
ಬೀಗಬಾರದ ರೊಟ್ಟಿ ಬಾಗಲಾರದ ಹಸಿವು ರೊಟ್ಟಿ ಪ್ರಶ್ನಿಸುವಂತಿಲ್ಲ ಹಸಿವು ಉತ್ತರಿಸಬೇಕಿಲ್ಲ ಯಥಾಸ್ಥಿತಿಯ ಗತಿಯಲಿ ರೊಟ್ಟಿಗೆ ಮುಖವಾಡದ ಮೇಲೆ ಮುಖವಾಡ ಹಸಿವಿಗೆ ಗೆಲುವಿನ ಠೇಂಕಾರ. *****...
ಸತ್ಯದ ಹಾದಿಯಲ್ಲಿ ನಡೆದವನಿಗೆ ಸ್ಥಿರ ಸುಖ-ಸಂತೋಷ ಸುಳ್ಳಿನ ಹಾದಿಯಲ್ಲಿ ನಡೆದವಗೆ – ನಶ್ವರ *****...
ಹಸಿವಿನಲಿ ರೊಟ್ಟಿ ರೊಟ್ಟಿಯಲಿ ಹಸಿವು ಅಗೋಚರದಿ ನೆಲೆಸುವಂತೆ ಹಸಿವಿನೆತ್ತರ ರೊಟ್ಟಿಯಾಳದ ನಡುವೆ ಕವಿತೆಯ ರಾಯಭಾರ. *****...
ಹಸಿವಿನ ಆಯ್ಕೆ ರೊಟ್ಟಿ. ಆದರೆ ರೊಟ್ಟಿ ಸೃಷ್ಟಿಯಾಗುವುದು ಆಯ್ಕೆಯಿಂದಲ್ಲ ಅನಿವಾರ್ಯತೆಯಿಂದ. ಅದಕ್ಕೆ ಆಯ್ಕೆ ಇದ್ದರೆ ರೊಟ್ಟಿಯಾಗುತ್ತಿರಲಿಲ್ಲ. ಹಸಿವಂತೂ ಆಗುತ್ತಿರಲೇ ಇಲ್ಲ. *****...
ರೊಟ್ಟಿ ಕಲಿಯಬೇಕಿರುವ ಮೊದಲ ಪಾಠ ‘ಹಸಿವಗೇನು ಬೇಕು?’ ಎಂಬುದು. ಮತ್ತು ಕೊನೆಯ ಪಾಠವೂ ಅದೇ. *****...
ಸುಡುಸುಡುವ ಆಕ್ರೋಶ ಒಳಗೇ ಅದುಮಿಟ್ಟು ಎಂದಿಗೂ ಹಡೆಯದ ರೊಟ್ಟಿಯ ಬಸಿರು. ದಿಟ ಕಂಡರೂ ಕಣ್ಣುಮುಚ್ಚಿ ಸದ್ದಿಲ್ಲದೇ ಒಳಗೇ ಬೆಚ್ಚಿ ಏನೂ ಕಂಡಿಲ್ಲವೆಂಬ ಕಪಟ ನಾಟಕವಾಡುತ್ತದೆ ಹಸಿವು. *****...
ತನಗೆ ಬೇಕೆಂದಂತೆ ತಾನೇ ಕಂಡುಕೊಳ್ಳುವ ಸತ್ಯದ ಹುಡುಕಾಟದಲ್ಲಿ ಹಸಿವು ನೀಡುತ್ತದೆ ಏಕಪಕ್ಷೀಯ ತೀರ್ಪು ರೊಟ್ಟಿಯ ಜೀವಕಾರುಣ್ಯ ಬೀದಿಗೆ ಬಿದ್ದ ಬೆಪ್ಪು. *****...













