Home / Kannada

Browsing Tag: Kannada

ಈತ: ಗುರುಗಳು ಹಳೇ ಶಿಷ್ಯನನ್ನು ಭೇಟಿ ಆದರು. ಏನಯ್ಯಾ ನಿನ್ನ ಭವಿಷ್ಯವನ್ನು ಹೇಗೆ ರೂಪಿಸಿಕೊಂಡೆ? ಶಿಷ್ಯ: ಅದು ಬಹಳ ಸುಲಭವಾಯಿತು ಗುರುಗಳೇ. ನನ್ನ ಕೈಲೇ ನನ್ನ ಭವಿಷ್ಯ ಇದೆಯೆಂದು ಗೊತ್ತೇ ಇರಲಿಲ್ಲ. ಈಗ ನೋಡಿ, ನಾನೊಬ್ಬ ಹೆಸರುವಾಸಿ ತಬಲಾ ವಾದ್ಯ...

ಭಾಷೆ ಹಲವು ಭಾವ ಹಲವು ಭಾವಕೆಲ್ಲಿ ಅಡೆ-ತಡೆ! ನದ-ನದಿ ತೊರೆ ಸಂಗಮದ ಸಂಭ್ರಮ ಅಂಬುಧಿಯಾಳಕೆ ಎಲ್ಲಿದೆ ತಡೆ? ದಿಕ್ಕು-ದಿಕ್ಕಲಿ ಬೀಸೋಗಾಳಿಗೆ ಯಾವ ಗಡಿಯ ಕಡೆಯಿದೆ ಭಾಷೆಯಾನದಿ ಜಗವ ತಿಳಿಯಲು ಹಮ್ಮು ಬಿಮ್ಮು ತೊರೆದಿಡಬೇಕಿದೆ ನುಡಿಗಳೆಂಬವು ಕರುಳ ಕುಡ...

ಬಾಲ್ಯ… ತಾಯಿ ಮಡಿಲ ಕೂಸಂತೆ ದಾರದುಂಡೆಯಲಿ ಸೂಜಿ ಸಿಕ್ಕಿಸಿದಂತೆ ಯೌವ್ವನ… ಮನದನ್ನೆ ಕೈ ಹಿಡಿದ ಪ್ರೇಮಿಯಂತೆ ಸೂಜಿದಾರದಲಿ ಸಿಕ್ಕುಬಿದ್ದಂತೆ ವೃದ್ಧಾಪ್ಯ… ಕಾಲನ ಜಾರು ಬಂಡೆಯಲಿ ಧೊಪ್ಪನೆ ಜಾರಿದಂತೆ ದಾರದಿಂದ ಸೂಜಿ ಕಳಚಿ ಬಿ...

– ಸುಭಾಶ್ ಏನ್ ನೇಳಗೆ ಜೀವಪ್ರಪಂಚದಲ್ಲಿಯೇ ಸಸ್ಯಗಳು ವಿಶಿಷ್ಟವಾದ ವ್ಯೆವಿಧ್ಯತೆಯನ್ನು ತೋರುತ್ತದೆ. ಎಕಕೋಶೀಯ ಸೂಕ್ಷ್ಮ ಸಸ್ಯಗಳಿಂದ ಹಿಡಿದು ಬೃಹದಾಕಾರದ ಮರಗಳವರೆಗೆ ಆಕಾರದಲ್ಲಿ, ರಚೆನೆಯಲ್ಲಿ ಜೈವಿಕ ಕ್ರಿಯೆಯಲ್ಲಿ ಭಿನ್ನವಾಗಿರುವ ಸಸ್ಯಗ...

ಹೆಣ್ಣು… ಹೊನ್ನು… ಮಣ್ಣು ಕದನಕೆ ಮೂಲ ಎನುತಿರೆ ಹೆಣ್ಣು… ಕುದುರೆ… ನೀರು… ಅರಿಯರು ನೆಲೆಯ ಮೂಲನು ಎನ್ನುವ… ಪ್ರಶ್ನೆಗೆ ಉತ್ತರವು ಮರೀಚಿಕೆಯಲಿ ಮರೆಯಾಗುತಿಹುದು ಅಂದು-ಪ್ರೀತಿ ಬಾನಂಗಳದಿ ಜೋಡಿ ಹಕ್ಕಿಗ...

ನಮ್ಮೂರ ಕೇರಿಯ ರಸ್ತೆಯ ಅಂಚಿನಲ್ಲಿ ಕುಳಿತಿದ್ದಾನೆ ಕಾಲಗರ್ಭದ ಹಿರಿಯಜ್ಜ ಅರವತ್ತು ವಸಂತಗಳ ಅರಿವಿನ ಅಗಾಧ ಶಕ್ತಿಯ ಬದುಕಲಿ ಬಳಲಿದ ಹಿರಿಜೀವ ಮುದುಡಿದ ನೆರೆಗಳ ಮುಖದಿ ಕಳೆದಿಹ ಬದುಕಿನ… ಬಾಳಸಂಜೆಯ ಎದುರುನೋಡುತಿಹನು ಬರಲಿರುವ ದಿನಗಳ ಸಮಯವ...

ಕನ್ನಡ ಸಾಹಿತ್ಯದಲ್ಲಿ ಸ್ತ್ರೀಸಂವೇದನೆಯ ನೆಲೆಗಳು-ಎನ್ನುವ ವಿಷಯವು ಬಹು ದೊಡ್ಡ ವ್ಯಾಪ್ತಿಯುಳ್ಳದ್ದು. ಈ ವಿಷಯವನ್ನು ಇಡೀ ಕನ್ನಡ ಸಾಹಿತ್ಯಕ್ಕೆ ಅನ್ವಯಿಸಿ ಮಾತನಾಡುವುದು ಈ ಪ್ರಬಂಧದ ವ್ಯಾಪ್ತಿಯನ್ನು ಮೀರಿ ನಿಲ್ಲುತ್ತದೆ. ಹಾಗಾಗಿ ಮಹಿಳೆಯರ ಬರವ...

ನಮ್ಮೂರ ಕೇರಿಯಲಿ ಯಾರೂ ಹಸನಾದ ಬದುಕು ಕಂಡವರಿಲ್ಲ ಮನುಷ್ಯರ ತರ ಬದುಕಿದವರಿಲ್ಲ ಇಲ್ಲಿ ಹುಟ್ಟಿದವರು… ಒಂದು ಹಿಡಿ ಅನ್ನಕ್ಕಾಗಿ ಬೊಗಸೆ ನೀರಿಗಾಗಿ ಬಾಯಿತೆರೆದು ಕೈಮಾಡಿ ಕಾಯುತ್ತಾ ನಿಲ್ಲುವರು. ಬೈಗುಳಗಳೊಂದಿಗೆ…. ಮುಂಜಾನೆ ಮನೆಗೂಡ...

ಸಾರೋ ಸಾರೋ ಸಾರೋ ಸುಮ್ಮನೆ ನರಕಕಿಳಿವರೇನೋ ||ಪ|| ಪರಸ್ತ್ರೀಯರ ತಡವಿ ಕರವ ಪಿಡಿವರೇನೋ ಸುರರು ನರರು ಎಲ್ಲರು ಜವನದಿ ಹರಲಿಹೊತ್ತದ್ದನ್ನು ಅರಿಯದಾದಿಯೇನೋ ||೧|| ಮೋಹಿಸಿ ಮಾತುಗಳಾಡಿ ನಯದಿ ಗಮ್ಮನೆ ನೋಡಿ ಭಯವು ಇಲ್ಲದೆ ಮೈಯ ಮುಟ್ಟಿ ಬಿಂದು ಕೈಯ ಹ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...