Home / Poem

Browsing Tag: Poem

ಒಮ್ಮೊಮ್ಮೆ ಎನಿಸುವುದು ಜೀವವಾರಿದಮೇಲೆ ಸುಖ ಸ್ವಪ್ನಗಳ ಬಿಂಬ ಮೂಡಬಹುದೆಂದು, ಕೊಳದ ನೀರಲೆಯಳಿದು ಮೌನದಲಿ ಮಲಗಿರಲು ಸೌಂದರ್ಯದಾಗಸವ ಬಿಂಬಿಸುವ ತೆರದಿ! ಆದರೆಂತೋ ಏನೋ ! ಅಂತಾದರೆನಿತು ಸುಖ; ಬಾಳ ದುಃಸ್ವಪ್ನವನು ಮರೆಯಬಹುದಾಗ; ಜೀವದೊಳಗಿಲ್ಲದುದ ಸ...

ಅಕ್ಕ ನಾನೊಂದು ಕೇಳಿದೆ ಅಕ್ಕ ನೀನೊಂದು ಹೇಳಿದೆ ನನ್ನ ವಿರೋಧಿ ನೀನಾದೆ ನಿನ್ನ ಸಹವಾಸ ನಾ ಮಾಡಲಾರೆ ನೀನು ವಿಚಾರ ಮಾಡು ಅಕ್ಕ ನಿನ್ನ ವಿರೋಧಿ ನಾ ನಾಗಲಾರೆ ನಿನ್ನ ಕನಸ್ಸು ನನಸಾಗಲಾರದು ನೀನು ನನ್ನ ಅಕ್ಕ ಎಂದೆಂದಿಗೂ ಅಕ್ಕ *****...

ಯಕ್ಷಿಗಳು ಹನ್ನೆರಡು ತಾಳೆಮರ ಹನ್ನೆರಡು ಮರಕ್ಕೊಂದರಂತೆ ಸುಖವಾಗಿದ್ದುವು ಆಹ! ಸುಖವಾಗಿದ್ದುವು ಎಲ್ಲಿಯ ತನಕ ಭಾರೀ ಬಿರುಗಾಳಿ ಹೊಡೆತಕ್ಕೆ ಒಂದು ಮರ ಕಿತ್ತು ಬೀಳುವ ತನಕ ಅಹ! ಕಿತ್ತುಬೀಳುವ ತನಕ ಯಕ್ಷಿಗಳು ಹನ್ನೆರಡು ತಾಳೆಮರ ಹನ್ನೊಂದು ಒಂದು ಯಕ...

ಹೆತ್ತವಳು ಹೊತ್ತವಳು ಎದೆಯ ರಕ್ತವ ಉಣಿಸಿ ಮಮತೆ ಧಾರೆಯ ಹರಿಸಿ ಬಾಳ ಬವಣೆಗೆ ಬಳಲಿ ಬೆಂಡಾಗಿ ನುಗ್ಗಾಗಿ ಕಷ್ಟಕ್ಕೆ ಕಲ್ಲಾಗಿ ಸೆಟೆದು ನಿಂತವಳು ನನ್ನಮ್ಮ ಕರುಳ ಕುಡಿಗಳಿಗಾಗಿ ದೇಹ ಸೋತರೂ ಹೋರಾಡಿ ಗೆದ್ದವಳು ಕಷ್ಟಕ್ಕೆ ಕಂಗೆಟ್ಟು ಬೆದರಿ ಬಂದಗ ಸರಿ...

ಕಣ್ಣಂಚಿನವರೆಗೆ ಬಂದು ಕೂತು ಕೇಳಿ ಬಿಡುತ್ತದೆ ಒಂದು ಮಾತು! ಒಳಗಿರಲೋ? ಹೊರಬರಲೋ? ಹೊರಬರಲು ಒಂದೇ ಮಿಟುಕು ಸಾಕು! ಒಳಹೋಗಲು ವರ್ಷಗಳು ಕಾಯಬೇಕು! ಹೊರಬಿದ್ದುದು ನೀರಾಗಿ ಒಂದೇ ಗಳಿಗೆಗೆ ಆವಿಯಾಗಿ ಸಾವು! ಒಳಗುಳಿದದ್ದು ಒಡಲಾಳದಲ್ಲೇ ಮಥಿಸಿ, ಮಥಿಸಿ...

ಗಗನ ಹರಿದು, ಭೂಮಿ ಮೆರೆದು; ಹಚ್ಚ ಹೊದಿಕೆ ಹೊದ್ದಿತು ಮುಗಿಲು ಮುತ್ತಿ; ಇಳೆಯನಪ್ಪಿ ಸಗ್ಗ ಸೋಗನ ಜೈಸಿತು ಕೃಷಿಯ ಕಾಮಧೇನು ತಾನು ಹರುಷದಿಂದ ಕರೆಯಿತು ಹಸಿದು ಬಿರಿದ ಧರೆಯ ಹೊಟ್ಟೆ ಹೊಳೆದು ಕಾಂತಿ ತಾಳಿತು ಸಗ್ಗ ಹೊಳೆಯು ಅಗ್ಗವಾಗಿ ಹಿಗ್ಗಿನಿಂದ ನ...

ಮೊದಮೊದಲೆಲ್ಲ ಈ ಮೋಡಗಳೊಳಗೆ ಬರೀ ಕಾವಿಧರಿಸಿ ಕಮಂಡಲ ಹಿಡಿದು ಋಷಿ ಮುನಿಗಳ ಸಮೂಹವೇ ಬಂದಂತಾಗಿ ಭೂ ಲೋಕದವರಿಗೆ ನೀರು ಸಿಂಪಡಿಸಿ ಸತ್ತವರನು ಉಳಿಸಿ ಆಶೀರ್ವದಿಸುವವರು ಕಾಣಿಸುತ್ತಿದ್ದರು- ನಂತರ ನಂತರ ಬುದ್ಧ, ಗಾಂಧಿ, ಹೀಗೆ ಹೀಗೆ- ತತ್ವ ಚಿಂತನೆಗಳ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...