ಹಳೆಯ ಪ್ರಶಸ್ತಿ ಗೊತ್ತೇ?

ಹಳೆಯ ಪ್ರಶಸ್ತಿ ಗೊತ್ತೇ?

ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಆದ್ದರಿಂದ ಇಂದಿನ ಮಕ್ಕಳೆಲ್ಲ ವಿಜ್ಞಾನದತ್ತ ಒಲವು ತೋರಿಸಬೇಕು. ಅದರಲ್ಲೂ ಭೌತವಿಜ್ಞಾನವನ್ನು ಅಭ್ಯಸಿಸಬೇಕು. ಜ್ಞಾನ ವಿಜ್ಞಾನದ ಮುನ್ನಡೆ ದೇಶದ ಮುನ್ನೆಡೆಯಾಗಿದೆ.

ಪ್ರತಿವರ್‍ಷ ಲಂಡನ್‌ನ ರಾಯಲ್ ಸೊಸೈಟಿ ನೀಡುವ ವಿಶ್ವದ ತೀರಾ ಹಳೆಯದಾದ ವಿಜ್ಞಾನ ಪ್ರಶಸ್ತಿಯಾದ ‘ಕೋಪ್ಲೆ ಮೆಡಲ್’ ಗೆ ಭೌತವಿಜ್ಞಾನಿ ಪೀಟರ್ ಹಿಗ್ಸ್ ಅವರು ಇತ್ತೀಚೆಗೆ ಆಯ್ಕೆಯಾಗಿರುವರು. ಅವರ ‘ದೇವಕಣ’ ಶೋಧನೆಗಾಗಿ ಈ ಪ್ರಶಸ್ತಿ ನೀಡಿದೆ.

ಪೀಟರ್ ಹಿಗ್ಸ್ ದೇವಕಣ ಕುರಿತು ೧೯೬೪ ರಲ್ಲೇ ತಮ್ಮ ಸಿದ್ಧಾಂತವನ್ನು ಮಂಡಿಸಿದ್ದರು. ಇದೇ ವೇಳೆಯಲ್ಲೇ ಫ್ರಾಂಸ್ವಾ ಎನ್‌ಗ್ಲೆರ್‍ಟ್ ಇದೇ ಸಿದ್ಧಾಂತದ ಮೇಲೆ ಕೆಲಸ ಮಾಡಿದ್ದರು!

ಹೀಗಾಗಿ ಹಲವು ಪ್ರಯೋಗಗಳ ನಂತರ ೨೦೧೨ ರಲ್ಲಿ ಹಿಗ್ಸ್ ಅವರ ಸಿದ್ಧಾಂತಕ್ಕೆ ಮಾನ್ಯತೆ ನೀಡಿದೆ ಎಂದು ವರದಿಯಾಗಿದೆ. ಈ ಮಹತ್ವದ ಸಾಧನೆಗಾಗಿ ಪೀಟರ್ ಹೀಗ್ಸ್- ಎನ್‌ಗ್ಲೆರ್‍ಟ್ ಫ್ರಾಂಸ್ವಾ ಅವರಿಗೆ ೨೦೧೩ ರಲ್ಲಿ ಜೋಡಿಯಾಗಿ ೨೦೧೩ ರಲ್ಲಿ ನೊಬೆಲ್ ಬಹುಮಾನ ನೀಡಿ ಗೌರವಿಸಲಾಗಿತ್ತು!

ಜ್ಞಾನ ವಿಜ್ಞಾನ ಕಾರ್‍ಯಕ್ಷೇತ್ರದಲ್ಲಿನ ತೀರಾ ಮಹತ್ವದ ಸಾಧನೆ ಮಾಡಿದವರಿಗಾಗಿ ರಾಯಲ್ ಸೊಸೈಟಿಯು ಈ ಪುರಸ್ಕಾರವನ್ನು ನೀಡಿ ಗೌರವಿಸುವುದು.

ಈಗಾಗಲೇ ಸ್ಟೀಫನ್ ಹಾಂಕಿಂಗ್, ಅಲೆಸ್ ಜೆಫ್ರಿ, ಆಂಡ್ರೆ ಜೆಮ್ ಮೊದಲಾದ ವಿಜ್ಞಾನಿಗಳಿಗೆ ಈ ಗೌರವ ಸಂದಿರುವುದು.

ವಿಜ್ಞಾನ ಕ್ಷೇತ್ರದಲ್ಲಿ ತೀರಾ ಹಳೆಯ ಪ್ರಶಸ್ತಿಯಾದ ಕೋಪ್ಲೆ ಮೆಡಲ್ ಪಡೆದ ಚಾರ್ಲ್ಸ್ ಡಾರ್ವಿನ್- ಅಲ್ಬರ್ಟ್ ಐನ್‌ಸ್ಟೀನ್ ಅವರ ಸಾಲಿಗೆ ಪೀಟರ್ ಹೀಗ್ಸ್ ವಯಸ್ಸು ೮೬ ವರ್ಷ ಇವರೂ ಈಗ ಸೇರ್‍ಪಡೆಯಾಗಿರುವರು.

ಮೊತ್ತ ಮೊದಲ ನೊಬೆಲ್ ಬಹುಮಾನ ನೀಡುವುದಕ್ಕಿಂತ ಸುಮಾರು ೧೭೦ ವರ್ಷಗಳಿಗೆ ಮೊದಲು ಅಂದರೆ ೧೭೩೧ ರಲ್ಲಿ ರಾಯಲ್ ಸೊಸೈಟಿಯು ಕೋಪ್ಲೆ ಮೆಡಲ್ ಪ್ರಶಸ್ತಿ ನೀಡಲು ಮೊದಲಾಯಿತು. ಹೀಗಾಗಿ ಇದು ವಿಜ್ಞಾನ ಕ್ಷೇತ್ರದ ಹಳೆಯ ಪ್ರಶಸ್ತಿ ಎಂಬ ಹಿರಿಮೆಯನ್ನು ಹೊಂದಿದೆ.

ವಿಜ್ಞಾನ ಕ್ಷೇತ್ರದಲ್ಲಿ ಸಾಧಿಸಿದ ಸಾಧಕರಿಗೆ ಹೀಗೆ ಪ್ರಶಸ್ತಿಗಳ ಸುರಿಮಳೆ ವಿಶ್ವದಾದ್ಯಂತ ಇದೆಯೆಂಬುದನ್ನು ನಾವು ನೀವು ಮನಗಾಣಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೇಳಿಸದ ಕರೆ
Next post ರನ್ನದುಡುಗುಣಿ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…