
ಎಣ್ಣೆಗೆಂಪಿನ ಮೇಲೆ ಹಾಲ್ಕೆನೆಯ ಲೇಪನದ ಕೆನ್ನೆಯೇನಲ್ಲ, ಹೂ ಮೃದುತೆಯೇನಿಲ್ಲ! ತುಟಿ ಬಹಳ ಕೆಂಪಿಲ್ಲ! ಕಂಡೊಡನೆಯೇ ಸೆಳೆವ ಮೆಲುನಗುವು ಅದರ ಮೇಲ್ಸುಳಿದುದೇ ಇಲ್ಲ! ಮಾತುಗಳಲೇನಂಥ ಮಾಧುರ್ಯವೇನಿಲ್ಲ ಬೆಡಗು ಬಿನ್ನಾಣಗಳು ಚೆಲುವಿಕೆಯು ಇಲ್ಲ! ಕವಿಗಳ...
ಅಮ್ಮ ನಂಗೆ ಮರೀದೆ ಕೊಡೆ ಕಾಯಿ ಬೆಲ್ಲ ಇಲ್ದೆ ಹೋದ್ರೆ ಬೆಳಿಗ್ಗೆ ಬೇಗ ಎಚ್ಚರ ಆಗಲ್ಲ. ಬೇಕು ನಂಗೆ ಪ್ಯಾಂಟು ಕೋಟು ಬೂಟು ಎಲ್ಲ ಸ್ಮಾರ್ಟ್ ಬಾಯ್ ಅಂದ್ರೆ ಅದೆಲ್ಲ ಇರಲೇಬೇಕಲ್ಲ! ಚಾಕ್ಲೇಟ್ ಬರ್ಫಿ ಕೊಬ್ರಿಬಿಸ್ಕತ್ ಎಲ್ಲಾ ಬೇಕಲ್ಲೇ ಬರೀ ಬಾಯಲ್ ಓದಿ...
‘ಮಾಸ್ತಿಯವರಾಸ್ತಿ ಆ ಸಣ್ಣ ಕತೆಗಳೆ’ ಎಂದು ಸಾಂಬಶಾಸ್ತ್ರಿಗಳ ಸಿದ್ಧಾಂತ. ಕೇಶವಮೂರ್ತಿ ‘ಶ್ರೀನಿವಾಸರ ಕವಿತೆ ಒಣ ಗದ್ಯವೇ ’ ಎಂದು ಎಗರಿ ಬೀಳುವನು. ಈ ಸಂಶಯವೆ ಕವಿಕೀರ್ತಿ. ಪರಿಚಿತ ಕವಿಗಳೆಲ್ಲ ಬರಿದೆ ರಾರಾಜಿಪರು ಪ್ರಾಚೀನ ಪ್ರಾರಬ್ಧ ಹೊತ್ತು. ಅ...
ಅಯೋಧ್ಯೆ ರಾಜ್ಯದಲಿ ಇನಕುಲದ ಖ್ಯಾತಿಯಲಿ ಧರ್ಮಾಭಿಮಾನದಲಿ ಬಾಳಿದನು ನೋಡಾ. ದಶರಥನೆಂದಾತನೀ ನೃಪ ಶ್ರೇಷ್ಠನೆಂಬಂತೆ ಪಾಲಿಸುತ ದೇಶವನು ಆಳಿದನು ಕೇಳಾ. ರಾಜಾಧಿರಾಜನೂ ಭುವನೈಕ ವಂದ್ಯನೂ ಸಿರಿಲೋಲ ಮಾನ್ಯನೂ ರವಿಕುಲದ ಪ್ರಭುವು; ಎಂದೆನಿಸಿ ತ್ರಿಪತ್ನಿ...
ಮಲೆನಾಡಿನ ಮಳೆಗಾಲದಲ್ಲಿ ನಮ್ಮೂರು ಕಾಲೇಜು ಬಾಗಿಲುಗಳು ತೆಗೆದುಕೊಳ್ಳುತ್ತವೆ. ಬಣ್ಣ ಬಣ್ಣದ ಛತ್ರಿಗಳು ಬಿಚ್ಚಿಕೊಳ್ಳುತ್ತವೆ. ಸೂಜಿ ಮಲ್ಲಿಗೆ ಗುಂಡು ಮಲ್ಲಿಗೆಗಳು ಘಮ ಘಮಿಸುತ್ತವೆ. ಕಾಲೇಜು ಮೆಟ್ಟಲೇರುವ ಹುಡುಗಿಯರ ಗಲ್ಲಗಳು ಕೇದಿಗೆಯಾದರೆ ಕಣ್ಣ...
ಜಗವೊಂದು ಬಂದರೀ ಜೀವಸಾಗರದಲ್ಲಿ ಹಡಗುಗಳು ಐತಂದು ಕೂಡುವುವು ದಿನವು, ತೆರತೆರದ ಜನರಿಹರು-ವಿಧವಿಧದ ಭಾಷೆಗಳು ಚಣಕಾಲ ಸಂಧಿಸುತ ಮೆರೆವುವಲ್ಲಿ! ನಾಲ್ಕು ದಿನಗಳ ಜೀವ, ಒಂದಿರುಳ ಪ್ರೇಮ! ಮುಂದೆಲ್ಲಿಗೋ ಪಯಣ, ಎಂದೊ ಮಿಲನ? ಪಯಣದಲಿ ಸಾಗರದಿ ಕಡುತೆರೆದ ...
ಮಕ್ಕಳು : ರಾತ್ರಿ ಬೇಗ ಮಲಗಿ ಬೆಳಗ್ಗೆ ಆರಕ್ಕೇಳ್ತೀವಿ ಸಖತ್ತು ತಿಂಡಿ ಬಾರಿಸಿ ತಪ್ಪದೆ ಪಾಠ ಓದ್ತೀವಿ. ಗುಂಡ : ತಿಂಡಿ ತಿಂಡಿ ತಿಂಡಿ ತಿನ್ತೀನೊಂದು ಬಂಡಿ! ಮಕ್ಕಳು : ಹಟವೇ ಮಾಡದೆ ನಗ್ತಾ ದಿನಾ ಸ್ಕೂಲಿಗೆ ಹೋಗ್ತೀವಿ, ಎಲ್ಲರ ಜೊತೇಲು ಕೂತ...
ಹುಟ್ಟಿದ್ ಮಳೇ ಹಾಳಾಗ್‌ಹೋಯ್ತು, ಸುಮ್ನೇ ಗುಡುಗಿನ್ ಕೋಡಿ.- ಅಕ್ಕಿ ಬೆಲೇ ಏರ್ತಾ ಹೋಯ್ತು ದುಡ್ಡಿನ್ ಮೊಕಾ ನೋಡಿ. ಅಕ್ಕೀಗಿಂತ ಅಲ್ಲಿದ್ ಕಲ್ಲೆ ಮುತ್ನಂಗಿತ್ತು, ತಣ್ಗೆ! ಕಟ್ಕೊಂಡೋಳ್ಗಿತಿಟ್ಕೊಂಡೋಳೇ ಸುಂದ್ರೀ ಅಲ್ವೆ, ಕಣ್ಗೆ! ಒಲೇ ಕುರ್ಚೀಲನ್ನ...
ಮನದ ಕಾಂಕ್ಷೆ ಒಲವಿನೆಣಿಕೆ ಆಳ ಅಳೆದು ನೋಡಲಾರೆ, ವಿಶ್ವವ್ಯಾಪಿ ಎಮ್ಮ ಮುದವು ನಿಲ್ವುದೆಲ್ಲಿ ಎಣಿಸಲಾರೆ! ಕತ್ತಲಂತೆ ಸುತ್ತಲೆಲ್ಲ ಮನಕೆ ಭಾರ ದೇಹಸರ್ವ ತಿಂಬೆದೆಲ್ಲ ಅರುಚಿ ಕೇಳು, ಯಾರ ಇದುರು ಪೇಳ್ವುದಲ್ಲ!! ಮಂಜುಗಟ್ಟಿ ನೇತೃದ್ವಯವು ಬೆಂದಮನವ ಸ...














