ದುಷ್ಟರು

ದುಷ್ಟರನು ಬಹುದೂರವಿರಿಸಯ್ಯ ಹರಿಯೆ ಇಷ್ಟಾರ್ಥಗಳನೆನಗೆ ಕೊಡದಿರಲು ಸರಿಯೆ ಎನ್ನ ಒಳಗಡಗಿರುವ ಕಳ್ಳರಿಗೆ ಸೋತಿಹೆನು ನಿನ್ನ ಧ್ಯಾನವನೆನಗೆ ದಕ್ಕಗೊಡರಿವರು ಕಣ್ಣು ಬಡಿಯುವ ಕ್ಷಣಕೆ ನಿನ್ನ ಮರೆಸುತಲಿಹರು ಇನ್ನಾವ ಬಗೆಯೊಳಗೆ ಧನ್ಯಳಾಗುವೆನೊ ವಿಷಮಯದ ಮೋಹವನು ಸವಿಮಾಡಿ ಉಣಿಸುವರು...

ದಾರಿ

ದಾರಿ ಎಂದರೆ ಎಲ್ಲರ ಪಾದದ ಗುರುತುಗಳು ಹೊತ್ತ ಭಾರದ ಹೃದಯದ ಮನ ಕಾಣಿಸುವ ಚಲನೆ, ಫಳಫಳಿಸಿದ ಬೆವರು ಹನಿಗಳು. ದಾರಿಗುಂಟ ಸಾಗಿದ ಕಣ್ಣೋಟಗಳು, ಅಂತರಂಗ ಕಲುಕಿ ಬೀಸುವ ಗಾಳಿ, ಪೂರ್ವವಲ್ಲದ ನಡುವೆ, ಒಮ್ಮೊಮ್ಮೆ ಸೂಸುವ...

ಸಮರ್ಥನೆ : ಸೈತಾನ

ಹೆಂಡದಂಗಡಿಯಂತೆ ಕತ್ತಲು ಕೋಣೆ ನಮ್ಮ ಮನೆ ದೇವರ ಕೋಣೆ ದಿನಕೆರಡು ಬಾರಿ ಅವನ ಸ್ನಾನ ಊಟ ಉಪಚಾರ ಧೂಮಪಾನ ಈಸಾಯಿ ಧಪನದಂತೆ ಧೂಪಾನದ ಹೊಗೆ ಹಿತ್ತಾಳೆ ತಟ್ಟೆಯಲಿ ಕೆಂಪು ದಾಸವಾಳದ ಹೂವು ಆಗತಾನೇ ಕೊರೆದಿಟ್ಟ...

ನೀ ಹೀಗೆ ಇರಬಾರದೆ

ಅದೇಕೆ ಶರಧಿ ನೀ ಹೀಗೆ ಉಕ್ಕಿ ಆರ್ಭಟಿಸುವೆ ಎದೆಯಾಳದ ಭಾವಗಳ ಹರಿಬಿಡುವೆಯಾ ಹೀಗೆ ನೀ ಎಷ್ಟೆ ಉಕ್ಕಿದರೂ ವೇಗೋತ್ಕರ್ಷದಿ ಬೋರ್ಗರೆದರೂ ನಿಲ್ಲಲಾರೆ ನೀ ಕೊನೆಗೂ ದಡದಿ ಉಕ್ಕಿದಷ್ಟೆ ವೇಗದಿ ಹಿಂದಕ್ಕೋಡುವೆ ಪುಟಿದೆದ್ದ ಚಂಡಿನಂತೆ ಗುರುತ್ವಾಕರ್ಷಣೆಯ...

ಕಣ್ಕಾಪು ಬಿಗಿದ ಕುದುರೆ

ಇಲ್ಲ ಅಕ್ಕಪಕ್ಕದ ಪರಿವೆ ಬೇಕಿಲ್ಲ ಕಣ್ಕಾಪಿನಾಚೆಯ ಗೊಡವೆ ಉದ್ದಾನು ಉದ್ದ ಕಣ್ಣು ಹಾಯ್ದಷ್ಟು ದೂರ ದಾರಿ ಮಲಗಿದೆ ಹೀಗೇ... ನೇರ ಏರುಪೇರಿಲ್ಲ. ಅಡೆತಡೆಗಳೂ ಇಲ್ಲ ಚೌಕಟ್ಟು ಮೀರಿ ನೋಡುವಂತಿಲ್ಲ ತನ್ನ ಪರಿಧಿಯೊಳಗೆ ಕಂಡದ್ದೇ ಸತ್ಯ...

ನಕ್ಸಲ್ಲೈಟು

ತಮ್ಮೂರಿಗೆ ಎಲೆಕ್ಟ್ರಿಕ್ ಲೈಟ್ಸ್ ಬರುವಂತೆ ಮಾಡಬೇಕೆಂದು ಆಗುಂಬೆ ಸಮೀಪದೊಂಟಿ ಮನೆಯ ಜಮೀನ್ದಾರರು ಒತ್ತಾಯಪಡಿಸುತ್ತಲೆ ಇದ್ದರು ಲೈಟ್ ಲೈಟ್ ಅಂದಾಗಲೆಲ್ಲಾ ಎಂ.ಎಲ್.ಎ ವೆಯಿಟ್, ವೆಯಿಟ್ ಎನ್ನುತ್ತಲೇ ಇದ್ದರು. ಅಂತೂ ಕೊನೆಗೊಂದು ದಿನ ಕ್ವೈಟಾಗಿ ಬಂದಿದ್ದು ಎಲೆಕ್ಟ್ರಿಕ್...

ರೊಕ್ಕದ ರೇಸು

ರೊಕ್ಕದ ರೇಸು ಹೊಂಟೈತೆ ತಗೊ ಸಿಕ್ಕಿದ ದಾರಿಯೆ ಹಿಡಿದೈತೆ ನನಗೇ ತನಗೇ ಎನ್ನುತ ನುಗ್ಗಿದೆ ಬಾಚುತ ದೋಚುತ ಗಳಿಸುತ ಬಲಿಯುತ ಓಡಲಾಗದೇ ಕಂಗೆಟ್ಟವರನು ತೊತ್ತಳ ತುಳಿಯುತ ಸಾಗೈತೆ ಹೊಟ್ಟೆಗಿಲ್ಲದೇ ಬಟ್ಟೆಗಿಲ್ಲದೇ ಗೂಡು ಇಲ್ಲದೆ ಪಾಡು...

ತುಂಬಿದ ಕಪ್ಪನೆ ನೇರಿಳೆ

ತುಂಬಿದ ಕಪ್ಪನೆ ನೇರಿಳೆಯಂತೆ ಮಿರಿ ಮಿರಿ ಮಿಂಚುವ ಮಗುವೊಂದು ಚಿಂದಿಯನುಟ್ಟಿದೆ, ಚರಂಡಿ ಬದಿಗೆ ಮಣ್ಣಾಡುತ್ತಿದೆ ತಾನೊಂದೆ ದಾರಿಯ ಎರಡೂ ದಿಕ್ಕಿಗೆ ವಾಹನ ಓಡಿವೆ ಚೀರಿವೆ ಹಾರನ್ನು, ಮಗುವಿನ ಬದಿಗೇ ಭರ್ರನೆ ಸಾಗಿವೆ ನೋಡದಂತೆ ಆ...
cheap jordans|wholesale air max|wholesale jordans|wholesale jewelry|wholesale jerseys