ಹೊತ್ತು ತಂದ ಹೊರೆಯನ್ನು
ದಾರಿಯುದ್ದಕ್ಕು ಹೊತ್ತದ್ದು ಹೆಚ್ಚು
ಇಳಿಸಿದ್ದು ಕಡಿಮೆ.
ತುಂಬಾ ಹಿಂದುಳಿಯಿತು
ನನ್ನ ಸುಂದರ ನೀಲ ಆಕಾಶ!
ಜೀವನಾಂಕುರಿಸುವ
ನಗಿಸುವ
ಮಣ್ಣಿನ ಆಕರ್ಷಣೆ
ಸರಿದು ಹೋಯಿತು.
ಈ ರಿಕ್ತ ನಿವೃತ್ತಿ
ಹೊರೆಯಾಗಿ, ಮರೆಯಾಗಿ
ನನ್ನನ್ನು ಎಂತು
ಬರಡುಗೊಳಿಸಿತು
ಕೊನೆಗೂ ತಿಳಿಯದಾಯಿತು!
*****


















