Home / Poem

Browsing Tag: Poem

ಎಲ್ಲಿ ಹೋಯಿತೇ ಕೂಸು ಎಲ್ಲಿ ಹೋಯಿತೇ ಅವ್ವ ಎಲ್ಲಿ ಹೋಯಿತೇ ಅಕ್ಕ ಎಲ್ಲಿ ಹೋಯಿತೇ ಮೊನ್ನೆ ಮೊನ್ನೆ ಹುಟ್ಟಿ ಬಂತು ಸ್ವರ್ಗವನ್ನೇ ಮುಟ್ಟಿ ನಿಂತು ಪೂರ್ಣ ಚಂದ್ರ ಹಾಲುಗೆನ್ನೆ ಬೆಳದಿಂಗಳ ಹಾಲು ನಗುವು ಮಳೆಯ ಜೊಲ್ಲು ಸುರಿಸಿ ಅಂಗ ತೋಯಿಸಿದ್ದನು ನನ್ನ...

ಹಸರೂಡೆದಿದೆ ಹೂ ಬಿರಿದಿವೆ ನಿಮ್ಮಂಗಳದಲ್ಲೂ ಸ್ವಾಮಿ ಆದರೂ, ಬೇರೆಯವರ ಮನೆಯ ಹೂವು ಕದಿಯುವ ಹಸಿರಿಗೆ ಬೆಂಕಿ ಇಡುವ ಹುನ್ನಾರ ಏಕೆ? *****...

ಇತಿಯೋಪಿಯಾದಲ್ಲಿ ಕ್ಷಾಮ ಬಂದು ಇಡೀ ಒಂದು ಗ್ರಾಮವೇ ಬಲಿಯಾಯಿತೆಂದು ಬೆಳಗ್ಗಿನ ಕಾಫಿ ಹೀರುತ್ತ ಪತ್ರಿಕೆಯಲ್ಲಿ ಓದಿ ಕೇಳಿದೆಯೇನೆ ಸುದ್ದಿ ಎಂದು ಉದ್ಗರಿಸಲಿಲ್ಲ. ದೇವರಿಗೆ ದೀಪ ಹಚ್ಚಿ ನೀನು ಪ್ರಾರ್ಥಿಸುತ್ತಿದ್ದುದು ಏನು ಎಂದು ಕೇಳಲಿಲ್ಲ. ಮನೆಯೆ...

ನಿನ್ನೆ ಮುಸ್ಸಂಜೆಯಿಂದ ಮುಂಜಾವಿನವರೆಗೂ ಆಕಾಶದಲ್ಲಿ ರಾರಾಜಿಸಿದ ಚಂದ್ರ ಇಂದು ನಿಧಾನಕ್ಕೆ ಮೈ ಮುರಿದು ಎದ್ದು ಬರುತ್ತಿದ್ದಾನೆ ನೋಡಿ ಅವನು ಹಾಗೇ;  ಒಂದೊಂದು ಮಿಥಿಗೊಂದೊಂದು ಮೋಡು, ಕ್ಷಣಕ್ಷಣಕ್ಕೊಂದು ಮೋಡಿ, ಇಂದು ಇವನಿಗೆ ಏನಾದರೂ ಆಗಿರಬಹುದು ...

ಬಾರೋ ಗುಂಡ ಕೂಳಿಗೆ ದಂಡ ಅನ್ನಿಸಿಕೊಂಡವನೇ ಅಂಡಾಬಂಡ ಆಟ ಆಡಿ ಎಲ್ಲರ ಗೆಲ್ಲೋನೇ. ಕೋತಿ ಹಾಗೆ ಹಲ್ ಹಲ್ ಕಿರಿದು ಪರಚಕ್ ಬರೋವ್ನೇ ಬೊಗಸೆ ತುಂಬ ಮಣ್ ತುಂಬ್ಕೊಂಡು ಎರಚಿ ಓಡೋವ್ನೇ. ರಸ್ತೇಲ್ಹೋಗೋ ಎಮ್ಮೇ ಮೇಲೆ ಸವಾರಿ ಮಾಡೋವ್ನೇ ಕತ್ತೇ ಬಾಲ ಎಳೆಯೋಕ...

ನಾನಿನ್ನ ಕರೆವೆ ನೀ ಬರದೆ ಇರುವೆ | ಏಕೆ ನೀ ಬಾರದಿರುವೆ ನಿನಗಾಗಿ ತಪಿಸಿ ಬಿಸಿಲಲ್ಲಿ ಜಪಿಸಿ | ಸುಖವನ್ನು ಸಾರದಿರುವೆ ಒಳಗೆಲ್ಲ ಬೆಂಕಿ ಮೇಲೆಲ್ಲ ಬೆಂಕಿ | ಉರಿ ಉರಿಯ ಬೆಂಕಿಯಾದೆ ಆರಿಸುವ ನೀರೆ ನೀನೇಕೆ ಬಾರೆ | ಬಹು ಸಮಯ ಕಾದೆ ಕಾದೆ ಮೋಡಗಳ ಕನಸ...

ನಾಸ್ತಿಕರು ದೇವರಂಗಳಕೆ ಬಂದಿದ್ದಾರೆ ಪರೀಕ್ಷಿಸಲು ಎಲ್ಲೆಲ್ಲೂ ಧೂಪ ದೀಪ ಹೂವು ಹಣ್ಣು ಅನಾಮಿಕರ ದೈವ ಕಳೆ ನೋಡಿ ಕದ್ದು ಪ್ರಸಾದ ತಿಂದು ಹೊರ ಬೀಳುತ್ತಾರೆ ಆಸ್ತಿಕರಾಗಿ. *****...

ಬಾರಿನಲ್ಲಿ ಅರ್ಧತುಂಬಿದ ಗ್ಲಾಸಿನ ಮೂಲಕ ಹಾದುಬರುವ ವಿದ್ಯುದ್ದೀಪದ ಅಪೂರ್ವ ಹೊಂಬಣ್ಣದ ಬಗ್ಗೆ ಹೇಳುತ್ತಿಲ್ಲ ನಾನು.  ಅಥವ ಮಾಗಿಯ ಹಣ್ಣಾದ ಭತ್ತದ ತೆನೆಗಳ ಮೇಲೆ ಬೀಳುವ ಮುಸ್ಸಂಜೆಯ ಬಗ್ಗೆಯೂ ಅಲ್ಲ.  ನಾನು ಸುವ್ಯವಸ್ಥಿತವಾದ ಹಳದಿ ಬಣ್ಣದ ಬಗ್ಗೆ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...