ಶಿಲಾಮೂರ್ತಿಯಲಿ ದೇವರನು
ಕಾಣುವ ಹುಚ್ಚು ಹಂಬಲವೇಕೆ?
ಕಣ್ಣಿಗೆ ಕಾಣುವ ದೇವರನು
ಅರಿಯದೆ ಕೈಬಿಟ್ಟೆಯೇಕೆ?
ಕಲ್ಲಿನಲಿ ಮಣ್ಣಿನಲಿ
ಗಾಳಿಯಲ್ಲಿ ನೀರಿನಲ್ಲಿ
ಪಶುಪ್ರಾಣಿ ಸಂಕುಲದಲಿ
ಪ್ರಕೃತಿಯ ಜೀವಜಂತುಗಳಲ್ಲಿ
ಅಣುರೇಣು ತೃಣಕಾಷ್ಠಗಳಲ್ಲಿ
ಎಲ್ಲೆಂದರಲ್ಲಿ ನೀ ಕಾಣುವಲ್ಲಿ
ದೇವರಿರುವನು ನೋಡಾ
ಕಾಣದೆ ಬಳಲುವೆಯೇಕೆ ಮೂಡಾ.
ಗುಡಿ ಚರ್ಚು ಮಸೀದಿಗಳ ಒಳಗೆ
ಅರಳಿ ಅಶ್ವತ್ಥ ಕಟ್ಟೆಗಳ ನಡುವೆ
ದೇವರಿರುವನೆಂಬ ಸಂಕುಚಿತ ಭಾವನೆ
ಸರಿಸಿ ಮನವ ವಿಶಾಲವಾಗಿಸಿ
ಒಳಗಣ್ಣ ತೆರೆದು ಸುತ್ತ ಗಮನಿಸಿ
ಕಾಣುವನು ದೇವರಾಗ
ಪ್ರೀತಿ ತುಂಬಿದ ಹೃದಯಗಳಲ್ಲಿ
ಸ್ನೇಹ ವಿಶ್ವಾಸದ ಮಾತಿನಲ್ಲಿ.
*****