ಪಾಪು!
ನಿನ್ನೆದುರಿನಲಿ
ನಾನಿಲ್ಲವಾಗುವೆ;
ಸಂಭ್ರಮಿಸುವೆ ತಾಯಿಯಂತೆ.

ನಿನ್ನ ಮುದ್ದು, ಮೊದ್ದು ಮಾತುಗಳು
ಸೋಲಿಸುವವು;
ನಾನೀಸೂ ದಿನ ಆಡಿದ ಮಾತುಗಳ.

ನಿನಗೆ ನಾನು ಮಣ್ಣು
ಕುಂಬಾರನಿಗೆ ಒಪ್ಪಿಸಿಕೊಳ್ಳುವಂತೆ
ಒಪ್ಪಿಸಿಕೊಂಡು
ಸಂತಸದ ಐರಾಣಿಯಾಗುವೆ.

ನನಗೆ ನೀನು
ಆತ್ಮ ದರ್ಶನಕೆ ಪ್ರೇರಕ
ನಿನಗೆ ನಾನು
ಲೋಕ ದರ್ಶನಕೆ ಪೂರಕ.

ನೀನು ಸುರಗಂಗೆ
ನಾನು ದಾಹಿ
ಅಪ್ಪುವೆ, ಪುಳಕಗೊಳ್ಳುವೆ
ಪಾವನವಾಗುವೆ.

ಆ ದಿವ್ಯ ಘಳಿಗೆ
ಕಳೆದ ಬಳಿಕ
ನೀನು ನೀನಾಗುವೆ
ನಾನು ಪರಿತ್ಯಕ್ತನಾಗುವೆ.
*****

ವೆಂಕಟಪ್ಪ ಜಿ
Latest posts by ವೆಂಕಟಪ್ಪ ಜಿ (see all)