
ಸುಡುಸುಡುವ ಆಕ್ರೋಶ ಒಳಗೇ ಅದುಮಿಟ್ಟು ಎಂದಿಗೂ ಹಡೆಯದ ರೊಟ್ಟಿಯ ಬಸಿರು. ದಿಟ ಕಂಡರೂ ಕಣ್ಣುಮುಚ್ಚಿ ಸದ್ದಿಲ್ಲದೇ ಒಳಗೇ ಬೆಚ್ಚಿ ಏನೂ ಕಂಡಿಲ್ಲವೆಂಬ ಕಪಟ ನಾಟಕವಾಡುತ್ತದೆ ಹಸಿವು. *****...
ನಿನ್ನ ಗೈರು ಹಾಜರಿ ಮನದ ಗುಜರಿಯಲ್ಲಿ ಗೆದ್ದಲು ತಿನ್ನುತ್ತ ಬಿದ್ದಿದ್ದ ನೆನಪಿನ ಬುತ್ತಿ ಹೆಕ್ಕಿ ತಂದಿದೆ *****...
ತನಗೆ ಬೇಕೆಂದಂತೆ ತಾನೇ ಕಂಡುಕೊಳ್ಳುವ ಸತ್ಯದ ಹುಡುಕಾಟದಲ್ಲಿ ಹಸಿವು ನೀಡುತ್ತದೆ ಏಕಪಕ್ಷೀಯ ತೀರ್ಪು ರೊಟ್ಟಿಯ ಜೀವಕಾರುಣ್ಯ ಬೀದಿಗೆ ಬಿದ್ದ ಬೆಪ್ಪು. *****...
ಅವಳ ಕೆನ್ನೆಗೆ ನಗು ಬಳಿದು ಹೋದ ಅವನ ಮುಗ್ಧತೆ ಇದೀಗ ಬದುಕಿನ ಸಂತೆಯಲ್ಲಿ ಬೆಲೆ ಕಳೆದುಕೊಂಡಿದೆ. *****...
ಜಂಗಮ ಹಸಿವೆಗೆ ಆಲಯ ಕಟ್ಟುವುದು ಬೇಕಿಲ್ಲ. ಆಜ್ಞೆಗೆ ರೊಟ್ಟಿ ಕಿವಿಗೊಟ್ಟಿದೆ ಮನಸು ಕೊಟ್ಟಿಲ್ಲ. ಜಂಗಮದ ಬಯಲಲಿ ಸ್ಥಿರ ಆಲಯ ಕಟ್ಟುತ್ತದೆ. ರೊಟ್ಟಿ ಅಳಿಯುತ್ತದೆ ಸೃಷ್ಟಿಯಂತಿಮ ಸತ್ಯದ ಸ್ಥಾವರ ಉಳಿಯುತ್ತದೆ. *****...













