Home / Poem

Browsing Tag: Poem

ಪ್ರಜಾ ರಾಜ್ಯದ ಅಣಕಾಟ ನೋಡಿರಿ ಜನರ ತಿಣುಕಾಟ   ||ಪ|| ಪ್ರಜೆಗಳ ರಾಜ್ಯವು ಪ್ರಜೆಗಳಿಗಾಗಿಯೆ ಪ್ರಜೆಗಳಿಂದಲೇ ನಡೆಯಲು ಬೇಕು ಪ್ರಜೆಗಳ ಹೆಸರಲಿ ಕೊಬ್ಬುವ ಜನರನು ಯಾವ ರೀತಿಯಲಿ ಕೊಲಬೇಕು ||೧|| ಓಟಿನ ಮುಂಚಿನ ಸೋಗು ನೋಡಿರೋ ನಮ್ಮನೆ ನಾಯಿಯ ಪರಿಯಂತ...

ದೂರವಿರಲಿ ಪ್ರೇಮಿಸಿರುವ ಹೆಣ್ಣು ದೂರವಿದ್ದರೇನೆ ಪ್ರೇಮ ಚೆನ್ನು, ತೀರಾ ಬಳಿ ಬಂದರೆ ತಡೆಯೇ ಇಲ್ಲ ಎಂದರೆ ಸುಟ್ಟು ಬಿಡುವ ಬೆಳಕೀಯುವ ಭಾನು. ಏನು ಚೆಲುವ ದೂರ ನಿಂತ ಚಂದಿರ! ಬರಿಗಣ್ಣಿಗೆ ತಂಬೆಳಕಿನ ಮಂದಿರ, ದುರ್ಬೀನಿನ ನೋಟಕೆ ವಿಜ್ಞಾನಿಯ ಪಾಠಕೆ ...

ಇಕ್ಕಟ್ಟು ‘ಶಾರ್ ಕಣಿವೆ’ ಮಾರ್ಗ ಧೂಳು ತುಂಬಿದ ಭಯಾನಕ ಪೊದೆಗಳು ಕಣಿವೆ ಎದೆಗೆ ತಬ್ಬಿದ್ದ ಮುಳ್ಳು ಗೋರಂಟಿಗಳ ಹಳದಿ ಹೂವುಗಳ ತುಂಬ ಜೇಡರ ಬಲೆಗಳು ಹಾರಾಡುತ್ತಿವೆ ಹುಳು ಹುಪ್ಪಡಿಗಳು ಚಿರ್ ಚಿರ್ ಚಿಪ್ ಚಿಪ್‌ಗೂಡುತ್ತ ಕಂದಕದಾಳಕ್ಕೆ ಬೈನಾಕ್ಯುಲರ್...

ನನ್ನ ಹಾದಿ ನನಗೆ ನಿಮ್ಮ ಹಾದಿ ನಿಮಗೆ ಒಂದೊಂದು ಸಂದರ್ಭದಲ್ಲಿಯೂ ಈ ಮೇಲಿನ ಮಾತುಗಳಿಗೆ ಒಂದೊಂದು ಅರ್ಥ ಹಾದಿ ಎಂದರೆ ಇಲ್ಲಿ ನಿಲುವು ‘ನನ್ನ’ ಎಂಬುದು ಅದಕ್ಕೆ ಒಲವು ಇದು ಒಂದು ಸರ್ತಿ ಹಾದಿ ಎಂದರೆ ಇಲ್ಲಿ ಹಾದಿ ‘ನನ್ನ’ ಎಂದರೂ ಹಾಗೇ ಓದಿ ಇದು ಇನ...

ವೇದ ಪುರಾಣ ಶಾಸ್ತ್ರಾಗಮ ವ್ಯಾಕರಣ ಛಂದ ಕಾವ್ಯ ಮೀಮಾಂಸೆಗಳ ಕಂಠಸ್ಥ ಮಾಡಿಕೊಂಡಿದ್ದರೆ ಇಂಗ್ಲೀಷ ಜಮನ್ ಫ್ರೆಂಚ್ ಇತ್ಯಾದಿ ಕವಿ ವಿಮರ್ಶಕರನ್ನು ಬಾಯಿ ತುಂಬ ಮುಕ್ಕಳಿಸಿ ಉಗುಳುತ್ತಿದ್ದರೆ ಪಂಪ ರನ್ನ ಹರಿಹರ ಕುಮಾರವ್ಯಾಸ ಲಕ್ಷ್ಮೀಶಾದಿಗಳನ್ನು ಕಂಡ ...

ವರ್ಗ: ಕವನ ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ ವ್ಯಾಕರಣ ದೋಷ ತಿದ್ದುಪಡಿ: ಕಿಶೋ ಚಂದ್ರ ೪೭ ಯಾವ ಮಲ್ಲಿಗೆಗಂಪು ಸಂಚೆಗಾಳಿಯ ತಂಪು – ಬೆನ್ನೇರಿ ಹಾಯುತಿದೆ ಹೀಗೆ ಇಂದು? ಯಾವುದೋ ನೆನಪನ್ನು ಹೊತ್ತು, ಹೊಸಿಲಿಗೆ ಬಂದು ಯಾಚಿಸಿದೆ ಬರಲೇನ...

ಹದಿನೆಂಟರ ಬಾನು ಕನಸುಗಳ ಸರಮಾಲೆ ಹೊತ್ತು ಹಾರಿ ಬಂದಿದ್ದಾಳೆ ಹೈದರಾಬಾದಿನಿಂದ ಅರೇಬಿಯಕ್ಕೆ ಅರಬ್ಬನ ದರ್ಬಾರಿನಲ್ಲಿ ರಾಣಿಯಹಾಗಿರಬಹುದೆಂದು ಮೈ ತುಂಬ ವಸ್ತ್ರ ಒಡವೆಗಳು ತೊಟ್ಟು ಮರ್ಸಿಡಿಸ್ ಕಾರಿನಲ್ಲಿ ಮೆರೆಯಬಹುದೆಂದು ಕೈಕಾಲಿಗೊಂದೊಂದು ನೌಕರಿ ...

ಮುಖಗಳಿಲ್ಲದ ಕನ್ನಡಿಯೊಳಗೆ ಇಣುಕಿ ಮುಖಗಳನ್ನು ಹುಡುಕುತ್ತಾ ಬೆಕ್ಕಸ ಬೆರಗಾಗುತ್ತಾನೆ ತನ್ನದೇ ಮುಖ ಕಂಡ ನಿರ್ಲಿಪ್ತ ಆದರೂ ಹುಚ್ಚು ಪ್ರೇಮಿ! ತಪ್ಪು – ಸರಿಗಳ ಲೆಕ್ಕ ಹಿಡಿದು ತೂಗಲಾರದ ತಕ್ಕಡಿಗಳಿಗೆ ಗರಿಬಿಚ್ಚಿ ನರ್ತಿಸುವ ಕಾಡುವ ಪ್ರಶ್ನ...

ಜಾಣರಾಗಿರೋ ಜನರು ಜಾಣರಾಗಿರೋ ವೋಟು ಬೇಟೆಯಾಟದಲ್ಲಿ ಜಾಣರಾಗಿರೋ ||ಪ|| ನಮ್ಮ ನಿಮ್ಮ ಮಧ್ಯದಲ್ಲಿ ಪಕ್ಷ ಪಾರ್ಟಿ ಭೇದ ಮಾಡಿ ನಮಗೆ ಕುಡಿಸಿ ತಿನಿಸಿ ಟಗರು ಕಾಳಗವನು ಮಾಡಿಸುವರು ನಾವು ನೀವು ಬಡಿದಾಡುತ್ತ ಕಚ್ಚಾಡುವ ಬೆಂಕಿ ಹಚ್ಚಿ ತಾವು ಅದರ ಉರಿಗೆ ...

ನಾನೆಂಬ ಮಬ್ಬಿಳಿದು ನೀಹಬ್ಬುತಿರುವಾಗ ಬಂದ ಗಾಳಿಯಲಿತ್ತು ದಿವ್ಯಗಂಧ ನಿನ್ನ ಕಣ್ಣಿನ ಮಿಂಚು ನನ್ನ ಒಳಗೂ ಹರಿದು ಮೂಡಿದರು ಅಲ್ಲಿಯೇ ಸೂರ್ಯಚಂದ್ರ ಕಾಡಿದರೆ ಏನಂತೆ ಕೂಡಿದರೆ ಏನಂತೆ ಹಾಡುಗಳೆ ಪಾಡಳಿದು ಹೋಗಿಲ್ಲವೇ? ಬಂದು ಸೇರಿದ್ದೆಲ್ಲ ನಂದೆನುವ-ಭ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...