ಗಗನವು ಯಾರದೊ ಕುಸುಮವು ಯಾರದೊ ಬಯಸುತಿರುವ ಹೃದಯಕೆ ರಂಗವು ಯಾರದೊ ಗೀತವು ಯಾರದೊ ಕುಣಿಯುತಿರುವ ಪಾದಕೆ ಹಲಗೆ ಯಾರದೊ ಬಳಪವು ಯಾರದೊ ಬರೆಯುತಿರುವ ಹಸ್ತಕೆ ತಂಬುರ ಯಾರದೊ ತಾಳವು ಯಾರದೊ ಹಾಡುತಿರುವ ಕಂಠಕೆ ಹೂವು ಯಾರದೊ ದಾರವು ಯಾರದೊ ಕೋಯುತ್ತಿರುವ...

ಇಗೊ ಸಂಜೆ, ಸಖಿ, ಚೆಂಬೊಗರಿಂ ರಂಗೇರಿಹ ಜಲದಾಬ್ಜಮುಖಿ ತುಸ ತುಟಿತೆರೆದು ಶಿಶುಚಂದ್ರನ ನಗೆ ನಗುವಳು ಸ್ವಾಗತವೊರೆದು; ನಿನ್ನು ಸಿ‌ರ್‌ ಕಂಪ ಕೊಳ್ಳಲು ಎಲರ್ ತರುತಿಹನೀ ಬನದಲರಿಂಪ; ಓ ಚಪಲಾಕ್ಷಿ, ಎನ್ನೆದೆಯಾಗಸದೊಳು ಬಿಡು ಅಕ್ಷಿಯ ಪಕ್ಷಿ, (ಇಗೊ ಸಂ...

ನೆತ್ತರ ಹೆಪ್ಪುಗಟ್ಟಿಸುವ ಅಮವಾಸ್ಯೆ ಕತ್ತಲು ಕಳೆದು ಸಣ್ಣ ಗೆರೆಯಂತೆ ಮೂಡಿದ ಈದ್ ಕಾ ಚಾಂದ್ ಮೋಡಗಳಿಲ್ಲದ ಶುಭ್ರ ಅಗಸದಲ್ಲಿ ಕಾಣುತ್ತಿದ್ದಾನೆ ನೋಡು ರಂಜಾನ್ ಹಬ್ಬದ ಸಣ್ಣ ಗೆರೆಯಂತಹ ಚಂದ್ರನ ನೋಡಿದ ಮಗಳು ಓಡೋಡಿ ಬಂದು “ಅಮ್ಮಿ ಈದ್ ಮುಬಾರಕ್” ಹ...

‘ನಮ್ಮ ಸೊಡರನುರಿಸುವಿರೇಂ ಮಿಣುಕಲಿಂತು ಬರಿಯೆ? ಪರರ ಬೆಳಕನಳುಪುವಿರೇಂ? ಸುಡದೆ ನಿಮ್ಮ ಗರಿಯೆ?’- ಜಂಕಿಸಿತಿಂತುಡು ಸಂಕುಳ ಹೊಂಚುವ ಮಿಂಚುಹುಳಂಗಳ ಬೇಸಗೆ ಕೊನೆವರಿಯೆ. ೭ ‘ಕುರುಡಾದಿರೆ ಬೆಳಕಿನಿಂದ? ನಿಮ್ಮ ಬೆಳಕಿದಲ್ಲ; ನಿಮ...

ಮರೆಯದಿರಣ್ಣ ಕನ್ನಡವ; ಜನ್ಮಕೊಟ್ಟ ಈ ಕನ್ನಡವ ಮಾತು ಕೊಟ್ಟ ನುಡಿಗನ್ನಡವ ತುತ್ತು ಕೊಟ್ಟ ತಾಯ್ಗನ್ನಡವ ಹಳಿಯದಿರಣ್ಣ ಕನ್ನಡವ; ತಾಯ್ಮೊಲೆ ಉಣಿಸಿದ ಕನ್ನಡವ ವಿದ್ಯೆಯ ನೀಡಿದ ಕನ್ನಡವ ಸಭ್ಯತೆ ಕಲಿಸಿದ ಕನ್ನಡವ ಅಳಿಸದಿರಣ್ಣ ಕನ್ನಡವ; ಶತಶತಮಾನದ ಕನ್ನ...

ಮೈಸೂರ ಮಲ್ಲಿಗೆಯಾ ಮುಡಿದು ಕಣ್ಸನ್ನೆಯಾ ನೋಟದಲಿ ಪಿಸು ಮಾತಿನಾ ಮೋಡಿಯಲಿ ಚಲುವ ರಾಶಿಯ ಬೀರುತ ಮನ ಸೆಳೆದಾ ನಲ್ಲೆಽಽಽಽ ಕಾದಿರಲು ನಲ್ಲನಿಗಾಗಿ ಬೆಳದಿಂಗಳು ಮೂಡಿತು ಹೊನ್ನ ಮಳೆ ಸುರಿಯಿತು ಗರಿಗೆದರಿ ಕುಣಿದಾ ನವಿಲು ಅವಳ ನೋಟಕ್ಕೆ ನಾಚಿತ್ತುಽಽಽಽ ...

ಮಾನವನ ಮಂಕುಗವಿಸುವ ಯೋಚನೆಗೆ ಮರುಗಿ ಹೊರಹರಿದನವನು ಅಂತರವ ಕ್ಷಮಿಸಿ, ಗೆಲಿಲಿಯನ್ ಗಲಭೆ ಗೊಂದಲಗಳಲ್ಲಿ; ಬ್ಯಾಬಿಲೋನಿನ ನಕ್ಷತ್ರಪ್ರಭೆ ಸೃಷ್ಟಿಸಿತು ಆಕಾರವಿರದ ಕಲ್ಪಕ ಕತ್ತಲನ್ನು; ಸತ್ತ ಕ್ರಿಸ್ತನ ನೆತ್ತರಿನ ಕಂಪು ಕೊಚ್ಚಿತು ಎಲ್ಲ ದೈವಿಕ ಸಹನಶ...

ನೋಟವನು ರಂಜಿಸಳು. ಬಗೆಬಗೆಯ ಹೂವಿಲ್ಲ ಬಣ್ಣದಾಟವ ಹೂಡಲೆನೆ. ಹಚ್ಚಹಸಿರಿರುವ ಸೀರೆಕುಪ್ಪಸ ತೊಟ್ಟು ಮಂದಗತಿಯಿಂದಿರುವ ಪಲ್ಲವಾಂಗಿಯು ಇವಳು. ಭೃಂಗ-ಕೇಲಿಯದಿಲ್ಲ ಇವಳ ಬಳಿಯಲಿ ಇವಳ ಹುಬ್ಬು ತಿಳಿಯದು ಬಿಲ್ಲ ಮಣಿತವನು, ಕಾಮಕಸ್ತೂರಿಯಾ ತೆನೆಗಿರುವ ಕಂ...

ನಾನೆ ಪಾರ್‍ವತಿ ನಾನೆ ಗಿರಿಜೆ ಶಿವ ಸಮರ್‍ಪಣೆ ಕೊಡುಶಿವಾ ನಾನೆ ಗೌರಿ ಗಂಗೆ ಶೈಲಜೆ ಶುಭ ಸಮರ್‍ಪಣೆ ಪಡೆಶಿವಾ ನೀನೆ ಸದ್ಗುರು ನೀನೆ ಶಿಕ್ಷಕ ನೀನೆ ನಂಬಿದ ವಲ್ಲಭಾ ನೀನೆ ಆತ್ಮಾರಾಮ ಪ್ರಿಯಕರ ನೀನೆ ತ್ರಿಭುವನ ವರಪ್ರಭಾ ಕೋ ಸಮರ್‍ಪಣೆ ಆತ್ಮ ತರ್‍ಪಣ...

ಜೀತಾ ಮಾಡಿ ಕಾಸ್ ಕೆರ್‍ಕೊಂಡಿ ಅಟ್ಟೀಲ್ ಎಡ್ತೀನ್ ಮೋಸೋಸ್ಕಂಡಿ ಏನೋ ಕುಡಿಯಾಕ್ ಬಂದ್ರೆ- ಸೇರಿಗ್ ಸೇರು ನೀರ್‍ನೆ ಬೆರಸಿ ಕಾಸ್ ಕೇಳ್ತೀಯ ಮೋಸ ಮರಸಿ ಸಾಚಾ ಮನ್ಸರ್ ಬಂದ್ರೆ? ೧ ನನ್ ಕೈ ಕಾಸು! ನಂಗ್ ಔಳ್ ಎಡ್ತಿ! ಮೋಸ ಮಾಡ್ತೀನ್ ನಾನ್ ಔಳ್ಗ್ ಇಡ್...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...