ಪರಿಸರ ಸುಂದರ ಪರಿಸರ
ಜೀವಕೋಟಿಯ ಚೇತನಸಾರ
ಬರಿದಾಯಿತೇ ಬರಡಾಯಿತೇ
ಎಲ್ಲೆಲ್ಲೂ ಕಾಣದಾಯಿತೇ
ಕಣ್ಮನ ತಣಿಸುವ ಗಿರಿಕಾನನ
ಪರಿಮಳ ಸೂಸುವ ಸುಮವದನ
ಪಂಚಮ ಸ್ವರದ ಕೋಗಿಲೆಗಾನ
ತಂಪು ಸೂಸುವ ತಂಗಾಳಿ ತಾನ
ಬರಿದಾಯಿತೇ ಬರಡಾಯಿತೇ
ಎಲ್ಲೆಲ್ಲೂ ಕಾಣದಾಯಿತೇ
ಮಾವು ಬೇವು ತೇಗ ಶ್ರೀಗಂಧ
ನಿರ್ಜರ ನದಿನದ ಕಲರವ ನಾದ
ಹಕ್ಕಿಗಳಿಂಚರ ಕರ್ಣಾನಂದ
ಮೈಮನ ಮರೆಸುವ ಕಾಡಿನ ಚಂದ
ಬರಿದಾಯಿತೇ ಬರಡಾಯಿತೇ
ಎಲ್ಲೆಲ್ಲೂ ಕಾಣದಾಯಿತೇ.
ನವಿಲಿನ ನಾಟ್ಯ, ಜಿಂಕೆಯ ಓಟ
ವಾನರ ವೀರರ ಮರಕೋತಿಯಾಟ
ಖಗ ಮೃಗಾದಿಗಳ ತಿನಿಸಿನ ಚೆಲ್ಲಾಟ
ಕಾನನ ಸಂಸಾರ ಸುಂದರ ನೋಟ
ಬರಿದಾಯಿತೇ ಬರಡಾಯಿತೇ
ಎಲ್ಲೆಲ್ಲೂ ಕಾಣದಾಯಿತೇ.
*****