ಹಾಡುವ ಕೋಗಿಲೆಯೇ
ಏಕೀ ಮೌನ ದುಮ್ಮಾನ
ಹೊಸ ವರುಷಕೆ ಹೊಸ ಪಲ್ಲವಿಯ
ಹೊಸ ತಾನದೆ ಹಾಡು ನೀನು
ಮುನಿದ ಮನಗಳ ಬೆಸೆದು
ಪ್ರೇಮ ಪಾಶದೆ ಬಿಗಿದು
ಒಲವು ಚೆಲುವುಗಳ ಧಾರೆಯೆರೆದು
ಎದೆ ತುಂಬಿ ಹಾಡು ನೀನು
ಬೆಂದೊಡಲು ತಂಪಾಗಿ
ಬವಣೆ ನೀಗಿ ಬದುಕು ಹಸನಾಗಿ
ಹೃದಯಗಳು ಬೆರೆಯಲಿ
ಅನುರಾಗದೆ ಹಾಡು ನೀನು.
ದಿಕ್ಕು ದಿಕ್ಕಿಗೂ ಪಸರಿಸಲಿ
ಶಾಂತಿ ಸುಧೆಯ ಸಾರ
ಚಿಪ್ಪೊಡೆದು ಹೊರಬರಲಿ
ಭಾವೈಕ್ಯತೆಯ ಹಾರ
ಹೃದಯ ತುಂಬಿ ಹಾಡು ನೀನು.
ಕೋಗಿಲೆಯೇ ಮರುಗದಿರು
ಎಲ್ಲಾ ಮುಗಿಯಿತೆಂದು
ಸೂರ್ಯನು ಮುಳುಗಿದರೂ
ಚಂದಿರನು ಬರುವ
ನಿನ್ನ ರಾಗಕೆ ದನಿಯ ಬೆರೆಸಿ
ಜೊತೆಯಾಗಿ ಹಾಡುವ
ನವಭಾವ ಗೀತೆಯ.
*****