
ಗುರಿ ಇರಬೇಕು ಬಾಳಿಗೆ ಛಲವಿರಬೇಕು ಜೀವಕೆ| ಗುರಿಇರದ ಬಾಳಿಗೆಲ್ಲಿದೆ ಕೊನೆಯು ಛಲವಿರದ ಜೀವಕೆಲ್ಲಿದೆ ಬೆಲೆಯು| ಗುರಿ ಬೇಕು ಗಂಡಿಗೆ, ಛಲಬೇಕು ಹೆಣ್ಣಿಗೆ|| ಅತ್ತ ಇತ್ತ ಹರಿದಾಡುವ ಮನಸ ಅಂಕೆಯಲಿಡಬೇಕು| ಆಸೆ ಆಮೀಷಕೆ ಅಧೀನವಾಗದ ಹಾಗೆ ನಿಗಾವಹಿಸಲು...
ಬಿತ್ತೋ.. ಬಿತ್ತೋ.. ನನ್ನೆದೆ ಹುತ್ತವ ಕರಗಿಸಿ ಅರಿವಿನ ಬೀಜವ ಬಿತ್ತೋ.. ಬಿತ್ತೋ.. ಮನಸಲಿ ಕಟ್ಟಿಹ ಕಲ್ಮಷ ಕಟ್ಟೆಯ ಒಡೆದು ಶುದ್ಧ ಭಾವದ ಸಲಿಲವ ಚಿಮ್ಮಿಸೋ… ಚಿಮ್ಮಿಸೋ.. ವಿಷಮ ಆಸೆಯ ಕೋಶ, ಕೋಶವ ಕ್ಷಯಿಸಿ ಬುದ್ಧ ಬೆಳಕನು ಕಣ್ಣಲಿ ತುಂಬಿಸ...
ಹಸಿರು ನನ್ನದು ಹೂವು ನನ್ನದು ನಾನು ಹರುಷದ ಹೊಂಗೊಳಾ ಬೆಳಗು ನನ್ನದು ಬಣ್ಣ ನನ್ನದು ನಾನು ನಿನ್ನಯ ಬೆಳ್ಗೊಳ ||೧|| ಮುಗಿಲ ತೋರಣ ಚರಣ ಚರಣಾ ನೋಡು ಬಂದನು ಭಾಸ್ಕರಾ ಕಡಲ ಕಾಮಿನಿ ಇರುಳ ಯಾಮಿನಿ ನೋಡು ಹಾಡಿದ ಸುಸ್ವರಾ ||೨|| ಏನು ಮರಣಾ ಮತ್ತೆ ಜನನ...
ಏಕೆ? ಹೆಂಡತಿ.. ನಾ ಅಂದುಕೊಂಡ ಹಾಗೆ ಒಳ್ಳೆಯವಳಲ್ಲವೆಂದು ಕೊರಗುವೆ| ಏಕೆ? ಅನ್ಯರಿಗವಳ ಹೋಲಿಸಿ ಕ್ಷಣಕ್ಷಣಕೊಮ್ಮೆ ಒಳಗೊಳಗೆ ಅಸಮಧಾನಿಯಾಗುವೆ|| ಗುಣಗಳು ಒಮ್ಮೆಲೆ ಬದಲಾಗುವುದಿಲ್ಲ ಸ್ವಭಾವಗಳು ಸುಮ್ಮನೆ ಸರಿಯಾಗುವುದಿಲ್ಲ| ಕಾಲ ಬೇಕು, ಕಾಯಬೇಕು ನ...
ಮುದ್ದಾದ ಕುರಿಮರಿಯ ತರುವೆ ಬೆಳೆಸುವೆ ಕಕ್ಕುಲತೆಯಲಿ ಕೇಳೀತೆ ಹಸಿವೆಂದು ಬೆಬ್ಬಳಿಸಿಯಾತೆ ಬಾಯಾರಿಕೆಯೆಂದು ಮೊರೆದೀತೆ ದೇಹಾಲಸ್ಯವೆಂದು ನಮ್ಮಂತೆಯೇ ಅಲ್ಲವೆ ಅದರದೂ ಜೀವವೆಂದು. ಸಗಣಿ ಬಾಚುವೆ ಮೈಯ ತೊಳೆಯುವೆ ಕೈಯಾರೆ ತಿನ್ನಿಸಿ, ಕುಣಿಸಿ, ಆಡಿಸಿ ...
ನಿನ್ನೊಲುಮೆಯಲಿ ನಾನಿರುವೆ ನನಗಾಸರೆಯಾಗಿ ನೀನಿರುವೆ ಬದುಕುವ ಸುಂದರ ಕಲೆಯನ್ನು ಕಲಿಸಿದ ಕಲೆಗಾರ ನೀನು || ಕಡಲ ತೀರದ ದೋಣಿಯಲಿ ಕುಳಿತು ದಾರಿಯನು ತೋರಿ ದಡವ ಸೇರಿಸಿದ ಅಂಬಿಗ ನೀನು || ಸೂಜಿ ದಾರ ಎಂಬ ಬದುಕಿಗೆ ದಾರಿಯ ತೋರುತ ದಾರಕ್ಕೆ ಹೂವ ಪೋಣಿ...
ಬಂಗಾಳಕ್ಕೆ ಬಾಲ್ಯದಿಂದ ಬೆಳಕಿನ ಕನಸು, ಎಳೆದ ಗೆರೆ, ಬರೆದ ಅಕ್ಷರ, ಹರಿದ ದನಿ ಎಲ್ಲದರಲ್ಲಿ ಅದನ್ನೇ ಅರಸುವ ಮನಸು, ಆಕಾಶದಂಗಳದಲ್ಲಿ ಬಿಕ್ಕಿದ ಅಕ್ಕಿಕಾಳನ್ನೆಲ್ಲ ಹೆಕ್ಕಿ ತರುವ ಹಬ್ಬಯಕೆ ಈ ಹಕ್ಕಿಗೆ, ಹೀಗಿದ್ದೂ ಅದನ್ನು ಸುತ್ತಿ ನಿಂತ ಪಂಜರ ಬಿರ...
ಕಣಕಿ ಕೊಬ್ಬರಿ ಆತು ಹೊಟ್ಟು ಹುಗ್ಗಿಯು ಆತು ಏನ್ಕಾಲ ಬಂತವ್ವ ಕಂಗಾಲ ||ಪಲ್ಲ|| ರೊಟ್ಟೀಯ ಬೇಸಾಕ ಚಕಿಚೂರು ಇಲ್ಲಾತು ಹ್ಯಾಂಗವ್ವ ಮುಂದವ್ವ ಈ ಕಾಲ ಆರು ವರುಸಕ ಒಮ್ಮೆ ಬರಗಾಲ ಬರುತಿತ್ತು ಈಗೀಗ ವರುವರುಸ ಬರಗಾಲ ||೧|| ಏನು ಇಲ್ಲಾ ಅಂದ್ರು ಕಲ್ಲು ...













