
ಹಸಿವೆಗೆ ತನ್ನೊಳಗು ಶಕ್ತವೋ ಹೊರಗೋ ಎಂಬ ಗೊಂದಲ. ರೊಟ್ಟಿಗೆ ಒಳ ಹೊರಗು ಬೇರಲ್ಲ ಶಕ್ತತೆಗಿಂತ ಮುಕ್ತತೆ ದಿವ್ಯವೆಂಬ ನಂಬುಗೆ....
ಹಸಿವು ರೊಟ್ಟಿಯ ನಡುವೆ ಶ್ರೇಷ್ಟತೆಗಾಗಿ ಕಿತ್ತಾಟ. ಸದ್ದಿಲ್ಲದೇ ಅಂಗಳ ಹೊಕ್ಕಿರುವ ಅತೃಪ್ತಿಗೆ ಕಷ್ಟಪಡದೇ ದಕ್ಕಿದೆ ಪಟ್ಟ. ಇಬ್ಬರ ಜಗಳ ಮೂರನೆಯವರಿಗೆ ಲಾಭ....
ಅವಳಿಗಾಗಿ ನಾನು ನನಗಾಗಿ ಅವಳು ಬೀಗುತ್ತಿದ್ದ ನಮ್ಮಿಬ್ಬರಿಗೆ ಅವಳಿಗಳಾಗಿ ಈಗ, ಅವಳು ಅವಳಿಗಳಿಗೆಂಬಂತೆಯೇ ಮಾತಾಡಿ ನನ್ನ ಬೇಗ ಜವಳಿ ಅಂಗಡಿಗೆ ಕಳಿಸಿಬಿಡುತ್ತಾಳೆ. *****...













