
ಕನ್ನಡವೆ ಆತ್ಮ ಕರ್ನಾಟಕ ದೇಹ ಬಿದ್ದರೆ ಚೂರಿ ದೇಹಕ್ಕೆ ಆತ್ಮಕೆ ಯಾವುದು ಗೇಹ? ನೀ ಹೇಳಬೇಕು ಕನ್ನಡಿಗ ದಿಟ್ಟಿಸಿ ನೋಡುತ ಈ ಜಗ || ಪ್ರತಿ ಕನ್ನಡಿಗರ ಮನೆ ಮೇಲೆ ಹಾರಿದೆ ಕನ್ನಡ ಬಾವುಟವು ಆ ಬಾವುಟದ ನೆರಳಿನಲಿ ಮಕ್ಕಳು ಇಂಗ್ಲಿಷ್ ಕಾನ್ವೆಂಟು ಎಲ್ಲ...
(ಸಿ. ಅಶ್ವತ್ಥ್ ಗೋಸ್ಕರ) ತಿಂಗಳ ಬೆಳಕಿಗೆ ಭಾವದ ಸೆಳಕಿಗೆ ಏತಕೊ ತುಂಬಿದೆ ನೋವಿನ ಅನಿಸಿಕೆ ಯಾರು ಬಂದರು ನನ್ನ ಬಳಿಗೆ ಯಾರೂ ಇಲ್ಲದ ವೇಳೆಗೆ ಅಂಥ ನೆನಪು ಇಂದು ಹೀಗೆ ಸುಳಿವುದೇ ಈ ತೆರದಲಿ ಯಾರು ನುಡಿದರು ನನ್ನ ಜತೆಗೆ ಯಾರೂ ನುಡಿಯದ ಮಾತನು ಅಂಥ ...
(ಶಿಶುನಾಳ ಷರೀಫ್ ಸಾಹೇಬರ ಸ್ಫೂರ್ತಿಯಿಂದ) ಯಾಕ ಫಿಕೃ ಮಾಡತಿ ಫಕೀರ ನೀ ನೋಡಿದವ ಬಹಳ ಊರ ಹಿಮಾಲಯಕ್ಕೆಂದು ಹೋದಿ ಅಲ್ಲಿ ಚಳಿಗೆ ಕೌದಿ ಹೊದ್ದಿ ಬಂತೇನು ನಿನಗ ನಿದ್ದಿ ಮೆಕ್ಕ ಮದೀನ ಸುತ್ತಿಬಂದಿ ರಾಮ ರಹೀಮ ಒಬ್ಬ ಅಂದಿ ತಿನಬಾರದ್ದೆಲ್ಲ ತಿಂದಿ ಹೆಂಡ...
ಬಿಸಿಲು ಕಂಡಿತು ಹಾಸಿಗೆ ಹಳೆಯ ದಿಂಬಿಗೆ ಹೊಸಾ ಹೊದಿಕೆ ಅತ್ತೆ ಮಾವನ ಪುಟಗಳು ಲಕಲಕ ಹೊಳೆದು ಹೂವ ಮುಡಿದವು ದೇವರಿಗೆ ದೀಪ ಹೊಸಿಲಿಗೆ ಕುಂಕುಮ ಬಾಗಿಲಿಗೆ ನೀರು ಚಿತ್ರಾನ್ನ, ಕೋಸಂಬರಿ ವಡೆ, ಪಾಯಸದಲಿ ಕಲ್ಲು ಸಿಗದಿರಲಿ ಎಂದು ಪ್ರಾರ್ಥನೆ! ಮಡಿಲು ತ...
ಬುದ್ಧ ಬಂದ ದಾರಿಯಲ್ಲಿ ನಾನು ಬಂದೆ ಬುದ್ಧ ನಿಂದ ದಾರಿಯಲ್ಲಿ ನಾನು ನಿಂದೆ ಬುದ್ಧ ಕೊನೆಗೆ ಹಿಡಿದ ದಾರಿ ಹಿಡಿಯದಾದೆ ಅವನು ಕಂಡ ಬೆಳಕ ನಾನು ಕಾಣದಾದೆ //ಪ// ಬುದ್ಧ ನುಡಿದ ಪ್ರತಿ ಮಾತು ಪಾರದರ್ಶಕ ಅದಕೆ ವ್ಯಾಖ್ಯಾನ ಗ್ರಂಥ ಅನಾವಶ್ಯಕ ನನ್ನ ಮೀರಿ...
(ಶಿಶುನಾಳ ಷರೀಫ್ ಸಾಹೇಬರನ್ನು ನೆನೆದು) ಕುಣಿಕುಣಿವಳು ನಮ್ಮ ಕುಂಬಾರಗಿತ್ತಿ ಕೈಕಾಲಿಗೆ ಕೆಂಪು ರಂಗು ಹತ್ತಿ ನೋವು ನಲಿವುಗಳೆಂಬ ಭೇದ ಮರೆತು ಮಣ್ಣಿಗೆ ಮಣ್ಣು ಹದನಾಗಿ ಬೆರೆತು ತಿರುಗಿಸಿ ಭೂಲೋಕದ ತಿಗರಿ ಅದರೊಳಗೆ ಸಂಸಾರವೆಂಬ ಬುಗರಿ ಹೊಟ್ಟೆ ಹಸಿ...
ಗಕ್ಕೆಂದು ನಿಂತೆ ಒಂದು ಚಣ ಶುರುವಾಯಿತು ಅನುಮಾನ ಅವತ್ತು ಇಡೀ ದಿನ ಬೆಕ್ಕಿನದೇ ಧ್ಯಾನ ಮೀನು ಮಾರುವವಳಿಗೆ ಮಾಯೆ ಕವಿದಿರಲು ಒಣ ಮೀನಿಗೂ ಜೀವ ಬಂದಿರಲು ಘಮ ಘಮಿಸಿ ಅದು ಲೋಕವನೆ ಸೆಳೆದಿರಲು ಪರಿಮಳದ ಪರಿಣಾಮ ಮೂಗರಳಿಸಿ ಬೆಕ್ಕು ಅಡ್ಡ ಹೋಯಿತು. ***...
ಕರುಣೆಯೆ ಬೆಳಕು ಎಂದನು ಬುದ್ಧ ಕರುಣೆಯಿಲ್ಲದ ಜಗದಂತ್ಯವು ಸಿದ್ಧ ಎಷ್ಟೋ ನಾಗರಿಕತೆಗಳ ಕತೆಗಳ ಎಷ್ಟೋ ರಾಜ್ಯದ ರಾಜರ ಚಿತೆಗಳ ಕಂಡಿತು ಇತಿಹಾಸದ ಕಣ್ಣು ಕೊಂಡಿತು ನಾವೀ ನಡೆಯುವ ಮಣ್ಣು ಮನುಷ್ಯ ಮನುಷ್ಯರ ನಡುವಿನ ಯುದ್ದ ಏನ ಗೆಲ್ಲಲು ಯಾರ ವಿರುದ್ದ ...














