ತನುವೆಂಬ
ಗುಡಿಯ ಕಟ್ಟಿ
ಒಡಲೆಂಬ
ಗರ್ಭಗುಡಿ ಒಳಗೆ
ಜಠರ ಎಂಬ
ಪ್ರಣತಿಯ ಇತ್ತು
ಹಸಿವು ಎನ್ನುವ
ತೈಲವನೆರೆದು
ನಂದಾ ದೀಪ
ಬೆಳಗಿಸಿರಲು
ಆತ್ಮ ಎನ್ನುವ
ಜ್ಯೋತಿ ಚೇತನವು
ಸದಾ ಹಸನ್ಮುಖಿಯಾಗಿ
ನಲಿದಾಡುತಿಹುದು
ತೈಲ ಮುಗಿದು
ಹೋಗುವ ಮುನ್ನ
ತುಂಬಿಸಲೇ ಬೇಕು
ಮತ್ತೆ ತೈಲ
ಹೊತ್ತೊತ್ತಿಗೆ
ಆತ್ಮ ಜ್ಯೋತಿಯು
ಪ್ರಶಾಂತವಾಗಿ ಪ್ರಜ್ವಲಿಸಲು
*****


















