Home / Kavana

Browsing Tag: Kavana

ನನ್ನ ಗೆಳತಿ ಅವಳು ಎಂದಂತೆ ಹೆಜ್ಜೆ ಇಟ್ಟಂತೆ ಲಜ್ಜೆಯ ಬೆಸದಂತೆ ಅವಳೊಂದು ಮಿಲನ ಮುಕ್ತ ಮುಕ್ತ ಕಾವ್ಯ ಹರಿದು ಹೋದಂತೆ ನದಿ ನದಿಗಳ ಕಡಲ ಸೇರಿ ಮುತ್ತಾದಂತೆ ಬದುಕಿನ ಮಜಲುಗಳ ಅಪ್ಪಿಕೊಂಡು ನನ್ನ ಗೆಳತಿ ಅವಳು ಮುಕ್ತ ಸಂತೆಯ ಮಳಿಗೆಗಳ ಸುತ್ತಿ ಸುಳಿದ...

ನಂಬಿ ಕೆಟ್ಟವರಿಲ್ಲವೋ ಹರಿಯ; ದಾಸರೆಂದರು ನಂಬಿ ಕೆಟ್ಟೆ ನಾ ಮಾರಿ ಮನೆ ಮಾರು ಮಾಡಿದ ಊರಿಂದೂರಿಗೆ ಗಡಿಪಾರು ಆದರೂ ಕಳಿಸಿರುವೆ ಅವಸರದಿ ತಾರು ಬೇಕೇಬೇಕೆಂದು ನೆಮ್ಮದಿಯ ಸೂರು *****...

ಆರದಿರು ದೀಪವೇ ನಿನ್ನ ಬೆಳದಿಂಗಳ ಕಿರಣವೆ ಎನ್ನ ಮನೆಯ ಬೆಳಕು || ನಲುಗದಿರು ರೂಪವೇ ನಿನ್ನ ಸೌಮ್ಯದಾ ಲಿಂಗವೇ ಎನ್ನ ಮನೆಯ ಮೂರ್ತಿಯು || ಬೀಸದಿರು ಮಾಯಾಜಾಲವೇ ನಿನ್ನ ಕರುಣೆಯಿಂದಲೆ ನಮ್ಮ ಅಂತರಂಗದ ಹೊಳಪು || ಬಾರದಿರು ಕಷ್ಟವೇ ಎನ್ನ ಮನೆಯಂಗಳವು ...

ಚುಟುಕ ಬರೆಯುವುದು ನನಗೊಂದು ಗೀಳು ಎಲ್ಲವೂ ಯಥಾರ್‍ಥವಲ್ಲ ಅರೆಬರೆ ಸುಳ್ಳು ಬರೆದುದು ಹತ್ತರಲಿ ಒಂಬತ್ತು ಜೊಳ್ಳು ಒಂದು ಮುತ್ತಾದಾಗ ನಾನಾದೆ ಮರುಳು *****...

ಜಯ ಕನ್ನಡ ಜಯ ಕನ್ನಡ ಜಯ ಕನ್ನಡ ಮಾತೇ ಜಯಹೇ ಅಗಣಿತ ಗುಣ ಗಣಗಳ ಜನ್ಮದಾತೆಯೇ ||ಜ|| ನೀನು ನಲಿದೊಡೆ ಅದುವೆ ಪುಣ್ಯಕ್ಷೇತ್ರ ನೀನು ಒಲಿದೊಡೆ ಅದುವೆ ಪಾವನ ತೀರ್ಥ ನೀನು ಮುನಿದೊಡೆ ಅದುವೆ ಪ್ರಾಳಯವಮ್ಮಾ || ಜ || ನಿನ್ನ ಮಡಿಲ ಮಕ್ಕಳು ನಿನ್ನ ಮಮತೆಯ...

ಪ್ರೀತಿ ಎಂದರೆ ಏನೆಂದು ಕೇಳುವ ನನ್ನಿನಿಯಾ ಇರುಳಿನಲಿ ಬಯಸುವನು ನನ್ನಾಂಗಾಂಗ ಸವಿಯಾ ಅರಿಯಲಾರನು ಮಧುರ ಭಾವನೆಗಳ ತನಿಯಾ ಉಣಿಸಿ ನನ್ನೆದೆಗೆ ಕಾಮನೆಗಳ ಕಹಿಯಾ *****...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...