Home / Kannada Poem

Browsing Tag: Kannada Poem

ಡಾಕ್ಟರಾ ನೀನೂ ಜೋಕುಮಾರಾ ನಿನನಂಬಿ ನಾನೂ ಬಕಬಾರಾ ||ಪಲ್ಲ|| ನರಕದಾ ಕುಣಿಕಂಡೆ ಕುಣಿತುಂಬ ಹೆಣಕಂಡೆ ಹೆಣದಾಗ ಡಾಕ್ಟರ್‍ನ ಮನೆಕಂಡೆ ಇದ್ದೋವು ಸಾತ್ತಾವು ಸತ್ತೋವು ಎದ್ದಾವು ಹೆಣದಾಗ ಡಾಕ್ಟರ್‍ನ ಹಣಕಂಡೆ ||೧|| ಗಮ್ಮೆಂದು ನಾರ್‍ಯಾವು ಪಡ್ಡೆಂದು ಒ...

ಪಾಪು! ನಿನ್ನೆದುರಿನಲಿ ನಾನಿಲ್ಲವಾಗುವೆ; ಸಂಭ್ರಮಿಸುವೆ ತಾಯಿಯಂತೆ. ನಿನ್ನ ಮುದ್ದು, ಮೊದ್ದು ಮಾತುಗಳು ಸೋಲಿಸುವವು; ನಾನೀಸೂ ದಿನ ಆಡಿದ ಮಾತುಗಳ. ನಿನಗೆ ನಾನು ಮಣ್ಣು ಕುಂಬಾರನಿಗೆ ಒಪ್ಪಿಸಿಕೊಳ್ಳುವಂತೆ ಒಪ್ಪಿಸಿಕೊಂಡು ಸಂತಸದ ಐರಾಣಿಯಾಗುವೆ. ನ...

ಗೆಳೆಯ ರಹೀಮನ ಮನೆಯಲ್ಲಿ ಕುಟ್ಟಿದ ಮೆಹಂದಿಗೆ ಹಪಾಹಪಿಸಿ ಕಾಡಿ ಬೇಡಿ ಇಸಿದುಕೊಳ್ಳುತ್ತಿದ್ದೆ. ಕೈಬಣ್ಣ ಕೆಂಪಗಾದಷ್ಟು ಗುಲಾಬಿ ಅರಳುತ್ತಿತ್ತು ಮನದಲ್ಲಿ. ಪತ್ರ ಹೊತ್ತು ತರುವ ಇಸೂಬಸಾಬ್ ಬಂದಾಗಲೆಲ್ಲಾ ಚಾ ಕುಡಿದೇ ಹೋಗುತ್ತಿದ್ದ.. ಅಂಗಳದ ತುಂಬೆಲ...

ಹರಿಚರಣ ರತನ ಮಾನಸ ಮೋಹನ ಮುರಳಿ ನಂದಲಾಲ ಯಶೋದಾ || ಮುರಳಿಗಾನ ಆನಂದ ಯಮುನಾ ತೀರ ಗೋಪಿ ರಾಧಾ ಮನ ವಿಹಾರಿ || ಮದನ ಮೋಹನ ಭಾಗವತ ಗಾವತ ವೇದ ಪುರಾಣ ವಿಹಾರಿ || ಸುರನರ ಪೂಜಿತ ಸೇವಕ ಜನಮನ ಬಾಲಗೋಪಾಲ ಗಿರಿಧಾರಿ || ವಾಸುದೇವಸುತ ಭಕ್ತಾಧಿಪತಿ ಪಾಂಡವ...

ಸೆಟೆದು ನಿಂತಿದ್ದಾನೆ ಹದಿನಾಲ್ಕು ಹರೆಯದ ಹುಡುಗ ಎರಗಲಿರುವ ಗರುಡ, ಬಾಣ ಖ್ಯಾತ ವಾತ್ಸ್ಯಾಯನರ ಋಷಿಕುಲದ ಹೆದೆಯೇರಿ ಜಿಗಿಯಲರ್ಹತೆಯಿದ್ದ ಜಾಣ. ಹೋಮಧೂಮದ ಗಾಳಿ ವೇದಘೋಷದ ಪಾಳಿ ಎಂದೂ ತಪ್ಪಿರದ ಮನೆ ಈಗ ಖಾಲಿ. ತಾಯಿ, ಎಳೆತನದಲ್ಲೇ ಗಾಳಿಗಾರಿದ ಬೆಳಕ...

ತೋರಿ ಬಾರೆ ತೂರಿ ಬಾರೆ ತೋರ ಮುಡಿಯ ಚಂದ್ರಿಮೆ ಬಳುಕಿ ಬಾರೆ ಉಳುಕಿ ಬಾರೆ ಆಳುಕಿನಿಂದ ಸಂಭ್ರಮೆ ||೧|| ನೀನು ಇಲ್ಲ ನಾನು ಇಲ್ಲ ಜೀವ ಎಲ್ಲ ಶೂನ್ಯಮೆ ನೀನು ಬರಲಿ ಹೇಗೆ ಇರಲಿ ಬಾಳು ಪೂರ್‍ಣ ಪೌರ್ಣಿಮೆ ||೨|| ಒಂದೆ ದಿನಾ ಒಂದೆ ಕ್ಷಣಾ ಇದ್ದು ಇಲ್ಲ...

ಬಾಳ ಹೊಳೆ ಬತ್ತಿ ದಡಗಳೆರಡು ಒಣಗಿ ಪಾತ್ರವು ವಿಕಾರವಾಗಿ ತೆರೆದುಕೊಂಡು ನರಳುವ ನಡುವೆ ಜೀವ ಸೆಲೆಯಾಗಿ ಬಂದ ದೌಹಿತ್ರ ಚೆಂದಂಪು ತುಂಬಿತು. ಕುಸಿಯುತ್ತಿದ್ದ ಮನೆ, ಮನಸಿನಲಿ ಪ್ರಾಣ ವಾಯು ಪಲ್ಲವಿಸಿ ಕೈ ಜಾರಿ ಹೋಗುತ್ತಿದ್ದ ಬದುಕು ಮರಳಿ ತಕ್ಕೈಸಿಕೊ...

ಮೈತುಂಬಾ ಮಸಿ ಮೆತ್ತಿದರೂ ತೊಳೆದು ಬರಬಲ್ಲರು ಅವರು ಕೇಳಲುಬಾರದು ಮಸಿಯ ಮೂಲಕ್ಕೆ ಕಾರಣ ಅವರು ಮೇಲ್ಪಂಕ್ತಿಯ ಊಟಕ್ಕೆ ಕುಳಿತವರು. ಬಿಳಿಮೈಯ ಮಾತಿಗೆ ಬಸವನ ಗೋಣು ಎಂಜಲೆಲೆಗೆ ಮೈ ಉಜ್ಜಿಕೊಂಡವರು ಇವರು. ಕರಿಮೈಯ ಮಾರನ ಮನೆಯ ದೀಪದ ಬೆಳಕಿಗೆ ಯಾವ ಬಣ್...

1...8283848586...89

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...