ ಕ್ಷಣವು ಅಶ್ರು ಬಿಂಬ ಮೋಹ ತಾಪಗಳು ಹೇಯೆ ನಿನ್ನ ನೋಡಲು ಎನ್ನ ಕಂಗಳು ತವಕಿಸಿವೆ ನಿನ್ನ ದರುಶನಕೆ ಎನ್ನ ಮ...

ಮನುಜ ಕೋಟಿಯ ತಣಿಸಿ ಸವಿಯಮೃತಮನ್ನುಣಿಸಿ ಬೆಳೆಸುತಿಹ ತಾಯಾಗಿ ಬೆಳಕು ಹರಿಸಿ. ಎಲ್ಲ ದೇವತೆಗಳನು ಎಲ್ಲ ಜ್ಞಾನಂಗಳನು ಧರ್ಮದೇವತೆಯಾಗಿ ನೀನು ಧರಿಸಿ ಸಕಲ ಬೆಳೆಗಳ ಬಿತ್ತು ಸಕಲ ಜೀವದ ಮುತ್ತು ನಿನ್ನಿಂದ ಬಾಳ್ಮೊದಲು ಬದುಕು ಸರಸಿ ರಸದುಂಬಿ ಮೈಯೆಲ್ಲ ...

ಸದಾ ಹಸಿರಿನ ಉಸಿರು ಕವಿಯ ಕಾವ್ಯದ ಭೂಮಿ ಆಶೆಗಳಿವೆ, ಕನಸುಗಳಿವೆ ನೂರಾರು ಉಸಿರಾಡಿದರೆ ನನ್ನ ಕಾವ್ಯ ಬದುಕುತ್ತೇನೆ. ಇಲ್ಲಿಯ ಒಂದೊಂದು ವಸ್ತುವಿನಲ್ಲೂ ಗತಮರೆತ ಇತಿಹಾಸ ಹುಡುಕುತ್ತೇನೆ. ಕಾವ್ಯ ಬದುಕಿದರೆ ಉಸಿರಾಡುತ್ತೇನೆ. ವಿಶಾಲ ಭೂಮಿಯ ಮೇಲೆ ಸ...

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಏನು ನಡೆಯಿತೊ ಸಂಜಯ ಯಾರು ಸೋತರು ಯಾರು ಗೆದ್ದರು ಎಲ್ಲ ಬಣ್ಣಿಸೊ ಸಂಜಯ ಯಾರ ಬಾಣಕೆ ಯಾರು ಗುರಿಯೊ ಯಾರ ತಲೆಗಿನ್ನೆಷ್ಟು ಗರಿಯೊ ಸಂಜಯ ಯಾರು ತಪ್ಪೊ ಯಾರು ಸರಿಯೊ ತಪ್ಪು ಸರಿಗಳ ಮೀರಿದಂಥ ಪರಿಯೊ ಸಂಜಯ ಧರ್ಮ ಯುದ್ಧವ...

ಹೆಣ್ಣ ಬೇಡಲಿ ಹ್ವಾದ್ರಽ ಹೆಣ್ಣೇನು ಮಾಡತಿರಲೆ| ಹೆಣ್ಹಾಲಾ ಬಾನಾಽ ಉಣತಿರಲೆ| ಹೆಣ್ಹಾಲಾ ಬಾನಾ ಉಣತಿರಲೆ| ಹೆಣ್ಣಿನ ತಾಯಿ| ಉಮ್ಮಾಽಯದ ನಗಿಯ ನಗತಿರಲೆ ||೧|| ಕೂಸ ಬೇಡಲಿ ಹ್ವಾದ್ರಽ ಕೂಸೇನು ಮಾಡತಿರಲೆ| ಕೂಸ್ಹಾಲು ಬಾನಾಽ ಉಣತಿರಲೆ| ಕೂಸ್ಹಾಲು ಬಾ...

ಬೇಡ ಅಮ್ಮ ಬೇಡ ಕಾಣದೂರಿನ ಪಯಣಕೆ ತಪ್ಪೊ ನೆಪ್ಪೊ ಹೊಟ್ಟೆಗಿರಲಿ ಮರಳು ನಿನ್ನೀ ಊರಿಗೆ ಮೂಲೆಯಲ್ಲಿ ಒಂಟಿ ಹಣತೆ ಕಣ್ಣು ಸಹಿಸದಾಗಿದೆ ಸುತ್ತ ಕತ್ತಲು ಗಾಢ ಮೌನ ಬದುಕು ಮಸಣ ಆಗಿದೆ ಊರು ಸೇರಿದೆ ಬಂಧು ಬಳಗ ಮರಳಿ ಬರುವ ಖಾತ್ರಿಯಿಲ್ಲ ನಿನ್ನ ಕರುಣೆಯೆ...

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ. -ಜಾನಪದ ಗೀತೆ ೧ ಇವಳೊಂದು ಪ್ರತಿಮೆ ಇವನೊಂದು ಪ್ರತಿಮೆ ಇವಳಿಗಾಗಿ ಇವನೋ ಇವನಿಗಾಗಿ ಇವಳೋ ಋತು ಋತುವಿಗೂ ಬೇರೆ ಬೇರೆ ರೂಪ ಇವನದೇ ಬೆಳೆ ಇವನಿಗಾಗಿ ಕ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...