Home / Shrivijaya Haasana

Browsing Tag: Shrivijaya Haasana

ಶಿಲಾಮೂರ್ತಿಯಲಿ ದೇವರನು ಕಾಣುವ ಹುಚ್ಚು ಹಂಬಲವೇಕೆ? ಕಣ್ಣಿಗೆ ಕಾಣುವ ದೇವರನು ಅರಿಯದೆ ಕೈಬಿಟ್ಟೆಯೇಕೆ? ಕಲ್ಲಿನಲಿ ಮಣ್ಣಿನಲಿ ಗಾಳಿಯಲ್ಲಿ ನೀರಿನಲ್ಲಿ ಪಶುಪ್ರಾಣಿ ಸಂಕುಲದಲಿ ಪ್ರಕೃತಿಯ ಜೀವಜಂತುಗಳಲ್ಲಿ ಅಣುರೇಣು ತೃಣಕಾಷ್ಠಗಳಲ್ಲಿ ಎಲ್ಲೆಂದರಲ್ಲ...

ಹುಟ್ಟು ಸಾವುಗಳ, ನೋವು ನಲಿವುಗಳ ಬದುಕಿದು ಬರೀ ಭ್ರಾಂತಿ ಆಸೆನಿರಾಸೆಗಳ ನಡುವೆ ತೂಗಿದೆ ಸಂತಸದ ಸಂಕ್ರಾಂತಿ ಮಾಗಿಯ ಪೊರೆಯದು ಕಳಚುತ್ತಾ ತೆರಳಿದೆ ಕಾಣಲು ಹೊಸ ವರುಷ ಸಿಹಿ ಸಿಹಿ ಮಾತಿನ ತೋರಣ ಕಟ್ಟಿದೆ ಸಂಕ್ರಾಂತಿಯ ಹರುಷ ಹೂಬನವೆಲ್ಲಾ ಉದುರಿ ಚಿಗ...

ಚೈತ್ರ ಬಂದರೇನು? ಚಿಗುರಿಲ್ಲವಲ್ಲ ವಸಂತ ಬಂದರೇನು ಹೂ ಅರಳಿಲ್ಲವಲ್ಲ. ಯುಗಾದಿ ಬಂದರೇನು? ಹರುಷವಿಲ್ಲವಲ್ಲ ಕಟ್ಟಿದ ಕನಸುಗಳು ನನಸಾಗದೆ ಬಂಧಿಯಾಗಿವೆ ಭೂತದ ಪಂಜರದಲ್ಲಿ ಆಸೆ ಭರವಸೆಗಳು ದಹಿಸಿವೆ ಅಂತರಂಗದ ಅಗ್ನಿಕುಂಡದಲ್ಲಿ ಹೃದಯ ಮನಸ್ಸುಗಳೆರಡು ಶ...

ಚೈತ್ರ ಬಂತು ಚೈತ್ರ ಬದುಕು ಬವಣೆಯಾತ್ರೆ ಅಳುವಿರಲಿ, ನಗುವಿರಲಿ ಕಥೆಗೆ ತಕ್ಕ ಪಾತ್ರ ಅಪ್ಪ ಅಮ್ಮ ಅಣ್ಣ ತಂಗಿ ಜೊತೆಯಾದರು ಪಯಣಕೆ ನಲಿವಿನಿಂದ ನೋವು ನುಂಗಿ ನಡೆದೆವು ದೂರ ತೀರಕೆ ತೀರ ದೂರ ಬದುಕು ಭಾರ ಸೋಲುಂಡವು ಮೈಮನ ಉರಿಯೋ ಬಿಸಿಲು ಸುರಿಯೋ ಮಳೆ...

ಹಾಡುವ ಕೋಗಿಲೆಯೇ ಏಕೀ ಮೌನ ದುಮ್ಮಾನ ಹೊಸ ವರುಷಕೆ ಹೊಸ ಪಲ್ಲವಿಯ ಹೊಸ ತಾನದೆ ಹಾಡು ನೀನು ಮುನಿದ ಮನಗಳ ಬೆಸೆದು ಪ್ರೇಮ ಪಾಶದೆ ಬಿಗಿದು ಒಲವು ಚೆಲುವುಗಳ ಧಾರೆಯೆರೆದು ಎದೆ ತುಂಬಿ ಹಾಡು ನೀನು ಬೆಂದೊಡಲು ತಂಪಾಗಿ ಬವಣೆ ನೀಗಿ ಬದುಕು ಹಸನಾಗಿ ಹೃದಯಗ...

ಅಚ್ಚರಿಯ ನೋಟವದೇಕೆ ನಿಟ್ಟುಸಿರ ಬಿಡುವಿರೇಕೆ ಅರೆಗಳಿಗೆ ದಿಟ್ಟಿಸಿ ನೋಡಿರಿ ಕಲಾವಿದನ ಕರಚಳಕದೆ ಅವಿರ್ಭವಿಸಿದ ಕಲ್ಪನೆಯ ಚಿತ್ರವೇ ದೇವನ ಸೃಷ್ಠಿಯ ವೈಚಿತ್ರವೇ ಅಲ್ಲ ನಿಮ್ಮೆದುರು ನಿಂತಿರುವ ನಾನೊಂದು ಬೋಳು ಮರ ಗತ ಕಾಲದೆ ನಾನಾಗಿದ್ದೆ ಫಲಭರಿತ ಸಂ...

ವರ್ಷಾ ಬಂತು ಹರುಷ ತಂತು ಎಲ್ಲರೆದೆಯಲಿ ಹಸಿರು ತುಂಬಿ ಉಸಿರು ಬಂತು ಭೂಮಿಯ ಮೊಗದಲಿ ಹನಿ ಹನಿ ಮುತ್ತಾಗಿ ಚೆಲ್ಲಿ ಧರೆಗಿಳಿದು ಹಾರವಾಗಿ ಕಡಲ ಕೊರಳ ಬಳಸಲೆಂದು ವಧುವಂತೆ ನಾಚುತ ಬಂತು ಹೊಳೆ ಹಳ್ಳ ಕೆರೆ ತುಂಬಿ ತುಳುಕಿ ಬೆಟ್ಟ ಬಯಲು ಜಲಪಾತ ಬಳುಕಿ ಬ...

ಪರಮಪದದತ್ತ ಎಲ್ಲಾ ಸುದ್ದಿಗಳನ್ನು ಕೇಳಿದ ನಾನು ಬಹಳ ಚಿಂತಾಕ್ರಾಂತನಾಗಿ ಯೋಚಿಸುತ್ತಾ ಕುಳಿತೆನು. ಹೇಗಾದರೂ ಶ್ರೀರಾಮನನ್ನು ಗೆದ್ದೇ ಗೆಲ್ಲಬೇಕೆಂಬ ಹಠ ಹುಟ್ಟಿತು. ಯಾರಿಗೂ ಗೊತ್ತಾಗದಂತೆ ಒಂದು ಗುಪ್ತ ಸ್ಥಳದಲ್ಲಿ ಕುಳಿತು ಪಾತಾಳ ಹೋಮವನ್ನು ಆರಂಭ...

ಪರಿಸರ ಸುಂದರ ಪರಿಸರ ಜೀವಕೋಟಿಯ ಚೇತನಸಾರ ಬರಿದಾಯಿತೇ ಬರಡಾಯಿತೇ ಎಲ್ಲೆಲ್ಲೂ ಕಾಣದಾಯಿತೇ ಕಣ್ಮನ ತಣಿಸುವ ಗಿರಿಕಾನನ ಪರಿಮಳ ಸೂಸುವ ಸುಮವದನ ಪಂಚಮ ಸ್ವರದ ಕೋಗಿಲೆಗಾನ ತಂಪು ಸೂಸುವ ತಂಗಾಳಿ ತಾನ ಬರಿದಾಯಿತೇ ಬರಡಾಯಿತೇ ಎಲ್ಲೆಲ್ಲೂ ಕಾಣದಾಯಿತೇ ಮಾವ...

ಮುಯ್ಯಿಗೆ ಮುಯ್ಯಿ ಇಂದ್ರಜಿತುವು ಯಾಗವನ್ನು ಪೂರ್ಣಗೊಳಿಸಿ, ಅಮರತ್ವವನ್ನು ಪಡೆಯುತ್ತಾನೆಂದು ಕನಸು ಕಾಣತೊಡಗಿದೆ. ಎಡಗಣ್ಣು ಎಡಭುಜ ಹಾರತೊಡಗಿದವು. ಹಗಲಿನಲ್ಲಿ ಪ್ರಾಣಿಪಕ್ಷಿಗಳು ಬೇರಾಡ ತೊಡಗಿದವು. ಕಾಗೆಯೊಂದು ಹಾರಿಬಂದು ಮುಖಕ್ಕೆ ಹೊಡೆಯಿತು ಎಂ...

12345...29

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...