ಕಲ್ಯಾಣಸೇವೆ ಜೇಬಿನ ಬುಡದಲಿ
ಪುಟ್ಟಾಣಿ ಪುರಿಯು ಮೇಲೊಂದಿಷ್ಟು
ಗೋಲೀ ಬಳಪ ಮತ್ತೊಂದಿಷ್ಟು
ಬಂದ ಬಂದ ಸಣ್ಣತಮ್ಮಣ್ಣ

ಪರಾಸು ಪೆಟ್ಲು ಒಳ ಜೇಬಲ್ಲಿ
ಕಾಸಿನ ಸಾಲು ಕಳ್ಳ ಜೇಬಲ್ಲಿ
ಚಂಡು ದಾಂಡು ಎಡ ಬಲದಲ್ಲಿ
ಬಂದ ಬಂದ ಸಂತಂಮಣ್ಣ

ಅಮ್ಮನ ಹಾರ ಉಬ್ಬಿದ ಎದೆಗೆ
ಬಿದಿರಿನ ಕೊಳಲು ಗೆಜ್ಜೆಯ ವಳಗೆ
ಹದ್ದಿನ ರೆಕ್ಕೆ ಎತ್ತಿದ ತಲೆಗೆ
ಬಂದ ಬಂದ ಸಣ್ಣ ತಮ್ಮಣ್ಣ

ಕತ್ತುರಿ ಚಂದ್ರ ಹಣೆಯಲ್ಲಿಹುದು
ಸಂಜೆಯ ಶುಕ್ರ ಕಣ್ಣಲ್ಲಿಹುದು
ಬೆಳು ಬೆಳ್ದಿಂಗಳು ಗಲ್ಲದ ಮೇಲೆ
ಬಂದ ಬಂದ ಸಂತಂಮಂಣ

ಮೊದಲನೆ ಮಾತು ಹೂವಿನ ಮುತ್ತು
ಮರು ಮಾತಾಡಲು ಸಿಡುಲು ಗುಡುಗು
ಮೂರನೆ ಬಾರಿಗೆ ಆಣಿಕಲ್ಮಳೆಯು
ಬಂದ ಬಂದ ಸಂತಂಮ್ಮಣ್ಣ

ಬಾರೋ ಬಾರೋ ಸಿಡಿಲಿನ ಮರಿಯೆ
ಬಾರೋ ನಾಡಿನ ಸುಂಟರ ಗಾಳಿ
ತೋರೋ ಸಿರಿಮೊಗ ತುಂಟರ ಗುರುವೆ
ಬಂದ ಬಂದ ಸಣ್ಣ ತಮ್ಮಣ್ಣ
*****