ಏಳು ಯುವಕಾ ಸಾಕು ತವಕಾ
ವಿಶ್ವ ನಿನ್ನನು ಕೂಗಿದೆ
ಏಳು ಏಳೈ ಕೂಗು ಕೇಳೈ
ಭೂಮಿ ನಿನ್ನನು ಬೇಡಿದೆ

ಎಲ್ಲಿ ಸಾವು ನೋವು ಕತ್ತಲೆ
ಅಲ್ಲಿ ಪ್ರೇಮವ ಸುರಿಯುವೆ
ಎಲ್ಲಿ ವಂಚನೆ ಸಂಚು ಯಾಚನೆ
ಅಲ್ಲಿ ಕೆಂಡವ ಕಾರುವೆ

ಹೂವಿಗಿಂತಲು ಹೂವು ನೀನು
ಯುಗಕೆ ಜಗಕೆ ಗುಣಮಣಿ
ನೀನೆ ತ್ಯಾಗಾ ಪ್ರೀತಿ ಶೌರ್‍ಯಾ
ಭುವನ ಭಾಗ್ಯದ ಕಣ್ಮಣಿ

ಗುಡುಗು ಸಿಡಿಲು ಮಿಂಚು ನೀನೆ
ಪ್ರೇಮ ರಾಜ್ಯಕೆ ಪ್ರೇರಣಾ
ರಣದ ಮಾರಣ ಕಹಳೆ ನೀನೆ
ವಿಶ್ವಶಾಂತಿಗೆ ಕಾರಣಾ
*****