ಯಾವ ಅಂಜಿಕೆಯೂ
ಈ ಪ್ರಾಣಿಗಿಲ್ಲ
ಮಾನವರ ಸರಿಸಮರು
ಕ್ರೂರ ಜಂತುವು ಇಲ್ಲ,
ಮಸಣದಲೂ ಮನೆಯ
ಕಟ್ಟಿಹನು ನೋಡ,
ದೆವ್ವಗಳೇ ನರ ಬಡಿದು
ಕುಂತಿಹವು ನೋಡ

ರೀತಿ ನೀತಿಗಳ ತತ್ವ
ತಂದವನು ಅವನೆ
ನೀತಿ ನಿಯಮಗಳ ಮೀರಿ
ಬೆಳೆದವನು ಅವನೇ
ಆಷಾಢಭೂತಿಗಳು
ಅರಸು ಮಕ್ಕಳ ಹಾಗೆ,
ಆಚಾರ ವಿಚಾರಗಳು
ಹಗಲು ವೇಷದ ಹಾಗೆ:

ಧರ್ಮಮರ್ಮ ವ್ಯಾಖ್ಯಾನ
ಸೊಗಸು ಉಪಾಖ್ಯಾನ
ರಂಗಮಂಚದಿ ಭಾಷ್ಯ
ಪರದೆ ಹಿಂದಿದೆ ಲಾಸ್ಯ
ಸೃಷ್ಠಿಯಲಿ ಹಿರಿತನವು
ಬುದ್ಧಿಮತ್ತೆಯ ವರವು
ಆದರೂ ಮತಿಗೇಡು,
ಬದುಕು ಬರಿಕೊರಡು.
*****