Home / Shailaja Hassan

Browsing Tag: Shailaja Hassan

ಬಣ್ಣಗೆಟ್ಟ ಇರುಳುಗಳ ನಡುನಡುವೆ ಹೊರಳಿ ನರಳಿವೆ ವಿರಹದುರಿಯ ದಳ್ಳುರಿ, ಎಲ್ಲಿ? ಎಲ್ಲಿ? ಹೋದವೆಲ್ಲಿ ಮುಗಿಲ ಪಡೆ? ಸುರಿಸದೆ ಒಂದಿಷ್ಟು ತಣ್ಣನೆ ಹನಿಗಳ ಬಾಯಾರಿವೆ, ತೊನೆಯುವ ಬಯಕೆ ಆಸೆಗಳ ಚೆಲ್ಲಾಟದಲಿ ಮೂಕಸಂಕಟ ಯಾರಿಗೆ ಬೇಕಾಗಿತ್ತು ನೂರು ಹೆಣ್ಣ...

ಕುದುರೆ ಏರಿಬರುವ ಶೂರಧೀರ ನನ್ನವ ಲೋಕಸುಂದರ ಚೆನ್ನ ಚೆನ್ನಿಗ ತನ್ನ ತುಂಬಿಕೊಂಡ ಕಣ್ಣ ಒಳಗೆ ಮತ್ಯಾರನೂ ನೋಡ ಬಯಸದವನ ಕೊರಳಿಗೆ ತನ್ನ ಮಾಲೆ ಕನಸು ಕಂಡ ಮಾಧವಿ ಏನಾಯ್ತೆ ಸಖಿ ನಿನ್ನ ವಿಧಿ ಮಾರಾಟವಾಯ್ತೆ ಒಡಲು ಅಷ್ಟಶತ ಶ್ವೇತ ಅಶ್ವಕೆ ಹುಂಬ ಶಿಷ್ಯನ...

ಇವಳು ನನ್ನವ್ವ ತಂಪಿಗಾಗಿ ಕಾದವಳು ಹನಿ ಬೀಳದೆ ಒಡಲೆಲ್ಲ ಬಿರುಕು ಬಿರುಕು ಬರಗಾಲ ಒಳಗೂ ಹೊರಗು ಒಲೆಯ ಒಳಗಿನ ಬಿಸಿ ಕಾವು, ಕಾವಿನಲಿ ಬೆಂದ ಅವ್ವ ಹನಿಗಾಗಿ ಮೊಗವೆತ್ತಿ ನಡುನೆತ್ತಿಯ ಮೇಲಿನ ಕಪ್ಪು ಮೋಡಕ್ಕಾಗಿ ಕಾಯುತ್ತಲೇ ಇರುವಳು ಬೆಳ್ಳ ಬೆಳ್ಳನೆ ...

ನನ್ನ ಎದೆಯ ಮೀಟಿಮೀಟಿ ಏನ ಹುಡುಕತಲಿರುವೆ ಅಲ್ಲಿಲ್ಲ ಯಾವ ಲೋಹದದಿರು ಹೊನ್ನ ಹೊಂಗನಸು, ಬೆಳ್ಳಿನವಿರು ಪಚ್ಚೆ ಹವಳದ ಭಾವಗಳು ಬರಿದು ಬರಿದು, ಈಗಿನ್ನೇನು ಅಲ್ಲಿಹುದು ನೀನಿದ್ದೆ ಅಂದು ಅಲ್ಲಿ ಬರಿ ಛಾಯೆ ಇಂದು ಇಲ್ಲಿ ಈ ಮನವ ಬಗೆದು ಬಗೆದು ನೆತ್ತರವ...

ಹೊರಟೆ ಎಲ್ಲಿಗೆ ಅಭಿಸಾರಿಕೆ ನಿರ್ಧಯಳೇ ಕಂದನ ಕರೆಗೆ ಬಿಂಕ ಬಿನ್ನಾಣವ ಉಟ್ಟು ಮುತ್ತು ರತ್ನವ ತೊಟ್ಟು ಹೊರಟೆ ಎಲ್ಲಗೆ ನೀ ಎಲ್ಲಿಗೆ? ಈ ಸೌಂದರ್ಯದ ಪ್ರಖರತೆ ಆಗಬಾರದೆ ಅತ್ಮದ್ದು ಹಿಂದೊಮ್ಮೆ ಹೊರಟಿದ್ದಳು ಅಕ್ಕ ದೂರಾಗಿಸಲು ಮನದೊಳಗಿನ ದುಃಖ ಭವಬಂಧ...

ಬೊಬ್ಬಿಡುವ ಶರದಿ ನಾನಲ್ಲ ಸದ್ದಿಲ್ಲದೆ ಹರಿವ ನದಿಯೂ ಅಲ್ಲಾ ಬಳ್ಳಿ ಕುಸುಮ ಕೋಮಲೆ ನಾನಲ್ಲ ನಾನು ನಾನೇ ಗೆಳೆಯ ನಾನು ನಾನೇ, ನಾನು ನಾನೇ ಮನದಾಳದ ಭಾವಗಳೆಲ್ಲ ಉರಿವ ಕೆಂಡವಲ್ಲ ಬೆಳದಿಂಗಳ ತಂಪೂ ಅಲ್ಲಾ ಕೆಂಪು ಕೆಂಡ ತಂಪಿನ ಮಧ್ಯೆದೊಳಗಿನ ಭಾವ ನಾನು...

ಬಿಟ್ಟು ಬಿಡು ಗೆಳೆಯ ನನ್ನಷ್ಟಕ್ಕೆ ನನ್ನ ರೆಕ್ಕೆ ಹರಿದ ಹಕ್ಕಿ ಹಾರಿಹೋಗುವುದೆಲ್ಲಿ ಇಷ್ಟಿಷ್ಟೆ ಕುಪ್ಪಳಿಸಿ ಅಲ್ಲಲ್ಲೆ ಅಡ್ಡಾಡಿ ನಿನ್ನ ಕಣ್ಗಾವಲಲ್ಲಿಯೇ ಸುತ್ತಿ ಸುಳಿದು ಒಂದಿಷ್ಟೆ ಸ್ವಚ್ಛಗಾಳಿ ಸೋಕಿದಾ ಕ್ಷಣ ಧನ್ಯತೆಯ ಪುಳಕ ತಣ್ಣನೆಯ ನಡುಕ ಎ...

ಹಾದಿಬೀದಿಯಲ್ಲಿ ಹೊನ್ನ ಮಾರುತ್ತಿದ್ದರಂತೆ ಅಂದು, ಅಂತೆಯೇ ಮಾರಿದನೊಬ್ಬ ತನ್ನ ಸತಿಯ ನಡುಬೀದಿಯಲಿ ಕ್ರಯಕ್ಕಿಟ್ಟ ಹೆಣ್ಣು ಹರಾಜಾದಳು ಬಿಕರಿಗಿಟ್ಟ ವಸ್ತುವಿನಂತೆ ಕೊಟ್ಟಮಾತ ಉಳಿಸಿಕೊಳ್ಳಲು ಸತ್ಯದ ಕೀರ್ತಿಗಾಗಿ ಸತಿಯ ಮಾರಿ, ತನ್ನ ತಾ ಮಾರಿಕೊಂಡ ಹ...

ಯಾರು ಕೊಟ್ಟಿದ್ದೆ ಶಾಪ? ಬರಿತಾಪ, ಪರಿತಾಪ ಧರ್ಮ ಕರ್ಮದ ಗೆರೆ ಎಳೆದವರಲ್ಲವೇ ಅನುಕೂಲ ಸಿಂಧು ಶಾಸ್ತ್ರಸಮ್ಮತ ಅವರಿಗವರದೆ ಒಮ್ಮತ ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಒಡ್ಡಬೇಡ ಗೋಣು ಯಾರ ಕೈಲಿದೆ ಪರತಂತ್ರ ಶಕ್ತಮನಸ್ಸಿನೊಡತಿ ಮತ್ತೇಕೆ ಹೊಯ್ದಾಟ ನಡೆ...

ಅವಳದೇ ಆದ ಆ ಹಳೆಯ ಪೆಟ್ಟಿಗೆ ಈಗಲೂ ಇದೆ ಅವಳೊಟ್ಟಿಗೆ ಪಡಿಯಕ್ಕಿ ಕೆಡವಿ ಹೊಸಿಲು ತುಳಿದು ನವಬದುಕಿನೊಳಗೆ ಅಡಿಯಿರಿಸಿದಾಗಲೇ ಜೊತೆಯಾಗಿ ಸಖಿಯಾಗಿ ಬಂಧನವ ಬೆಳೆಸಿತ್ತು ನವ ವಧುವಿನ ನವಿರು ಭಾವನೆಗಳ ಗೊಂಚಲಿಗೆ ಹಸಿಹಸಿ ಕನಸುಗಳ ಭ್ರಾಮಕ ಜಗತ್ತಿನ ಬಯ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....