ಕೇಳುತ್ತ ನೋಡುತ್ತಲೋದುತ್ತಲೆಷ್ಟೊಂದು
ತಿಳಿದೊಡಂ ಕಳಿತಾಗದದು ಸಾವಯವ
ತಿಳಿ ಸಾರಿಗಾದೊಡಂ ಆ ತಿಳಿವು ಸಲ್ಲ
ಕಳು ಮನವ ದಮನಿಸುತ ಮೈ
ಬಳಲೆ ಬೆವರಿದರದುವೆ ಸಾವಯವ – ವಿಜ್ಞಾನೇಶ್ವರಾ
*****