
ಆ ನಾನು ಈ ನಾನು ತಾ ನಾನು ನಾ ತಿರೆಯೊಳಗಣ ಬೀಜ ಬಿತೈತೆ ಹೊರಗಣ ನೀರ ಹಾಸೈತೆ ಮನುಜ.. ಹಾರೈಕೆ ನಿನಗೆ ಹಾರೈಕೆ ನಿನಗೆ..|| ಆನು ಎಂದರೆ ತಾನಾನುನಾ ಬಾಳು ಎಂದರೆ ನಾನಾನುನಾ ಎರಡರ ಹಾದಿ ಒಂದೇ… ಭೇದವಿಲ್ಲವೆಂಬಂತೆ ಹಾರೈಕೆ ನಿನಗೆ ಹಾರೈಕೆ || ...
ಮಗುವೇ ನಿನ್ನದೊಂದು ಮುದ್ದಾದ ನಗುವಿನಿಂದಲೇ| ಜಗದ ಎಲ್ಲಾ ನೋವ ಕ್ಷಣದಿ ಮಾಯ ಮಾಡಿ ಬಿಡುವೆ|| ಮಗುವೇ ನಿನ್ನ ನಗುವೇ… ಸಮ ಯಾವುದಿದೆ ನಿನ್ನ ತಾವರೆ ಕುಡಿ ಕಣ್ಣ ಕಾಂತಿಗೆ || ನಿನ್ನ ಹಸಿಮೈಯ ಹಾಲುಗೆನ್ನೆಯ ಮೃದು ಕಮಲದಳದಂತಿಹ ತುಟಿಗಳಲಿ ಹೊರ...
ಜೀನ್ಗೊಟ್ಟಿ ನನಹೇಂತಿ ಕೈಕಟ್ಟ ಬಾಯ್ಕಟ್ಟ ತೌರೋರು ಬಂದಾಗ ಹುಂಚಿಪಕ್ಕ ಒಂದಕ್ಕ ಹತ್ತುಂಡಿ ಬುಟಿತುಂಬ ಹೋಳೀಗಿ ಕರಿಗಡಬು ಹೆರತುಪ್ಪ ಚೊಕ್ಕಚೊಕ್ಕ ||೧|| ಗಂಡಗ ಚಮಚೆಯ ತುಪ್ಪಾನ ನೀಡಾಕಿ ಅಣ್ಣಗ ತಂಬೀಗಿ ಸುರುವ್ಯಾಳ ಮಕ್ಳೀಗೆ ಚಟ್ನೀಯ ಕಿರಿಬೆಳ್ಲೆ ಹ...
ಯಾರು ಯಾರಿಗಾಗಿ ನೀನು ಯಾರಿಗಾಗಿ ಹೊಗಳಿದೆ ಯಾರಿಗಾಗಿ ತೆಗಳಿದೆ ಯಾರಿಗಾಗಿ ನಗಿಸಿ ಅಳಿಸಿದೆ ಯಾರ್ಯಾರು ಬಲ್ಲರೂ ನೀನು ಹೇಳು || ಯಾರಿಗಾಗಿ ಜೀವ ತಳೆದೆ ಯಾರಿಗಾಗಿ ಬಂದು ನಿಂದೇ ಯಾರಿಗಾಗಿ ಜೀವ ಸವೆದೇ ಯಾರು ಯಾರಿಗಾಗಿ ಮನುಜ ನೀನು ಹೇಳು || ಜೀವ ...
ಯುಗಾದಿ ಬರುತಿದೆ ಹೊಸಯುಗಾದಿ ಬರುತಿದೆ| ಎಲ್ಲೆಡೆ ಹಸಿರ ಸಿರಿಯು ಚಿಗುರಿ ಬೇವುಹೊಮ್ಮಿ ಮಾವು ಚಿಮ್ಮಿ ನಮಗೆ ಹರುಷ ತರುತಿದೆ ಹೊಸ ವರುಷ ಬರುತಿದೆ ನವಯುಗಾದಿ ಬರುತಿದೆ|| ವನರಾಶಿ ನವ್ಯನವಿರಾಗಿ ಮೈಯತಳೆದು ಬಾಗಿ ತೂಗಿ| ಸಸ್ಯ ಶ್ಯಾಮಲೆ ಕಂಪಬೀರಿ ಕೈ...
ಆಗೊಂದು ಈಗೊಂದು ತಿನಬಾರದ ಬೇನೆ ತಿಂದು ಈದದ್ದು ತಿರುವಿ ತಿರುವಿ ನೋಡಿದಂತೆಲ್ಲಾ ರಾಚುವುದು ಕಣ್ಣು ಒಂದಿಲ್ಲೊಂದು ಕುಂದು. ವಿಷಾದಿಸುತ್ತೇನೆ ಈದೇನೆ ಎಂದಾದರೊಂದು ದಿನ ಕುಂದಿಲ್ಲದೊಂದು ಪಡೆದೇನೆ ಸಮಾಧಾನ! *****...













