ಹನಿಗವನ ಬುಗ್ಗೆಗಳು ಜರಗನಹಳ್ಳಿ ಶಿವಶಂಕರ್ July 18, 2022December 28, 2021 ಆರ್ಭಟಿಸಿ ಧುಮುಕುವ ಜಲಪಾತಗಳ ಎದುರು ನಾಚಿ ನಿಲ್ಲುವುದಿಲ್ಲ ನಗೆ ಚಿಮ್ಮುವ ಬುಗ್ಗೆಗಳು ***** Read More
ಹನಿಗವನ ನಾಯಿಪಾಡು ಶ್ರೀವಿಜಯ ಹಾಸನ July 17, 2022December 29, 2021 ಉದ್ಯೋಗಸ್ತ ಮಹಿಳೆಯರ ನೋಡು ಕತ್ತೆಗಿಂತಲೂ ಕೀಳು ನಾಯಿಪಾಡು ಒಳಗೂ ಹೊರಗೂ ಯಾಂತ್ರಿಕ ದುಡಿತ ಅರಿಯಲಾರರವಳ ಭಾವನೆಗಳ ಮಿಡಿತ ***** Read More
ಹನಿಗವನ ವ್ಯತ್ಯಾಸ ಪರಿಮಳ ರಾವ್ ಜಿ ಆರ್ July 16, 2022December 19, 2021 ಅಡುಗೆ ಮಾಡುವ ಭಟ್ಟರು ಹೊಟ್ಟೆ ಕೆಡುಸುತ್ತಾರೆ ವ್ಯಾಪಾರ ಮಾಡುವ ಶೆಟ್ಟರು ದುಡ್ಡು ಕೂಡಿಸುತ್ತಾರೆ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೩ ಶರತ್ ಹೆಚ್ ಕೆ July 15, 2022November 28, 2021 ನನ್ನ ಖಾಸಾ ಕೋಣೆಯೊಳಗೆ ಇಣುಕುವ ಧಾವಂತದಲ್ಲಿ ಅವಳು ತನ್ನ ಕಣ್ರೆಪ್ಪೆ ತೆರೆಯುವುದನ್ನೇ ಮರೆತುಬಿಟ್ಟಳು ***** Read More
ನಗೆ ಹನಿ ಒಟ್ಟಿಗೆ ತೈರೊಳ್ಳಿ ಮಂಜುನಾಥ ಉಡುಪ July 14, 2022February 27, 2022 ಗುಂಡ: "ನನಗೆ ಹತ್ತು ಜನ ಒಟ್ಟಿಗೆ ಹೊಡಿಯೋಕೆ ಬಂದ್ರು." ಪುಟ್ಟ: "ಹೌದಾ; ಆಮೇಲೆ" ಗುಂಡ: "ತಾಕತ್ ಇದ್ರೆ ಒಬ್ಬರೆ ಬನ್ನಿ ಅಂದೆ" . ಪುಟ್ಟ: "ಆಮೇಲೆ" ಗುಂಡ: "ಒಬ್ಬೊಬ್ರೆ ಬಂದು ಹೊಡೆದ್ರು..." ***** Read More
ಕವಿತೆ ಏನ ಕೊಡಲಿ ವೃಷಭೇಂದ್ರಾಚಾರ್ ಅರ್ಕಸಾಲಿ July 11, 2022January 22, 2022 ಏನ ಕೊಡಲಿ ನಿನಗೇ ನಾ ತಂದೆ ಏನನರ್ಪಿಸಿದರೆ ನಿನಗೇ ಪ್ರೀತಿಯೊ || ಪ || ಪೀಠವನರ್ಪಿಸಲೆ ಭೂಮಿಯೆ ಪೀಠ ಗುಡಿಯನು ಕಟ್ಟಿಸಲೆ ಗಗನವೆ ದೇಗುಲ ಜಲದಲಿ ತೊಳೆಯಲೆ ಸಾಗರ ನಿನ್ನದಯ್ಯ ಹೂಗಳ ಮುಡಿಸಲೆ ವನವೆಲ್ಲ... Read More
ಹನಿಗವನ ದಿಕ್ಸೂಚಿಗಳು ಜರಗನಹಳ್ಳಿ ಶಿವಶಂಕರ್ July 11, 2022December 28, 2021 ಬೆಳಕ ನೀಡದ ನಕ್ಷತ್ರಗಳು ಸಾಗರದಲ್ಲಿ ದಿಕ್ಸೂಚಿಗಳು ***** Read More
ಹನಿಗವನ ಮತಿಭ್ರಮಣೆ ಶ್ರೀವಿಜಯ ಹಾಸನ July 10, 2022December 29, 2021 ಅಯ್ಯೋ ಎಷ್ಟೊಂದು ವರದಕ್ಷಿಣೆ ವರನ ಕೊಳ್ಳಲು ಕೊಡಬೇಕು ದಕ್ಷಿಣೆ ವರನ ಅರಸಿ, ಹಾಕಿ ಭೂಪ್ರದಕ್ಷಿಣೆ ಸುತ್ತಿ ಸುತ್ತಿ ಆಯಿತು ಮತಿಭ್ರಮಣೆ ***** Read More
ಹನಿಗವನ ಹೆಣ್ಣು ಪರಿಮಳ ರಾವ್ ಜಿ ಆರ್ July 9, 2022December 19, 2021 ಒಲಿದರೆ ಹೆಣ್ಣು ಪ್ರೀತಿಯ ಕಣ್ಣು ಮುನಿದರೆ ಹೆಣ್ಣು ಮುಂಗೈ ಹುಣ್ಣು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೨ ಶರತ್ ಹೆಚ್ ಕೆ July 8, 2022November 28, 2021 ಮಲಗಿದ್ದ ಮನಸು ಮೇಲೆದ್ದಿದೆ ಅವಳ ಮುಗುಳುನಗೆಯ ಉದಯ ಕಣ್ತುಂಬಿಕೊಂಡಿದೆ ***** Read More