Home / Kannada

Browsing Tag: Kannada

ದಕ್ಷಿಣ ಕೊಡಗಿನ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಜನಿಸುವ ಲಕ್ಷ್ಮಣತೀರ್ಥ ಒಂದು ಮೋಹಕವಾದ ನದಿ. ಅದರ ಬಲ ತಟದಲ್ಲೊಂದು ಪುಟ್ಟ ಗುಡಿಸಲಿತ್ತು. ಅದರಲ್ಲಿ ಅಪ್ಪ ಮಗಳು ವಾಸಿಸುತ್ತಿದ್ದರು. ರಾಮಪಣಿಕ್ಕರ್‌ ಮತ್ತು ಇಚ್ಚಿರೆ ಮೋಳು. ಅದು ಬಿಟ್ಟರೆ ಒಂ...

ಯಜಮಾನಿ: “ಇನ್ನು ಮೇಲೆ ಇಷ್ಟೊಂದು ಚೆನ್ನಾಗಿ ನೀನು ಅಲಂಕಾರ ಮಾಡಿಕೊಂಡು ನಮ್ಮ ಮನೆ ಕೆಲಸಕ್ಕೆ ಬರಬೇಡ.” ಕೆಲಸದಾಕೆ: “ಯಾಕೆ ತಾಯಿ, ಈಗ ಒಂದು ತಿಂಗಳಿಂದಲೂ ನಿಮ್ಮ ಮನೆಗೆ ಕೆಲಸಕ್ಕೆ ಬರುವಾಗ ಹೀಗೆಯೇ ಅಂದವಾಗಿ ಅಲಂಕಾರ ಮಾಡಿಕ...

ಮಕರ ಸಂಕ್ರಮಣದ ಕಾಲಕ್ಕೆ ಸೊಲ್ಲಾಪುರದಲ್ಲಿ ಸಿದ್ಧರಾಮೇಶ್ವರನ ಜಾತ್ರೆ ಆಗುತ್ತದೆ. ಆ ಕಾಲಕ್ಕೆ ಸುತ್ತಲಿನ ಹತ್ತಿಪ್ಪತ್ತು ಹರದಾರಿಗಳಿಂದ ಜನರು ಬಂದು ಸೇರುತ್ತಾರೆ. ದೇವರಿಗಾಗಿ ಬರುವವರೂ ಅಷ್ಟೇ. ವ್ಯಾಪಾರಕ್ಕಾಗಿ ಬರುವವರೂ ಅಷ್ಟೇ. ಏತಕ್ಕಾಗಿ ಅಲ್...

ಕೋಜಾ ಸರ್ಕಾರ ಅಂದಾಕ್ಷಣ ಗಾಬರಿಯಾಗಬೇಕಾಗಿಲ್ಲ ಬಿಡ್ರಿ. ಕಾಂಗ್ರೆಸ್ನೋರು ಅಧಿಕಾರ ಕಳ್ಕೊಂಡು ಸಿಡಿಲು ಬಡಿದೋರಂಗಾಗಿ ನಾಲಿಗೆ ಮ್ಯಾಗೆ ಹಿಡಿತಾನೇ ಕಳ್ಕೊಂಡು ಸರ್ಕಾರನಾ ‘ಕೋಜಾ’ ಅಂತ ಲೇವಡಿ ಮಾಡಿದ್ರೂ ಅಂಥ ಸೀರಿಯಸ್ ಆಗಿ ತಗಬೇಕಿಲ್ಲೇಳಳ್ರಿ. ಅವರು...

ಅವರು: (ಕುಡಿದ ಯೋಧನನ್ನು ಕುರಿತು) “ಏನಯ್ಯಾ ನೀನು ಇನ್ನೂ ಯೋಧನಾಗಿಯೆ ಇದ್ದೀಯ. ನಾನು ನೋಡು ಈಗಾಗಲೇ ಮೇಜರ್ ಆಗಿದ್ದೇನೆ.” ಯೋಧ: “ಆದರೆ ಏನು? ನಾನು ಕುಡಿದಾಗ `ಕಮ್ಯಾಂಡರ್’ ಆಗಿರುತ್ತೇನಲ್ಲಾ!” ***...

ತೀರ ಸಣ್ಣವ ಇದ್ದಾಗ ಸಣ್ಣಪೋರನ ಲಗ್ನ ಆಗಿತ್ತು. ಲಗ್ನ ಆಗಿದ್ದು ಅವನಿಗೆ ಸಹ ಗೊತ್ತಿರಲಿಲ್ಲ. “ಎಲ್ಲಾರೂ ಅತ್ತೀಮಾವನ ಮನೇಗಿ ಹೋಗತಾರ ನಾನೂಬಿ ಹೋಗುತೆ” ಅಂದಾಗ “ನಿಂಗ ಖೂನ ಹಿಡಿಯುದಿಲ್ಲ ಮಗಾ” ಎಂದು ಅವ್ವ ಅಂದರೂ ಕೇಳ...

ಬಾಳಿಗೆ ಬೇಕು ಎರಡು ಡಿಗ್ರಿ ಒಂದು ಬದುಕನು ಕಲಿಯುವ ಗ್ರಾಜುಯೇಷನ್ ಇನ್ನೊಂದು ಸಾಯಲಂಜದಿರುವುದಕೆ ಪೋಸ್ಟ್ ಗ್ರಾಜುಯೇಷನ್ ಆತ್ಮಸಾಧನೆ, ಸಂಶೋಧನೆ ಜೀವನ್ಮುಕ್ತಿಗೆ. ***** ಪುಸ್ತಕ: ಮಿನುಗು ದೀಪ    ...

ಎಂ.ಎಫ್. ಹುಸೇನ್ ಎಂಬ ಖ್ಯಾತ ಚಿತ್ರಕಾರನ ಇನ್ಶಿಯಲ್ಲೇ ಆತನ ಜಾತಕ ಹೇಳಿಬಿಡುತ್ತೆ ನೋಡ್ರಲಾ. ಎಂ ಯಾನೆ ಮೆಂಟಲ್, ಎಫ್ ಯಾನೆ ಫೀವರ್. ಮೆಂಟಲ್ ಫೀವರ್ಗೆ ತುತ್ತಾಗಿರೋ ಹುಸೇನಜ್ಜಂಗೆ ಬೆತ್ಲೆ ಚಿತ್ರ ಬಿಡಿಸೋ ಗೀಳು ಭಾಳ ಕಣ್ರಿ. ಅಗ್ದಿ ಫೇಮಸ್ಸಾದ ಮಂ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...