Home / ಲೇಖನ / ವಿಜ್ಞಾನ / ಮಾಲಿನ್ಯ ರಹಿತ ಹೊಗೆಯುಗಳದ ರಿಕ್ಷಾಗಳು

ಮಾಲಿನ್ಯ ರಹಿತ ಹೊಗೆಯುಗಳದ ರಿಕ್ಷಾಗಳು

ಪೆಟ್ರೋಲ್ ಬಳೆಸುವ ದ್ವಿಚಕ್ರವಾಹನಗಳು ಅದರಲ್ಲೂ ಎರಡು ಸ್ಟ್ರೋಕ್‌ಗಳ ಯಂತ್ರಗಳು ಅತಿ ಹೆಚ್ಚು ಹೈಡ್ರೋ ಇಂಗಾಲದ ಮಲೀನ ಹೊಗೆಯನ್ನು ಹೊರಗೆಡವುತ್ತವೆ. ಇದರಿಂದ ಜೀವಕುಲದ ಉಸಿರಾಟಕ್ಕೆ ತೊಂದರೆ ಎಂಬ ಸತ್ಯ ಎಲ್ಲರಿಗೂ ಗೊತ್ತು. ಅದರಲ್ಲೂ ಕೆಲವರು ಪೆಟ್ರೋಲ್‌ನಲ್ಲಿ ಡೀಸೆಲ್ ಎಣ್ಣೆಯನ್ನು ಬೆರೆಯಿಸಿದಾಗ ಶಬ್ದವೂ ಕೂಡ ಕರ್ಕಶವಾಗುವುದಲ್ಲದೇ ಇನ್ನಷ್ಟು ಮಲೀನಯುಕ್ತ ವಾಯುಮಾಲಿನ್ಯವಾಗುತ್ತದೆ.

ಈ ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು “ಜಿ ಮತ್ತು ಟಿ ಯುಗೋಟೆಕ್” ಎಂಬ ಕಂಪನಿಯೊಂದು ಒಂದು ಉಪಕರಣವೊಂದನ್ನು ತಯಾರಿಸಿದೆ. ಇದನ್ನು ಬಿಡಿಭಾಗದಂತೆ ರಿಕ್ಷಾಗಳಿಗೆ ಜೋಡಿಸಬಹುದು. ಇದು ಪೆಟ್ರೋಲನ್ನು ಪ್ರೊಪೇನ್ ಆಗಿ ಪರಿವರ್ತಿಸುತ್ತದೆ. ಪ್ರತಿಭಾಗದಲ್ಲಿ ೧೨ ಲೀಟರ್ ಸಾಮರ್ಥ್ಯದ ಟ್ಯಾಂಕ್ ಮತ್ತು ಮೈಕ್ರೋ ಪ್ರೊಸೆಸಲ್ ನಿಯಂತ್ರಣವಿರುತ್ತದೆ. ಇದು ವಾಹನ ಬಳಸುವ ಪೆಟ್ರೋಲನ್ನು ನಿಯಂತ್ರಿಸುತ್ತದೆ. ದೇಶದಲ್ಲಿ ಇದರ ಪ್ರಯೋಗ ಈಗಾಗಲೇ ನಡೆದಿದೆ. ಜಗತ್ತಿನಲ್ಲಿ ಇದೊಂದು ಪ್ರಥಮ ಪ್ರಯೋಗವೆಂದು ಹೇಳಲಾಗುತ್ತದೆ. ಜಿ ಮತ್ತು ಟಿ ಯುಗೋಟೆಕ್ ಕಂಪನಿಯ ನಿರ್ವಾಹಕ ನಿರ್ದೇಶಕರಾದ ರಾಜೀವ ಸವಾರಾ ಅವರ ಪ್ರಕಾರ ಪ್ರೋಪೇನ್ನಿಂದ ಚಲಿಸುವ ರಿಕ್ಷಾಗಳು ಹೈಡ್ರೋಕಾರ್ಬನ್, ಕಾರ್ಬನ್ ಮೊನಾಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳಂತಹ ವಿಷಾನಿಲಗಳ ಕ್ಷಮತೆಯೇನೂ ಕಡಿಮೆಯಾಗಲಾರದು. ಬದಲಾಗಿ ಸುರಕ್ಷೆಗೂಳ್ಳುತ್ತದೆ. ಪ್ರೋಪೇನನ್ನು ಬದಲಿ ಇಂಧನವಾಗಿ ಭಾರತದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಅದು ವಿರಳವಾಗಿ ದೊರೆಯುವ ರಾಸಾಯನಿಕ ವಸ್ತು, ಆದರೆ ಜಿ ಮತ್ತು ಟಿ ಕಂಪನಿಯು ಪ್ರಾಯೋಗಿಕವಾಗಿ ದೆಹಲಿಯಲ್ಲಿ ಈ ಉಪಕರಣವನ್ನು ಬಳಸಲು ನ್ಯಾಯಾಲಯದ ಅನುಮತಿ ಪಡೆದಿದೆ.

ಸ್ಥಳೀಯ ಸರಕಾರಕ್ಕೆ ಈ ಪ್ರಯೋಗದ ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡಲೂ ಕೋರ್ಟ್ ಆದೇಶಿಸಿದೆ. ಪ್ರತಿ ರಿಕ್ಷಾಗೆ ಪ್ರೊಪೇನ್ ಟ್ಯಾಂಕ್ ಜೋಡಿಸಲು ೧೨,೦೦೦ ರೂಪಾಯಿಗಳಷ್ಟು ಖರ್ಚಾಗುತ್ತದೆ. ಈ ಪ್ರಯೋಗವು ಯಶಸ್ವಿಯಾದರೆ ಸರಕಾರವೇ ಪ್ರೋಪೇನ್ ಪರಿವರ್ತನೆಯ ಯಂತ್ರಗಳನ್ನು ಕೊಂಡುಕೊಂಡು ರಿಕ್ಷಾ ಮಾಲೀಕರಿಗೆ ಸರಬರಾಜು ಮಾಡುವ ಯೋಜನೆ ಇದೆ. ಇದಕ್ಕೆ ತಗಲುವ ಅಧಿಕ ಖರ್ಚನ್ನು ಹೆಚ್ಚಿನ ಪ್ರಮಾಣದ ಇಂಧನಕರದಿಂದ ಪಡೆಯಲಾಗುವುದು. ಪೆಟ್ರೋಲಿಗಿಂತ ಪ್ರೊಫೇನ್ ಸುಮಾರು ಅರ್ಧದಷ್ಟು ಅಗ್ಗವಾಗಿರುವುದರಿಂದ ಇದನ್ನು ಮುಂದೊಂದು ದಿನ ಎಲ್ಲ ಕಡೆ ಲಾಭದಾಯಕವಾಗಿ ಬಳಸಬಹುದು. ಇಂತಹ ರಿಕ್ಷಾಗಳು ಎಲ್ಲೆಡೆ ಚಲಾವಣೆಗೊಂಡರೆ ಒಂದಿಷ್ಟು ಪರಿಸರಕ್ಕೆ ಒಳ್ಳೆಯದಾಗಬಹುದೇನೋ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...