ಎನ್ನ ಎದೆಯು ಬರಿದಾಗಿದೆ
ಅಲ್ಲಿ ಭಾವಗಳಿಲ್ಲ
ಮತ್ತೆ ಆಸೆಗಳ ಪ್ರತಿಬಿಂಬ
ಜೀವನಾಡಿಗಳಿಲ್ಲ
ಮರೆಯಲಿ ನೀನಿದ್ದು
ಏನಿದೆಲ್ಲ ನಿನ್ನ ಮಾಯೆ
ಕ್ಷಣ ಕ್ಷಣವು ಅಶ್ರು ಬಿಂಬ
ಮೋಹ ತಾಪಗಳು ಹೇಯೆ
ನಿನ್ನ ನೋಡಲು ಎನ್ನ
ಕಂಗಳು ತವಕಿಸಿವೆ
ನಿನ್ನ ದರುಶನಕೆ ಎನ್ನ
ಮನವು ಕಾತರಿಸಿದೆ
ಯಾವ ಜನುಮದ ಪಾಪ
ನಾ ನಿನ್ನ ನೋಡಲಾಗದೆ
ಈ ಜನುಮದಲ್ಲೂ ಕಾಣದೆ
ಬದುಕು ಬರಿದಾಗದೆ
ನನ್ನ ಹೃದಯ ತುಂಬ
ನೀನೆ ಬೆಳಗಬೇಕು
ಮಾಣಿಕ್ಯ ವಿಠಲನಿಗೆ
ಕೃಪೆ ತೋರಬೇಕು
*****















