ಹುಟ್ಟು ಸಾವುಗಳ, ನೋವು ನಲಿವುಗಳ
ಬದುಕಿದು ಬರೀ ಭ್ರಾಂತಿ
ಆಸೆನಿರಾಸೆಗಳ ನಡುವೆ ತೂಗಿದೆ
ಸಂತಸದ ಸಂಕ್ರಾಂತಿ
ಮಾಗಿಯ ಪೊರೆಯದು ಕಳಚುತ್ತಾ ತೆರಳಿದೆ
ಕಾಣಲು ಹೊಸ ವರುಷ
ಸಿಹಿ ಸಿಹಿ ಮಾತಿನ ತೋರಣ ಕಟ್ಟಿದೆ
ಸಂಕ್ರಾಂತಿಯ ಹರುಷ
ಹೂಬನವೆಲ್ಲಾ ಉದುರಿ ಚಿಗುರಿದೆ
ಚೈತ್ರದ ಸ್ವಾಗತಕೆಂದು
ರವಿಯು ರಂಗಿನ ರಥ ಏರಿ ಬರುವ
ರಥಸಪ್ತಮಿಯಂದು.
ದೇವನ ಕರುಣೆಯ ಅಲೆಯಲ್ಲಿ ತೇಲುತ್ತಾ
ಸಾಗಿದೆ ಬಾಳಿನ ದೋಣಿ
ಸ್ನೇಹದಿ ಎಳ್ಳು ಬೆಲ್ಲವ ಹಂಚುತ್ತಾ
ನುಡಿಯಿರಿ ಸರಸದ ಸವಿವಾಣಿ.
*****