
ಎಂಜಲು ಮೆತ್ತಿ ಮಲಿನಗೊಳುವ ರೊಟ್ಟಿ ಮೈಲಿಗೆ. ಎಂಜಲೊಳಗೆ ಹಾಡಿ ಕುಣಿದು ಕುಪ್ಪಳಿಸುವ ಹಸಿವು ಮಡಿ ಮಡಿ. ವ್ಯಾಖ್ಯೆಯೂ ಪ್ರಭುತ್ವದ ಮೂಗಿನ ನೇರಕ್ಕೇ. *****...
ಮೌನದ ಕಣಿವೆಯಲ್ಲಿ ಕಳೆದು ಹೋದ ಮಾತುಗಳು ನನ್ನ ಅವಳ ನಡುವಿನ ಸಂಬಂಧ್ಕೆ ಸಾಕ್ಷಿಗಳು *****...
ರೂಹುಳ್ಳ ರೊಟ್ಟಿಗೊಂದೇ ಅರ್ಥ ನಿರಾಕಾರ ಅವಿನಾಶಿ ಹಸಿವೆಗೆ ನೂರು ಪರಮಾರ್ಥ ಈ ಅಂತರಗಳ ಅರಿಯುವ ಕ್ಷಣ ರೊಟ್ಟಿಗೆ ಅಲ್ಲೋಲಕಲ್ಲೋಲ. *****...
ಅಷ್ಟೆಲ್ಲಾ ತಾರೆಗಳ ಬಿಗಿ ಪಹರೆಯ ನಡುವೆಯೂ ತಿಂಗಳಿಗೊಮ್ಮೆ ಕಣ್ಮರೆಯಾಗುವ ತುಂಟ ಚಂದಿರನಂತೆ, ಮೈ ಎಲ್ಲಾ ಕಣ್ಣಾಗಿ ಕಾದಿರುವ ಹಸಿವಿನ ಪರಿಧಿ ದಾಟಿ ಮರೆಯಾಗಿ ನಿಡುಸುಯ್ಯುತ್ತದೆ ರೊಟ್ಟಿ. *****...













