ರೊಕ್ಕದ ರೇಸು

ರೊಕ್ಕದ ರೇಸು ಹೊಂಟೈತೆ ತಗೊ
ಸಿಕ್ಕಿದ ದಾರಿಯೆ ಹಿಡಿದೈತೆ

ನನಗೇ ತನಗೇ ಎನ್ನುತ ನುಗ್ಗಿದೆ
ಬಾಚುತ ದೋಚುತ ಗಳಿಸುತ ಬಲಿಯುತ
ಓಡಲಾಗದೇ ಕಂಗೆಟ್ಟವರನು
ತೊತ್ತಳ ತುಳಿಯುತ ಸಾಗೈತೆ

ಹೊಟ್ಟೆಗಿಲ್ಲದೇ ಬಟ್ಟೆಗಿಲ್ಲದೇ
ಗೂಡು ಇಲ್ಲದೆ ಪಾಡು ಇಲ್ಲದೆ
ನರಳುವ ಮಂದಿ ಹೊರಳಾಡೈತೆ
ತುಳಿಯುವ ಕಾಲಾಗೆ ಬಿದ್ದೈತೆ

ರೊಕ್ಕದ ದಾರ್ಯಾಗೆ ಕರುಣೆಯು ಬತ್ತೈತೆ
ಹೃದಯವು ಕೊರಡೇ ಆಗೈತೆ
ಮಾನವೀಯತೆಯು ಕೊಳಚೆಯ ಸೇರಿದೆ
ಸವಕಲು ನಾಣ್ಯ ಆಗೈತೆ

ನ್ಯಾಯ ನೀತಿಗಳು ಪ್ರೀತಿ ಮಮತೆಗಳು
ಭಾವುಕ ಭ್ರಮೆಗಳ ಗೊಣಗಾಟ
ದೇಶ ಭಕ್ತಿಯೋ ಕವಿಗಳ ರೋಗ
ರೊಕ್ಕದ ಮುಂದೇ ಹುಡುಗಾಟ

ತಾಯಿಯೆ ಆಗಲಿ ತಂದೆಯೆ ಆಗಲಿ
ರೊಕ್ಕದ ಮುಂದೇ ಮುದಿಹದ್ದು
ಅಣ್ಣ ತಮ್ಮಂದಿರು ಅಕ್ಕ ತಂಗಿಯರು
ಮಾತಾಡಿಸಿದರೆ ವಿಷಮದ್ದು

ಸುತ್ತಲ ಜಗತ್ತು ಕಾಣದ ಹಾಂಗೆ
ಕುರುಡನ ಮಾಡುವುದೀ ರೊಕ್ಕ
ದೀನ ವಾಣಿಗಳು ಕೇಳಿಸದ್ಹಾಂಗೆ
ಕಿವುಡನ ಮಾಡುವುದೀ ರೊಕ್ಕ

ಕೋಮಲ ಭಾವನೆ ಮುಟ್ಟದ ಹಾಂಗೆ
ಕೊರಡುಗಟ್ಟಸುವುದೀ ರೂಕ್ಕ
ಎಲ್ಲರ ಸೌಖ್ಯದ ಆದರ್ಶಗಳನು
ತರಗೆಲೆ ಮಾಡುವುದೀ ರೊಕ್ಕ

ನೆಲೆಯೇ ಇಲ್ಲದವರೆಷ್ಟೇ ಇರಲಿ
ನನ್ನ ಸೈಟುಗಳೂರೂರಲ್ಲಿ
ಕಾಲಲ್ಲಿ ನಡೆವರ ಖರ್ಮಗಳಿರಲಿ
ಹಾರುವೆ ನಾ ಕಾರುಗಳಲ್ಲಿ

ಕಾಸಿಗು ಗತಿಯಿಲ್ಲದ ಕೋಟಿ ಜನ
ಕೋಟಿ ಕೋಟಿಗಳು ನನಗಿರಲಿ
ಚಳಿ ಬಿಸಿಲುಗಳಲ್ಲಿ ಒದ್ದಾಡುವ ಜನ
ಏರ್ ಕಂಡಿಷನ್ನು ಮನೆಯಿರಲಿ

ನೌಕರಿಗಾಗಿ ಲಕ್ಷ ಲಕ್ಷಗಳು
ಕೊಡುವೆನು ನನಗೇನಿಲ್ಲ ಭಯ
ವರದಕ್ಷಣೆಗೋ ಎಷ್ಟು ಲಕ್ಷಗಳು
ಕೇಳಲು ನಾಚಿಕೆ ಏಕಯ್ಯ

ಹರಕು ಬಟ್ಟೆಗಳ ಮಕ್ಕಳ ಮುಂದೆ
ನನ್ನ ಮಗಳ ಬರ್ಥ್‌ಡೇ ಪಾರ್ಟಿ
ವಿಧವಿಧ ತಿಂಡಿ ಷೋಕೀ ಮಂದೀ
ಕಣ್ಣುಕುಕ್ಕುಬೇಕು ಈಪಾಟಿ

ಊರಿಗೇ ಊರೇ ನಿಂತು ನೋಡುವುದು
ರೊಕ್ಕುಳ್ಳ ನಮ್ಮ ಮದುವೆಗಳ
ಸಾವಿರಗಟ್ಟಲೆ ತಿಂದೆಂಜಲದೆಲೆ
ಮುತ್ತಬೇಕು ತಿರುಕರ ಜಗಳ

ರೊಕ್ಕ ಮಾಡುವುದು ಒಂದೇ ಮಂತ್ರ
ರೊಕ್ಕ ಗಳಿಸುವುದೆ ನಮ ತಂತ್ರ
ರೊಕ್ಕವಿದ್ದವನೆ ಮನುಷ್ಯ ಲೋಕದಿ
ಇಲ್ಲದವನೆ ಹೆಣ ಅತಂತ್ರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೂಕು – ನುಗ್ಗಲು
Next post ನಕ್ಸಲ್ಲೈಟು

ಸಣ್ಣ ಕತೆ

 • ಮೌನರಾಗ

  -

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… ಮುಂದೆ ಓದಿ.. 

 • ಹೃದಯದ ತೀರ್ಪು…

  -

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… ಮುಂದೆ ಓದಿ.. 

 • ಮೋಟರ ಮಹಮ್ಮದ…

  -

  ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… ಮುಂದೆ ಓದಿ.. 

 • ಲೋಕೋಪಕಾರ!

  -

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… ಮುಂದೆ ಓದಿ.. 

 • ಕರಿಗಾಲಿನ ಗಿರಿರಾಯರು…

  -

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… ಮುಂದೆ ಓದಿ..