ಹೇಗೆ ನಂಬಲಿ ನಿನ್ನ
ಕೃಷ್ಣಾ ರಾಧೇಯ
ಸಖಿಯರಗೂಡಿ ನೀನು
ಸರಸವಾಡುವುದು ಸರಿಯೇನು ||

ನಿನ್ನ ಅಂತರಂಗ
ಬಲ್ಲೇ ನಾನು ಕಪಟ
ನಾಟಕ ಸೂತ್ರಧಾರಿ ನೀನು ||

ವಿರಹ ತಾಪಸಿಯ
ಅರಿತು ನೀ ಮನವ
ಚಿವುಟುವುದು ಸರಿಯೇನು ||

ನಿನ್ನೊಲುಮೆ ಇಲ್ಲದೆ
ಬಾಡದ ಹೂ ಬಾಡಿದರೆ
ನಿನಗಿದು ತರವೇ ಕೃಷ್ಣಾ ||

ಕಾಡುವೆ ಏಕೆ ಸುಮ್ಮನೆ
ನನ್ನನು ಮನಸಿಜಾಕ್ಷನೇ
ಈ ಜೀವನವೂ ನಿನ್ನದೇ ಕೃಷ್ಣಾ ||
*****