Home / Kannada Poem

Browsing Tag: Kannada Poem

ಗೆಳೆತಿ ನನ್ನ ಪ್ರೀತಿಯ ನಿನ್ನ ಗೆಳೆತಿಗೆ ಪರಿಚಯಿಸುವೆಯಾ?| ನನ್ನ ಹೃದಯದ ಮಾತುಗಳ ಅವಳ ಹೃದಯಕೆ ನೀ ಮುಟ್ಟಿಸುವೆಯಾ|| ಸದಾ ನನ್ನ ಜೊತೆಗಿರುವೆ ನನ್ನೆಲ್ಲಾ ಆಸೆಗಳ ಅರಿತಿರುವೆ| ಅವಳ ನಾನೆಷ್ಟು ಪ್ರೀತಿಸುವೆ ಎಂದು ನೀ ತಿಳಿದಿರುವೆ| ಆದರೂ ಅದೇಕಿಷ್...

ಮರ ಸರ್ವೋಪಯೋಗಿ ನಿಸರ್ಗದ ವರ ಹಾದಿ ಬದಿಯಲಿ ನಿಂತು ಕೊರಗುತಿದೆ. ನಾನು ಜೀವ ವಿರೋಧಿಯಲ್ಲ ಅಲ್ಲಗಳೆಯರು ಯಾರೂ ಇದನು! ಆದರೂ… ಕೆಲವರು ನನ್ನ ಮರೆಗೆ ಬರುವರು ಮಾಡ ಬಾರದುದ ಮಾಡುವರು ಸ್ವಯಂ ಸೊಂಪಾಗಿ ಬೆಳೆದುದ ತಪ್ಪುಮಾಡಿ ಕೊಂಬೆ ರೆಂಬೆಗಳ ಎಳ...

ಹರಿವ ತೊರೆಯ ಅಲೆಅಲೆಗಳಲಿ ನಿನ್ನ ಭಾವ ನರ್ತನ || ತುಡಿವ ಮನಗಳ ಜಾಲದಲಿ ತಣಿವು ಎರೆಯುವ ಚೇತನ || ಸೃಷ್ಟಿ ಸೊಬಗಿನ ಇಳೆಯರಂಗದಲಿ ಪ್ರಕೃತಿ ದೇವಿಯ ನರ್ತನ || ಅರಳು ಮಿಡಿಯುವ ವೀಣೆ ಕೊರಳಲಿ ಉಲಿವ ಗಾಯನ ನೂತನ || ಉದಯ ಕಾಲದ ಬಾನಿನೊಡಲಲಿ ನೂರು ರೂಪ ...

ಬೆಳಿಗ್ಗೆ ಪ್ರಗತಿಶೀಲರ ಸಭೆಯಲ್ಲಿ ಎಚ್ಚರಿಸಿದರು ಕವಿ : “ಬಾನು ಭೂಮಿ ಒಂದೆ ಸಮ, ಹಳ್ಳ ಕಡಲು ಒಂದೆ ಸಮ ಒಂದೆ ಸಮ ಒಂದೆ ಸಮ, ಕೊರಡು ಮರ ಒಂದೆ ಸಮ” ಗುಡುಗಿದರು ಕವಿ ಮಧ್ಯಾಹ್ನ ಮೈಸೂರಿನ ಕುಕ್ಕೂಟ ಸಭೆಯಲ್ಲಿ : “ವೈದಿಕ ಸಂಸ್ಕ...

ನೀನೆ ತುಪ್ಪ ನಾನೆ ದೀಪ ದೀಪ ಗೊಳಿಪೆ ಅಂಗಳಾ ||ಪಲ್ಲ|| ಬ್ರಹ್ಮ ತತ್ವ ಭೂಮಿ ಯುಕ್ತ ಮಧ್ಯ ಸುಮಮ ಸಂಪದಂ ಸಟೆಯ ಲೋಕ ಅವುಟು ಶೋಕ ಬಿಟ್ಟ ಬೀಕು ಬೆಂತರಂ ||೧|| ಇತ್ತ ಯಾತ್ರಿ ಸುತ್ತ ಧಾತ್ರಿ ರಕ್ತ ರಾತ್ರಿ ನರ್ತನಂ ಅತ್ತ ಅಮಮ ಶಾಂತಿ ಘಮಮ ಅಮರ ಸುಮಮ ...

ಹದಿನಾರರ ಹರೆಯದೋಕುಳಿಯಲ್ಲಿ ಕಾಲ ಜಗಮಘ| ಬದುಕು ಹರ್ಷಮಯ ಜಗವು ವರ್ಣಮಯ|| ಮನದ ಮಾತಿಗಿಂತ ರೂಪ ಆರ್ಕಷಣೆಗೇ ಒಲವು| ಬುದ್ಧಿ ಮಾತಿಗಿಂತ ಹೃದಯದ ಮಾತಿಗೆ ಸೆಳವು| ಎಲ್ಲಾ ಅಂದುಕೊಂಡಂತೆ ಆದ್ದದೇ ಆದರೆ ಶೃಂಗಾರವೀಕಾಲ|| ಸ್ನೇಹ ಜೊತೆಯಲಿ ಪ್ರೀತಿ ತಾನಾಗ...

ಗಾಢ ಸಂತಸದ ಮೌನ ಘಳಿಗೆಯಲಿ ನಿರಾಳವಾಗಿ ಸುಂದರ ಸಜ್ಜೆ ಸೇರಿ ಜೀವ ಸಂಗಾತಿಯನು ಬಾಚಿ ತಬ್ಬಿ ಎದೆಗೆ ಎದೆ ಬೆಸೆದು ಪ್ರೇಮ ಸಮಾಧಿಯಲಿ ಐಕ್ಯವಾಗಿ ಮೈಯಾದ ಮೈಯಾಲ್ಲಾ ಹುಟ್ಟು ಹಿಂಡಿದಂತಾಗಿ ಜೇನು ಬೆವರು ಧಾರೆ ಧಾರೆಯಾಗಿ ಹರಿದು ಜೀವಧಾತು ಸ್ವಾತಿ ಚಿಪ್...

ಅರುಣೋದಯವಾಯ್ತು ಮುದದಿಂದ ಹೊಸವರುಷದ ಹೊಸ ಹಗಲಲ್ಲಿ ನಸುನಾಚುವ ಮೊಗದಲ್ಲಿ || ಇಬ್ಬನಿಯ ತಂಪು ನೀಡಿ ಕಾಲಸೆರೆಯಲ್ಲಿ ನಮ್ಮನು ಮೀಟಿ ಹಗಲು ಇರುಳು ಕಣ್ಣಾಮುಚ್ಚಾಲೆ ಆಡಿಸಿ ಹರುಷವನು ನೀಡಿತು ವರುಷದಲ್ಲಿ || ವರುಷ ಕಳೆದು ವರುಷ ಬರಲು ದಿನಗಳುರುಳೀ ನೋ...

ಎಲ್ಲ ಬಿಟ್ಟು ಇದು ಇಲ್ಲಿಗೆ ಬಂತೆ? ಅಕ್ಕಿ ತುಂಬ ಬರಿ ಕಲ್ಲಿನ ಸಂತೆ ಕಾಲ ಚಪ್ಪಲಿ ಕಿರೀಟವ ಜಾಗ ಬಯಸಿ ಕುರುಡುಬುದ್ದಿಗೆ ಕ್ರೌರ್‍ಯ ಪರಾಕು ಸಲ್ಲಿಸಿ ಹುದುಕಿಟ್ಟಿದೆ ನಿನ್ನ ಹಟ್ಟಿಗೊಂದು ಹೆಸರ ಎರಗುವ ಮಂಚೆ ಎರಚಲು ಮುಖಕ್ಕೆ ಕೆಸರ. ತಾಳಿಕೊ ಮರಿ ತ...

ಯಸ್ ಯಸ್ ಯಲ್ಲವ್ವಾ ಡಿಸ್ ಮಿಸ್ ಕಲ್ಲವ್ವಾ ಕಾಳವ್ವಾ ಧೂಳಪ್ಪಾ ಕೇಳವ್ವಾ ||ಪಲ್ಲ|| ಮಜಕಟ ಕಟಕಟ ಕಿವಿತುಂಬ ವಟವಟ ಉಸ್ಸ್ ಉಸ್ಸ್ ಉಸ್ಸಾರ್‍ಗೋ ಕಿಸ್ಸ್ ಮಿಸ್ಸ್ ಹುಸಾರ್‍ಗೊ ಹಾಳಕೆರಿ ಹಳೆದವ್ವಾ ಬಡಿತೋ ಬಡಿತೋ ದೆವ್ವನ್ ಹೇಂತಿ ಹಳೆದವ್ವಾ ಹಡಿತೋ ಹಡ...

1...6061626364...89

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...