ನಿನ್ನ ನೆನಪೇ

ನಿನ್ನ ನೆನಪೇ ನನಗೆ ಕಾವ್ಯ
ಇದರ ಹೊರತು ಯಾವುದು ಭವ್ಯ? /ಪ//

ಬಂದೆ ನೀನು ಬಾಳಿನಲ್ಲಿ
ಮೋಡವಾಗಿ ಅಂದು
ನಾ ಬಗೆದೆ ಮಳೆಯಾಗಿ
ಸುರಿಯುವೆ ನೀ ಎಂದು
ಆದರೇಕೊ ಮಳೆಯಾಗಲಿಲ್ಲ;
ಬಿರಿದ ನೆಲ ತಣಿಯಲಿಲ್ಲ

ನಾ ಕೇಳಿದ ಪ್ರೇಮ ಪದಕೆ
ಆದೆ ನೀನು ಅರ್ಥ
ಒಡನೆ ನುಡಿದೆ ಏಕೊ ಏನೊ
ವಿರಹವೆಂಬ ವಿರುದ್ಧಾರ್ಥ
ನನಗೆ ಪ್ರಿಯವು ಪ್ರೇಮ ಮಾತ್ರ
ಇದೆ ಅಲ್ಲವೆ ಬಾಳ ಸೂತ್ರ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಗೆ ನಂಬಲಿ ನಿನ್ನ
Next post ಬೇಕಾಗಿದ್ದಾರೆ: ಶಿಕ್ಷಕರು!

ಸಣ್ಣ ಕತೆ