
ಸಂಭ್ರಮದಿ ಹೊತ್ತ ಹೊಟ್ಟೆ ಬರವಿಲ್ಲ ಕನಸಿಗೆ, ಹೊಂಬಿಸಿಲ ನೆನಪಲ್ಲೆ ಮುದ್ರೆ ಇಲ್ಲ, ಅಲ್ಲಿ ಮೇಲುಗೈ ಕನಸ ಸಾಕಾರಕ್ಕಲ್ಲ. ವಿದ್ವಂಷಕ್ಕೆ-ವಿಧಿಯ ಎಡಗೈಗೆ ಇಲ್ಲ ಮರುಕ-ಲಲಾಟ ಲಿಖಿತ ಯಾರು ಬರೆದದ್ದು? ಬ್ರಹ್ಮನೋ ಅಥವಾ ಎಂಡೋ ಸಲ್ಫಾನೋ? ಎತ್ತಲಾಗದು ಕೈ...
೧ ಜಾಣ್ಮೆಯಿಂದ ಜೀಕುತ್ತಿದೆ ನಾಗರೀಕತೆ ಕಲ್ಯಾಣದ ಪರಿಕಲ್ಪನೆ ಶಾಂತಿ ಸೌಹಾರ್ದತೆ, ಕಾಯಿದೆ ಕಾನೂನು ಮಡಿಲಲ್ಲಿ ತುಂಬಿಕೊಳ್ಳುವಂತೆ ದುರ್ಯೋಧನರೇ ರಾಜ್ಯವಾಳುತ್ತಿದ್ದಾರೆ. ೨ ಬಗೆ ಬಗೆಯ ಬಗೆಹರಿಯದ ದ್ವಂದ್ವ. ಅಲ್ಲೊಬ್ಬ ಲಲನೆ ಲಂಟಾನಾ ಮುಸಿ ಮುಸಿ ನ...
ಯಾವ ಅಂಜಿಕೆಯೂ ಈ ಪ್ರಾಣಿಗಿಲ್ಲ ಮಾನವರ ಸರಿಸಮರು ಕ್ರೂರ ಜಂತುವು ಇಲ್ಲ, ಮಸಣದಲೂ ಮನೆಯ ಕಟ್ಟಿಹನು ನೋಡ, ದೆವ್ವಗಳೇ ನರ ಬಡಿದು ಕುಂತಿಹವು ನೋಡ ರೀತಿ ನೀತಿಗಳ ತತ್ವ ತಂದವನು ಅವನೆ ನೀತಿ ನಿಯಮಗಳ ಮೀರಿ ಬೆಳೆದವನು ಅವನೇ ಆಷಾಢಭೂತಿಗಳು ಅರಸು ಮಕ್ಕಳ ...
ವಿರಳವಾಗಿಹರು ಇಂದು ಒಪ್ಪತ್ತು ಕೆಲಸಕ್ಕೂ ಆಳು ಗದ್ದೆಯಲಿ ಕಳೆ ಬೆಳೆದು ಬೆಳೆಯಂತೂ ಹಾಳು. ದುಂಬಾಲು ಬಿದ್ದರೂ ದರಕಾರೇ ಇಲ್ಲ: ಉದ್ಯೋಗ ಖಾತರಿಯ ಯೋಜನೆಯೇ ಬೆಲ್ಲ. ಕೆಲಸ ಮಾಡದಿರೂ ಬರಿಯ ಹೆಸರ ದಾಖಲೆ ಫೈಲು ಶುಕ್ರ, ಸೋಮ ಜೊತೆಗೆ ಮಾದನಿಗೂ ಡೌಲು. ಜೇ...
ಪದಗಳೆಂದರೆ ನನಗೆ ಅಚ್ಚುಮೆಚ್ಚು ದಿನಂಪ್ರತಿಯ ಅಭ್ಯಾಸವೂ ಪದಗಳ ಹೊಸೆಯುವುದರಲ್ಲಿ, ಮಸೆಯುವುದರಲ್ಲಿ: ಆದರೆ ಆ ಪದಗಳಿಗೆ ಶಬ್ದಕೋಶದಿ ಅರ್ಥಗಳ ಹುಡುಕಿ ಸೋತಿದ್ದೇನೆ. ಹೊಸ ಹಾಡಿಗೆ ಕುಣಿದಾಡುವ ನವಿಲುಗಳ ದಾರಿ ಕಾಯುತ್ತ, ನಾನೇ ನವಿಲಾಗಬಯಸುತ್ತೇನೆ. ...














